ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಿಂದ ಸೇಫ್ ಆಗಿ ಅಮೆರಿಕ ತಲುಪಿದ ಭಾರತದ ವಿಮಾನ!

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ನವದೆಹಲಿ: ಇಂಜಿನ್‌ ಕೈಕೊಟ್ಟ ಕಾರಣ ದಿಢೀರ್ ರಷ್ಯಾದಲ್ಲಿ ಲ್ಯಾಂಡ್ ಆಗಿದ್ದ ಭಾರತದ ಏರ್ ಇಂಡಿಯಾ ವಿಮಾನ, ಇದೀಗ ಸೇಫ್ ಆಗಿ ಅಮೆರಿಕ ತಲುಪಿದೆ. ಈ ಮೂಲಕ 216 ಪಯಾಣಿಕರು & 16 ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಕೆಲ ದಿನದಿಂದ ಭಾರಿ ಗೊಂದಲಕ್ಕೆ ಕಾರಣವಾಗಿದ್ದ ವಿಮಾನ ತುರ್ತು ಭೂಸ್ಪರ್ಷದ ಘಟನೆ ಅಂತೂ ಸುಖಾಂತ್ಯ ಕಂಡಿದೆ.

ಅಂದಹಾಗೆ ಮಂಗಳವಾರ ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ತಕ್ಷಣವೇ ರಷ್ಯಾದ ಮಗಡನ್ ಪ್ರದೇಶದಲ್ಲಿ ಬೋಯಿಂಗ್ 777-200 LR ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ 216 ಪಯಾಣಿಕರು ಹಾಗೂ 16 ಸಿಬ್ಬಂದಿಯನ್ನ ಹೊತ್ತು ಹೊರಟಿತ್ತು. ಆದರೆ ಅಮೆರಿಕ ತಲುಪಬೇಕಿದ್ದ ತಮ್ಮ ಏರ್ ಇಂಡಿಯಾ ವಿಮಾನ ರಷ್ಯಾಗೆ ತಲುಪಿದ್ದು ನೋಡಿ ಪ್ರಯಾಣಿಕರು ಭಯಗೊಂಡಿದ್ದರು. ಆದರೆ ವಿಮಾನ ಹೀಗೆ ದಿಢೀರ್ ಲ್ಯಾಂಡಿಂಗ್ ಆಗಲು ಕಾರಣ ಇಂಜಿನ್ ಸಮಸ್ಯೆ ಎಂಬುದು ಅರ್ಥವಾಗಿತ್ತು. ಬಳಿಕ ಎಲ್ಲಾ ಪ್ರಯಾಣಿಕರಿಗೂ ರಷ್ಯಾದಲ್ಲೇ ವ್ಯವಸ್ಥೆ ಕಲ್ಪಿಸಿತ್ತು ಏರ್ ಇಂಡಿಯಾ (Air India).

air india flight san francisco

ಒಂದು ವಿಮಾನ.. ಹಲವು ಅನುಮಾನ!

ಏರ್ ಇಂಡಿಯಾ ಬೇರೆ ವಿಮಾನ ವ್ಯವಸ್ಥೆ ಮಾಡಿ ತನ್ನ ಪ್ರಯಾಣಿಕರನ್ನ ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿಸಲು ಸಜ್ಜಾಗಿತ್ತು. ಈ ಕಾರಣಕ್ಕೆ ನಿನ್ನೆ ಪ್ರಯಾಣಿಕರಿಗೆ ಅಗತ್ಯ ಇರುವ ವಸ್ತುಗಳನ್ನು ಪೂರೈಸಿ ಏರ್ ಲಿಫ್ಟ್ ಮಾಡಲು ವ್ಯವಸ್ಥೆ ಕಲ್ಪಿಸಿತ್ತು. ಮೊದಲು ಪ್ರಯಾಣಿಕರಿಗೆ ಬೇಕಿರುವ ಆಹಾರ ಮತ್ತು ವಸ್ತುಗಳನ್ನ ಏರ್ ಇಂಡಿಯಾ ಪೂರೈಕೆ ಮಾಡಿತ್ತು. ಇನ್ನು ಈ ಸಂದರ್ಭದಲ್ಲಿ ಅಮೆರಿಕ ತಲುಪಬೇಕಿದ್ದ ವಿಮಾನ ರಷ್ಯಾಗೆ ಹೋಗಿದ್ದು ಯಾಕೆ? ಅನ್ನೋ ಪ್ರಶ್ನೆ ಜಗತ್ತನ್ನ ಕಾಡುತ್ತಿತ್ತು. ಅದರಲ್ಲೂ ಅಮೆರಿಕ ಸರ್ಕಾರ ಈ ಘಟನೆ ನಂತರ ಒಂದು ಕಣ್ಣು ಇಟ್ಟಿತ್ತು.

ಏರ್ ಇಂಡಿಯಾ ವಿಮಾನ ರಷ್ಯಾದಲ್ಲಿ ತುರ್ತು ಭೂಸ್ಪರ್ಶ: ಎಂಜಿನ್‌ನಲ್ಲಿ ತಾಂತ್ರಿಕ ದೋಷಏರ್ ಇಂಡಿಯಾ ವಿಮಾನ ರಷ್ಯಾದಲ್ಲಿ ತುರ್ತು ಭೂಸ್ಪರ್ಶ: ಎಂಜಿನ್‌ನಲ್ಲಿ ತಾಂತ್ರಿಕ ದೋಷ

ಪರದಾಡಿದ್ದ ನೂರಾರು ಪ್ರಯಾಣಿಕರು

ಏರ್ ಇಂಡಿಯಾಗೆ ಸೇರಿದ ಬೋಯಿಂಗ್ 777-200 LR ವಿಮಾನ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದವರು ಸಮಸ್ಯೆಗೆ ಸಿಲುಕಿದ್ದರು. ಕೆಲವರದ್ದು ಕಾಲೇಜ್ ಇತ್ತು, ಇನ್ನೂ ಕೆಲವರು ಕೆಲಸದ ಮೇಲೆ ಅಮೆರಿಕಗೆ ಹೊರಟಿದ್ರು. ಆದರೆ ವಿಮಾನದ ತಾಂತ್ರಿಕ ದೋಷ ಅವರ ಪ್ಲ್ಯಾನ್ ಹಾಳು ಮಾಡಿತ್ತು. ಹೀಗಾಗಿ ರಷ್ಯಾದಲ್ಲಿ ಕುಳಿತು ಭಾರತೀಯ ಪ್ರಯಾಣಿಕರು ಪರದಾಡಿದ್ದರು. ಕೆಲಸಗಳಿಗೆ ತೆರಳಬೇಕಿದ್ದ ಉದ್ಯೋಗಿಗಳು ಕೂಡ ಆದಷ್ಟು ಬೇಗ ನಮ್ಮ ಜಾಗ ತಲುಪಿದರೆ ಸಾಕು ಅನ್ನುವಂತಾಗಿದೆ. ಇದೀಗ AI173D ವಿಮಾನದ ಮೂಲಕ ಪ್ರಯಾಣಿಕರನ್ನ ಸುರಕ್ಷಿತವಾಗಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿಸಲಾಗಿದೆ.

air india flight san francisco

ಪ್ರಯಾಣಿಕರಿಗೆ ವಸತಿ, ಆಹಾರದ ಸಮಸ್ಯೆ?

ಇನ್ನು ದಿಢೀರ್ ಯಾವುದೋ ದೇಶದಲ್ಲಿ ಇಳಿದ ಪರಿಣಾಮ ಪ್ರಯಾಣಿಕರು ಪರದಾಡಿಬಿಟ್ಟರು. ಪ್ರಮುಖವಾಗಿ ಎದುರಾದ ಸಮಸ್ಯೆ ಆಹಾರದ್ದು. ಮಹಿಳೆಯರು, ಮಕ್ಕಳು, ವೃದ್ಧರಿಗೆ ನೆಲದ ಮೇಲೆ ಮಲಗಲು ವ್ಯವಸ್ಥೆ ಮಾಡಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು, ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಕೆಲ ವಿಡಿಯೋಗಳು ಕೂಡ ಹರಿದಾಡಿದ್ದವು. ಆದರೆ ಎಲ್ಲ ಸಮಸ್ಯೆ ಅರಿತು ಏರ್ ಇಂಡಿಯಾ ಸಂಸ್ಥೆ ನಿನ್ನೆ ಹೊಸ ವಿಮಾನದ ವ್ಯವಸ್ಥೆ ಮಾಡಿತ್ತು. ಈಗ ತನ್ನ ಗುರಿ ತಲುಪುವಲ್ಲಿ ವಿಮಾನ ಯಶಸ್ವಿಯಾಗಿದೆ.

ಅಲರ್ಟ್ ಆಗಿತ್ತು ದೊಡ್ಡಣ್ಣ ಅಮೆರಿಕ!

ರಷ್ಯಾ ಮತ್ತು ಅಮೆರಿಕ ಶತ್ರು ರಾಷ್ಟ್ರಗಳು. ಅದ್ರಲ್ಲೂ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿ ದಾಳಿ ಮಾಡುತ್ತಿದೆ. ಈ ಘಟನೆ ನಂತರ ಎರಡೂ ದೇಶಗಳ ಮಧ್ಯೆ ಕಿರಿಕ್ ಬಲು ಜೋರಾಗಿದೆ. ಹೀಗಿದ್ದಾಗ ದಿಢೀರ್ ಅಮೆರಿಕಗೆ ತೆರಳಬೇಕಿದ್ದ ವಿಮಾನ, ತಾಂತ್ರಿಕ ದೋಷದ ಕಾರಣ ರಷ್ಯಾಗೆ ತೆರಳಿದೆ. ಹೀಗಾಗಿ ಅಮೆರಿಕ ಕೂಡ ಘಟನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎನ್ನಲಾಗಿತ್ತು. ಹಾಗೇ ಇನ್ನೊಂದು ಕಡೆ ಏರ್ ಇಂಡಿಯಾ ಕೂಡ ಘಟನೆ ಕುರಿತು ಸಂಪೂರ್ಣ ಮಾಹಿತಿ ನೀಡಿದೆ. ವಿಮಾನದ ಇಂಜಿನ್ ತಾಂತ್ರಿಕ ದೋಷದ ಕಾರಣಕ್ಕೆ ನಡೆದ ಘಟನೆ ಇದಾಗಿದೆ.

English summary
Air India flight successfully reached San Francisco.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X