ಏರ್ ಇಂಡಿಯಾ: ಆರೇ ತಿಂಗಳಲ್ಲಿ ಸಾವಿರಾರು ಸಿಬ್ಬಂದಿ ನೇಮಿಸಿಕೊಂಡ ಏರ್‌ಲೈನ್ಸ್

ನವದೆಹಲಿ, ಏಪ್ರಿಲ್ 06: ಏರ್ ಇಂಡಿಯಾ ಏರ್‌ಲೈನ್ಸ್ ಸಂಸ್ಥೆಯು ತನ್ನ ವ್ಯಾಪ್ತಿಯಲ್ಲಿ ವಿವಿಧ ಹಂತದಲ್ಲಿ ಕಾರ್ಯನಿರ್ವಹಿಸಲು ಕಳೆದ ಕೆಲವೇ ತಿಂಗಳಲ್ಲಿ ಅತ್ಯಧಿಕ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿದೆ.

ಏರ್ ಇಂಡಿಯಾ ಏರ್‌ಲೈನ್ಸ್ ಸಂಸ್ಥೆ ವಿಮಾನ ಸಿಬ್ಬಂದಿ ಹಾಗೂ ಇತರ ಕಾರ್ಯಗಳಿಗಾಗಿ ಕಳೆದ 6 ತಿಂಗಳಿನಿಂದ ಈಚೆಗೆ 3,800ಕ್ಕೂ ಹೆಚ್ಚು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದೆ. ಈ ಸಂಬಂಧ ಗುರುವಾರ ಸ್ವತಃ ಏರ್ ಇಂಡಿಯಾ ಸುದ್ದಿಮಾಧ್ಯಮಗಳ ತಿಳಿಸಿದೆ.

Air India hired more than 3800 staff in last six months for aircraft maintenance and other functions

ಆರ್ಥಿಕವಾಗಿ ನಷ್ಟದಲ್ಲಿದ್ದ ಏರ್ ಇಂಡಿಯಾ ಸಂಸ್ಥೆಯನ್ನು ಕಳೆದ ವರ್ಷ 2022ರಲ್ಲಿ ಜನವರಿ ತಿಂಗಳಲ್ಲಿ ಟಾಟಾ ಗ್ರಾಪ್ ತನ್ನ ತೆಕ್ಕೆಗೆ ಪಡೆಯಿತು. ಇದಾದ ಬಳಿಕ ಟಾಟಾ ಸಂಸ್ಥೆ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಗಳಲ್ಲಿ 200ಮಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ. ಏರ್ ಇಂಡಿಯಾ ಸಂಸ್ಥೆಯಿಂದ ಅಸ್ತಿತ್ವದಲ್ಲಿರುವ ವಿಮಾನಗಳನ್ನು ಸಂಪೂರ್ಣವಾಗಿ ನವೀಕರಿಸಲು 400 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಟಾಟಾ ಸಂಸ್ಥೆ ಸಿದ್ಧವಾಗಿದೆ ಎಂದು ತಿಳಿದು ಬಂದಿದೆ.

ಏರ್ ಇಂಡಿಯಾ ವ್ಯಾಪ್ತಿ ವಿಮಾನಗಳ ಸಂಖ್ಯೆಯನ್ನು ಇನ್ನಷ್ಟು ವಿಸ್ತರಣೆ ಮಾಡುವ ಚಿಂತನೆಯು ನಡೆದಿದೆ. ಈ ಸಂಬಂಧ ಟಾಟಾ ಗ್ರೂಪ್ ಏರ್ ಇಂಡಿಯಾ ವಿಸ್ತರಣಾ ಯೋಜನೆಯ ಅಡಿಯಲ್ಲಿ 'ಬೋಯಿಂಗ್' ಹಾಗೂ 'ಏರ್‌ಬಸ್‌' ಸಹಿತಿ ಒಟ್ಟು 450ಕ್ಕೂ ಅಧಿಕ ಹೊಸ ವಿಮಾನಗಳಿಗೆ ಆರ್ಡರ್‌ ಸಹ ಮಾಡಿದೆ.

ಏರ್‌ ಇಂಡಿಯಾ ಬೆಳವಣಿಗೆಗೆ ಅಡಿಪಾಯ

ಆರ್ಥಿಕ ಸಂಕಷ್ಟದಲ್ಲಿದ್ದ ಏರ್ ಇಂಡಿಯಾವನ್ನು ಪುನಃ ಖರೀದಿಸಿದ ಟಾಟಾ ಗ್ರೂಫ್ ಬದಲಾವಣೆಯ ಇಂದಿನ ಕಾಲಘಟ್ಟದಲ್ಲಿ ಹಲವು ಸಮಸ್ಯೆಗಳನ್ನು ಪರಿಹರಿಸಿಕೊಂಡು ಉತ್ತಮ ಸೇವೆ ನೀಡುವತ್ತ, ಏರ್ ಇಂಡಿಯಾವನ್ನು ದೃಢವಾಗಿ ನಿಲ್ಲಿಸುವತ್ತ ಟಾಟಾ ಹೆಜ್ಜೆ ಇಟ್ಟಿದೆ. ಈ ಮೂಲಕ ಏರ್ ಇಂಡಿಯಾ ಏರ್‌ಲೈನ್ಸ್ ಬೆಳವಣಿಗೆಗೆ ಅಡಿಪಾಯ ಹಾಕಿದೆ ಎಂದು ಏರ್ ಇಂಡಿಯಾ ಸಿಇಒ ಮತ್ತು ಎಂಡಿ ಕ್ಯಾಂಪ್‌ಬೆಲ್ ವಿಲ್ಸನ್ ಅವರು ಮಾಹಿತಿ ನೀಡಿದ್ದಾರೆ.

Air India hired more than 3800 staff in last six months for aircraft maintenance and other functions

ಏರ್‌ಇಂಡಿಯಾ ಟಾಟಾ ಸಮೂಹದ ವ್ಯಾಪ್ತಿಗೆ ಬರುತ್ತಿದ್ದಂತೆ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುತ್ತಿದೆ. ಪ್ರತಿ ಪ್ರಯಾಣಿಕರಿಗೆ ಪ್ರಯಾಣ ವೇಳೆ ಅಗತ್ಯವಾಗಿ ಬೇಕಾಗುವ ಆದ್ಯತೆಗಳನ್ನು ಏರ್‌ ಇಂಡಿಯಾ ಪೂರೈಸುತ್ತಿದೆ. ಈ ಕಾರಣಕ್ಕೆ ಇದು ನಮ್ಮ ಏರ್ ಇಂಡಿಯಾ, ಅತ್ಯುತ್ತಮ ಸೇವೆ ನೀಡುತ್ತಿದೆ ಎಂದೆಲ್ಲ ಪ್ರಯಾಣಿಕರು ಬರೆದು ಟ್ವೀಟ್ ಮಾಡಿಕೊಂಡಿದ್ದಾರೆ.

ಏರ್‌ಲೈನ್ಸ್ ಸೇವೆ: ಖಷಿ ಹಂಚಿಕೊಂಡ ಮಹಿಳಾ ಪ್ರಯಾಣಿಕರು

ವಿಮಾನ ನಿಲ್ದಾಣಕ್ಕೆ ಬಂದ ತಕ್ಷಣದಿಂದ ನನ್ನ ಟಿಕೆಟ್ ಅನ್ನು ಪ್ರೀಮಿಯಂ ಎಕಾನಮಿಗೆ ಅಪ್‌ಗ್ರೇಡ್ ಮಾಡಿದ್ದಕ್ಕೆ ಪ್ರಯಾಣಿಕರಾದ ಗರಿಮಾ ನಾಥ್ ಎಂಬುವವರು ಸಂತಸ ಹಂಚಿಕೊಂಡಿದ್ದಾರೆ. ಈ ಏರ್ ಇಂಡಿಯಾ ವಿಮಾನದಲ್ಲಿ ಐಶಾರಾಮಿ ಸೌಲಭ್ಯವಿದೆ. ಇಲ್ಲಿನ ಮೂಲಸೌಕರ್ಯ ನಿರ್ವಹಣೆ ಕಂಡು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕ ಸ್ನೇಹಿಯಾಗಿ ಸೌಲಭ್ಯ ನೀಡುತ್ತಿದೆ ಎಂದು ಏರ್‌ಲೈನ್ಸ್ ಪ್ರಯಾಣದ ವೇಳೆ ನೀಡಿದ್ದ ಹೆಡ್‌ಫೋನ್, ಸ್ಮಾಲ್ ಪಿಲ್ಲೋ, ಆಸನ ವ್ಯವಸ್ಥೆ ಸೇರಿದಂತೆ ವಿಮಾನದಲ್ಲಿನ ಎಲ್ಲ ಸೌಲಭ್ಯಗಳ ಕುರತ ಫೋಟೊ ಮತ್ತು ವಿಡಿಯೋ ಅವರು ಹಂಚಿಕೊಂಡಿದ್ದಾರೆ.

ಸುಮಾರು ಒಂಬತ್ತು ದಶಕಗಳ (90 ವರ್ಷ) ಇತಿಹಾಸ ಹೊಂದಿರುವ ಮತ್ತು 'ಮಹಾರಾಜ' ಲಾಂಛನದಿಂದ ಗುರುತಿಸಿಕೊಂಡ ಏರ್‌ ಇಂಡಿಯಾ ಏರ್‌ಲಯನ್ಸ್ ಸಂಸ್ಥೆ 60,000 ಕೋಟಿ ರೂಪಾಯಿ ಆರ್ಥಿಕ ನಷ್ಟದಲ್ಲಿತ್ತು. ಇದನ್ನು ಮೇಲೆತ್ತಲು ಮಾಡಿದ ಸರ್ವ ಪ್ರಯತ್ನಗಳು ವಿಫಲಗೊಂಡಿರುವುದರಿಂದ ಸರ್ಕಾರ ಅದನ್ನು ಖಾಸಗೀಕರಣ ಮಾಡಿತು.

ನಂತರ ಸರ್ಕಾರ ಆಹ್ವಾನಿಸಿದ ಬಿಡ್‌ನಲ್ಲಿ ಅತ್ಯಧಿಕ ಪಾಲು ನಮೂದಿಸಿದ್ದ ಟಾಟಾ ಸಮೂಹ, ಕಂಪನಿಯನ್ನು ಮರಳಿ ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಏರ್‌ ಇಂಡಿಯಾ ಕಂಪನಿ ತನ್ನ ಕುಟುಂಬಕ್ಕೆ ಮರಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+