ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಟ್ವಿಟ್ಟರ್ ಖಾತೆಗೆ ಕನ್ನ: ಟ್ವಿಟ್ಟರ್ ನಲ್ಲಿ ಲೇವಡಿಯ ಪರಮಾವಧಿ!

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಗೆ ಹ್ಯಾಕರ್ಸುಗಳು ಕನ್ನ ಹಾಕಿದ ಘಟನೆ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಗೊಳಗಾಗಿದೆ ಮತ್ತು ಟ್ವೀಟಿಗರು ಲೇವಡಿ ಮಾಡುತ್ತಿದ್ದಾರೆ.

By Balaraj
|
Google Oneindia Kannada News

ನವದೆಹಲಿ, ಡಿ 1: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಟ್ವಿಟ್ಟರ್ ಖಾತೆಗೆ ಹ್ಯಾಕರ್ಸುಗಳು ಕನ್ನ ಹಾಕಿದ ಘಟನೆ ಟ್ವಿಟ್ಟರ್ ನಲ್ಲಿ ಭಾರೀ ಚರ್ಚೆಗೊಳಗಾಗಿದೆ ಮತ್ತು ರಾಹುಲ್ ಗಾಂಧಿ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ನಲ್ಲಿದೆ.

ರಾಹುಲ್ ಗಾಂಧಿ ಖಾತೆಯನ್ನು ಹ್ಯಾಕ್ ಮಾಡಿರುವ ವಿಚಾರದಲ್ಲಿ ಕೆಲವೊಂದು ಟ್ವೀಟ್ ಸಂದೇಶಗಳು ಲೇವಡಿಯ ಪರಮಾವಧಿಯಾಗಿದ್ದು, ಇದು ನನ್ನ ಟ್ವಿಟ್ಟರ್ ಜೀವನದ ಅತ್ಯಂತ ಹಾಸ್ಯದ ಘಟನೆಯೆಂದು ಕೆಲವರು ಕಾಲೆಳೆದಿದ್ದಾರೆ.

ರಾಹುಲ್ ಗಾಂಧಿಯವರ ಅಧಿಕೃತ @OfficeOfRG ಟ್ವಿಟ್ಟರ್ ಹ್ಯಾಂಡಲ್ ಹ್ಯಾಕ್ ಮಾಡಿ ನಂತರ ಆಕ್ಷೇಪಾರ್ಹ ಬರಹಗಳನ್ನು ಟ್ವೀಟ್‌ ಮಾಡಲಾಗಿತ್ತು. (ರಾಹುಲ್ ಟ್ವಿಟ್ಟರ್ ಖಾತೆಗೆ ಕನ್ನ)

ಸೈಬರ್‌ ಅಪರಾಧ ವಿಭಾಗದ ಪೊಲೀಸರಿಗೆ ಎಐಸಿಸಿಯ ಸಂವಹನ ವಿಭಾಗ ದೂರು ನೀಡಿದ್ದರೂ, ಅಳಿಸಿದಂತೆ ಮತ್ತೆ ಮತ್ತೆ ಹೊಸ ಟ್ವೀಟ್‌ ಮಾಡಲಾಗುತ್ತಿತ್ತು. ಈಗ ಎಲ್ಲಾ ಆಕ್ಷೇಪಾರ್ಹ ಮತ್ತು ನಿಂದನಾತ್ಮಕ ಟ್ವೀಟ್ ಗಳನ್ನು ಡಿಲಿಟ್ ಮಾಡಿ ಖಾತೆಯನ್ನು ಸಮಸ್ಥಿತಿಗೆ ತರಲಾಗಿದೆ.

ಸರಕಾರ ಡಿಜಿಟಲ್ ಸುರಕ್ಷತೆಯ ಬಗ್ಗೆ ಯೋಚಿಸಬೇಕಾಗಿದೆ, ಇದೊಂದು ಗಂಭೀರ ವಿಚಾರವೆಂದು ಕಾಂಗ್ರೆಸ್‌ ಪಕ್ಷದ ಸಂವಹನ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ. ರಾಹುಲ್ ಗಾಂಧಿಯವರನ್ನು ಲೇವಡಿ ಮಾಡಿರುವ ಕೆಲವೊಂದು ಟ್ವೀಟ್ ಸ್ಯಾಂಪಲ್ ಗಳು, ಮುಂದೆ ಓದಿ..

ಹ್ಯಾಕ್ ಮಾಡಿ ಟ್ವೀಟ್ ಮಾಡಿದ್ದು ಹೀಗೆ

ಹ್ಯಾಕ್ ಮಾಡಿ ಟ್ವೀಟ್ ಮಾಡಿದ್ದು ಹೀಗೆ

ಭ್ರಷ್ಟಾಚಾರ ಮತ್ತು ತಮ್ಮ ಕುಟುಂಬದ ಬಗ್ಗೆ, ರಾಜಕೀಯದಲ್ಲಿನ ಜ್ಞಾನದ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ರಾಹುಲ್ ಅಕೌಂಟಿನಿಂದ ಹ್ಯಾಕರ್ಸಗಳು ಟ್ವೀಟ್ ಮಾಡಿದ್ದರು.

ಚೋಟಾ ಭೀಮ್

ಚೋಟಾ ಭೀಮ್

ಚೋಟಾ ಭೀಮ್ ಎಂದು ಪಾಸ್ವರ್ಡ್ ಕೊಟ್ಟರೆ ಹೀಗೇ ಆಗೋದು.

ನೋಟು ನಿಷೇಧ

ಡಿಜಿಟಲ್, ನೋಟು ನಿಷೇಧದ ವಿಚಾರ ಹಳಿತಪ್ಪಲು ಕಾಂಗ್ರೆಸ್ ಈ ನಾಟಕವಾಡುತ್ತಿದೆ.

ಸೋನಿಯಾ ಗಾಂಧಿ

ಸೋನಿಯಾ ಗಾಂಧಿ

ರಾಹುಲ್ ಗಾಂಧಿ ಅಕೌಂಟ್ ಹ್ಯಾಕ್ ಆಗಿದೆಯೋ ಅಥವಾ ಅವರ ತಾಯಿ ಅಲ್ಲಿರದೇ ಇದ್ದದ್ದಕ್ಕೆ ಹೀಗೆ ಆಗಿದೆಯೋ?

ಹ್ಯಾಕ್ ಬಗ್ಗೆ ಲೇವಡಿಯ ಪರಮಾವಧಿ

ಹಲೋ ಕೇಜ್ರಿವಾಲ್, ನನ್ನ ಅಕೌಂಟ್ ಹ್ಯಾಕ್ ಆಗಿದೆ, ನೋಟು ನಿಷೇಧವೇ ಇದಕ್ಕೆ ಕಾರಣವೆಂದು ಹೇಳಬಹುದೇ?

ಟ್ವಿಟ್ಟರ್ ಅಕೌಂಟ್

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿದೆ. ಇಂಡಿಯಾ ಟುಡೇ ಟ್ವೀಟ್.

English summary
AICC Vice President Rahul Gandhi twitter account hacked, funny tweets on the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X