ನಕಲಿ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿ: ದೆಹಲಿ ನಂ 1, ಕರ್ನಾಟಕ ನಂ 4

ನವದೆಹಲಿ, ಆಗಸ್ಟ್ 02: ದೇಶದೆಲ್ಲೆಡೆ ಮಾನ್ಯತೆ ಪಡೆಯದೆ ನಡೆಸುತ್ತಿರುವ ನಕಲಿ ಇಂಜಿನಿಯರಿಂಗ್ ಕಾಲೇಜುಗಳ ಪಟ್ಟಿಯನ್ನು ಅಖಿಲ ಭಾರತ ಪರಿಷತ್(ಎಐಸಿಟಿಇ) ಪ್ರಕಟಿಸಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಅವರು ಲೋಕಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರು.

ಭಾರತದಲ್ಲಿ ಸದ್ಯದ ಲೆಕ್ಕದಂತೆ ಸುಮಾರು 277 ನಕಲಿ ಇಂಜಿನಿಯರಿಂಗ್ ಕಾಲೇಜುಗಳಿವೆ. ಈ ಪೈಕಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ 66 ನಕಲಿ ವಿದ್ಯಾಸಂಸ್ಥೆಗಳು, ಇಂಜಿನಿಯರಿಂಗ್ ಹಾಗೂ ತಾಂತ್ರಿಕ ಶಿಕ್ಷಣ ಕೋರ್ಸ್‌ಗಳನ್ನು ನೀಡುತ್ತಿವೆ.

ದೆಹಲಿ ನಂತರದ ಸ್ಥಾನದಲ್ಲಿ ತೆಲಂಗಾಣ ಹಾಗೂ ಪಶ್ಚಿಮಬಂಗಾಳದಲ್ಲಿ ಕ್ರಮವಾಗಿ 35 ಹಾಗೂ 27 ನಕಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಹೊಂದಿವೆ. ಕರ್ನಾಟಕದಲ್ಲಿ 23 ಇಂಥ ವಿದ್ಯಾಸಂಸ್ಥೆಗಳಿದ್ದು, ನಾಲ್ಕನೇ ಸ್ಥಾನದಲ್ಲಿದೆ.

AICTE releases list of 277 fake engineering colleges

ಉತ್ತರಪ್ರದೇಶ(22), ಹರ್ಯಾಣ(18), ಮಹಾರಾಷ್ಟ್ರ(16) ಹಾಗೂ ತಮಿಳುನಾಡು(11)ರಾಜ್ಯಗಳು ನಂತರದ ಸ್ಥಾನದಲ್ಲಿವೆ.

ಅಖಿಲ ಭಾರತ ಪರಿಷತ್(ಎಐಸಿಟಿಇ)ಯಿಂದ ತಾಂತ್ರಿಕ ಶಿಕ್ಷಣ ಬೋಧನೆ ಅನುಮೋದನೆ ಪಡೆಯದೆ, ಇಂಜಿನಿಯರಿಂಗ್ ಕೋರ್ಸ್‌ಗಳನ್ನು ನೀಡುತ್ತಿರುವ ನಿದರ್ಶನಗಳು ಸರಕಾರದ ಗಮನಕ್ಕೆ ಬಂದಿದೆ ಎಂದು ಕೇಂದ್ರ ಸಚಿವ ಸತ್ಯ ಪಾಲ್ ಸಿಂಗ್ ಹೇಳಿದ್ದರು. ಎಐಸಿಟಿಇಯಿಂದ ಅನುಮತಿಯನ್ನು ಪಡೆಯಬೇಕು ಇಲ್ಲದಿದ್ದರೆ, ಶಿಕ್ಷಣ ಸಂಸ್ಥೆ ಮುಚ್ಚಬೇಕು ಎಂದು ಇಲ್ಲವಾದರೆ ಅಂಥ ಸಂಸ್ಥೆ ಮುಚ್ಚಲಾಗುತ್ತದೆ ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+