ಸರಕಾರವೇ ಮಾಡಲಿದೆಯಂತೆ ರಿಯಲ್ ಎಸ್ಟೇಟ್ ವ್ಯವಹಾರ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 26: ಏರ್ ಪೋರ್ಟ್, ಮೆಟ್ರೋ, ಎಕ್ಸ್ ಪ್ರೆಸ್ ವೇ ಬರುವಂಥ ಸ್ಥಳಗಳಲ್ಲಿ ಹಣ ಹೂಡುವ ಆಲೋಚನೆ ಮಾಡಿದ್ದಾರಾ? ಹೀಗೆ ದುಡ್ಡು ಹಾಕಿ, ಹಾಗೆ ಹಣ ದುಪ್ಪಟ್ಟು ಮಾಡಿಕೊಳ್ಳುವ ಜಾಣ ಆಲೋಚನೆ ನಿಮ್ಮದಾ? ತಡ್ಕಳಿ, ಸರಕಾರದ ಯೋಜನೆಗಳಿಂದ ಭೂಮಿಗೆ ಚಿನ್ನದ ದರ ಬರುವ ಜಾಗಗಳಲ್ಲಿ ಖರೀದಿದಾರರಿಗೆ 'ಅಭಿವೃದ್ಧಿ ಶುಲ್ಕ' ವಿಧಿಸುವ ಚಿಂತನೆಯಲ್ಲಿದೆ.

ಇದನ್ನು ವ್ಯಾಲ್ಯೂ ಕ್ಯಾಪ್ಚರ್ ಫೈನಾನ್ಸ್ (ವಿಸಿಎಫ್) ಎಂದು ಹೆಸರಿಸಲಾಗುತ್ತದೆ. ಹಲವು ದೇಶಗಳಲ್ಲಿ ಸ್ಥಳೀಯ ಮೂಲಸೌಕರ್ಯಕ್ಕಾಗಿ ಹಣ ಎತ್ತುವ ಮಾದರಿಯೇ ಇದು. ಈ ಯೋಜನೆಯನ್ನು ಸರಕಾರ ಏಪ್ರಿಲ್ 1ರಿಂದ ಜಾರಿಗೆ ತರುವ ಸಾಧ್ಯತೆ ಇದೆ. ಅಭಿವೃದ್ಧಿ ಶುಲ್ಕವನ್ನು ವಸೂಲಿ ಮಾಡುವ ವಿಧಾನ ಹಾಗೂ ಅಭಿವೃದ್ಧಿ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಯಿಂದ ಹಣ ಸಂಗ್ರಹಿಸಬೇಕೋ ಎಂಬ ಬಗ್ಗೆ ಚಿಂತನೆ ನಡೆದಿದೆ.[ಭರವಸೆ ಕೊಡ್ತೀನಿ ಒಬ್ರನ್ನೂ ಬಿಡಲ್ಲ : ಭ್ರಷ್ಟರಿಗೆ ಮೋದಿ ಎಚ್ಚರಿಕೆ]

Real estate

ಈ ರೀತಿ ಶುಲ್ಕ ವಿಧಿಸುವ ಮೂಲಕ ಸಂಗ್ರಹ ಆಗುವ ಹಣವನ್ನು ಅದೇ ಪ್ರದೇಶದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಬಳಸಲಾಗುತ್ತದೆ. ಮತ್ತು ಈ ರೀತಿ ಅಭಿವೃದ್ಧಿ ಶುಲ್ಕವನ್ನು ಇಂತಿಷ್ಟು ಅವಧಿಗೆ ಅಂತ ಮಾತ್ರ ಸಂಗ್ರಹಿಸಲಾಗುತ್ತದೆ. ಉದಾಹರಣೆಗೆ ಐದು ಅ, ಮೂರು ಅಥವಾ ಏಳು ವರ್ಷ.[ರಾಜಕೀಯ ಲಾಭಕ್ಕಾಗಿ ಏನೋ ಮಾಡಿಬಿಡುವ ಹಪಹಪಿ ಇಲ್ಲ: ಪ್ರಧಾನಿ]

ಇನ್ನೊಂದು ರೀತಿ ಹೇಗೆಂದರೆ ಸರಕಾರವೇ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕೈ ಹಾಕಿದಂತೆ. ಅಂದರೆ ಆ ನಿರ್ದಿಷ್ಟ ಯೋಜನೆ ಜಾರಿಗೆ ಬರುವ ಸುತ್ತಮುತ್ತಲ ಪ್ರದೇಶದ ಜಾಗವನ್ನು ತನ್ನ ವಶದಲ್ಲೇ ಇಟ್ಟುಕೊಂಡು, ಸಂಪೂರ್ಣ ಅಭಿವೃದ್ಧಿಯಾದ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Do you plan to buy property in an area where an airport, metro, expressway or port would come up and double your investment? Think again. If an area is likely to develop due to an upcoming government infrastructure project, the government may charge the buyer a "betterment fee".
Please Wait while comments are loading...