ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಶರ್ಮಾ ಶೂಟ್ ಮಾಡುವ ಎಐ ವಿಡಿಯೋ, ವ್ಯಾಪಕ ವಿರೋಧ
ಗುವಾಹಟಿ: ಅಸ್ಸಾಂ ಸೇರಿದಂತೆ ದೇಶದ ಐದು ಪ್ರಮುಖ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ವಿಧಾನಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಸ್ಥಳೀಯ ಪಕ್ಷಗಳು ಈಗಾಗಲೇ ಭರ್ಜರಿ ಸಿದ್ಧತೆ ಪ್ರಾರಂಭಿಸಿವೆ. ಆದರೆ ಅಸ್ಸಾಂನ ಬಿಜೆಪಿ ಘಟಕವು ಚುನಾವಣೆ ಸಮೀಪದಲ್ಲೇ ಭಾರೀ ವಿವಾದವೊಂದನ್ನು ಮೈ ಮೇಲೆ ಎಳೆದುಕೊಂಡಿದೆ.
ಬಿಜೆಪಿಯ ಅಸ್ಸಾಂ ಘಟಕವು ಶನಿವಾರ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್ವೊಂದು ವಿವಾದಕ್ಕೆ ಕಾರಣವಾಗಿದೆ. ವಿವಾದಾತ್ಮಕ ಮತ್ತು ದ್ವೇಷಪೂರಿತ ವೀಡಿಯೊವನ್ನು ಪೋಸ್ಟ್ ಮಾಡಲಾಗಿದ್ದು, ದೇಶದಾದ್ಯಂತ ಈ ವಿಡಿಯೋಗೆ ಭಾರೀ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, ಮುಸ್ಲಿಮ್ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು (ಫೋಟೋಗಳಿಗೆ) ಸಾಂಕೇತಿಕವಾಗಿ ಗುಂಡು ಹಾರಿಸುತ್ತಿರುವಂತೆ ಇದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ವಿಡಿಯೋ ಹಂಚಿಕೊಂಡಿದ್ದ ಅಸ್ಸಾಂ ಬಿಜೆಪಿ ಘಟಕವು ಕೆಲವೇ ಕ್ಷಣಗಳಲ್ಲಿ ಸೋಷಿಯಲ್ ಮೀಡಿಯಾ ಎಕ್ಸ್ನಿಂದ ವಿಡಿಯೋ ಡಿಲೀಟ್ ಮಾಡಿದೆ.

ವೈರಲ್ ಆಗುತ್ತಿರುವ ವಿಡಿಯೋ - ಸ್ಕ್ರೀನ್ ಶಾಟ್
ಇನ್ನು ಸೋಷಿಯಲ್ ಮೀಡಿಯಾ ಎಕ್ಸ್ ಹಾಗೂ ಫೇಸ್ಬುಕ್ ಸೇರಿದಂತೆ ಹಲವು ಮಾಧ್ಯಮಗಳಲ್ಲಿ ಈ ವೈರಲ್ ವಿಡಿಯೋ ಹಾಗೂ ಅದರ ಸ್ಕ್ರೀನ್ಶಾಟ್ ಹಂಚಿಕೊಂಡು ಜನ ಪ್ರಶ್ನೆ ಮಾಡುತ್ತಿದ್ದಾರೆ. ಅಲ್ಲದೇ ವಿರೋಧ ಪಕ್ಷಗಳು ಈ ವಿಚಾರಕ್ಕೆ ಬಿಜೆಪಿ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.
ಪೋಸ್ಟ್ನಲ್ಲಿ ಏನಿತ್ತು ?
ಅಸ್ಸಾಂ ಬಿಜೆಪಿ ಘಟಕವು ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಹಂಚಿಕೊಂಡಿದ್ದ ಪೋಸ್ಟ್ನಲ್ಲಿ ಪಾಯಿಂಟ್ ಬ್ಲಾಂಕ್ ರೇಂಜ್ ಎನ್ನುವ ಶೀರ್ಷಿಕೆಯನ್ನು ಬಳಸಲಾಗಿತ್ತು. ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಬಂದೂಕುಗಳನ್ನು ಹಿಡಿದುಕೊಂಡು ಮುಸ್ಲಿಮರನ್ನು ಗುರಿಯಾಗಿ ಗುಂಡು ಹಾರಿಸುತ್ತಿರುವಂತೆ AI- ರಚಿತ ದೃಶ್ಯಗಳನ್ನು ಬಸಲಾಗಿತ್ತು. ಇದು ವೈರಲ್ ಆಗಿದ್ದು, ವ್ಯಾಪಕವಾದ ಆಕ್ರೋಶ ವ್ಯಕ್ತವಾಗಿದೆ.
ಎಐಸಿಸಿ ಕಾರ್ಯದರ್ಶಿ, ಸಂಸದ ಕೆ.ಸಿ ವೇಣುಗೋಪಾಲ್ ಅವರು, ಬಿಜೆಪಿಯ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯೊಂದು ಅಲ್ಪಸಂಖ್ಯಾತರ ಮೇಲೆ ಗುರಿಯಿಟ್ಟು, "ಪಾಯಿಂಟ್-ಬ್ಲಾಂಕ್" ಆಗಿ ಹತ್ಯೆ ಮಾಡುವುದನ್ನು ತೋರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದೆ. ಇದು ನರಮೇಧಕ್ಕೆ (ಜನಾಂಗಹತ್ಯೆಗೆ) ಕರೆ ನೀಡುವಂತದ್ದು, ಈ ಫ್ಯಾಸಿಸ್ಟ್ ಆಡಳಿತವು ದಶಕಗಳಿಂದ ಹೊಂದಿರುವ ಕನಸು ಇದಾಗಿದೆ. ಇದು ಟ್ರೋಲ್ ವಿಷಯವಾಗಿ ನಿರ್ಲಕ್ಷಿಸಬೇಕಾದ ವೀಡಿಯೊ ಅಲ್ಲ.
ನರೇಂದ್ರ ಮೋದಿ ಇದನ್ನು ಖಂಡಿಸುತ್ತಾರೆ ಅಥವಾ ಈ ವಿಚಾರದಲ್ಲಿ ಕ್ರಮ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇಲ್ಲ, ಆದರೆ ನ್ಯಾಯಾಂಗವು ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬೇಕು ಮತ್ತು ಈ ಪ್ರಕರಣದಲ್ಲಿ ಯಾವುದೇ ದಯೆ ತೋರಿಸಬಾರದು ಎಂದು ಆಗ್ರಹಿಸಿದ್ದಾರೆ.
ಇನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇಥ್ ಅವರು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಮುಸ್ಲಿಂ ಪುರುಷರ ಮೇಲೆ ಗುಂಡು ಹಾರಿಸುವಂತೆ ತೋರಿಸುವ 'POINT BLANK SHOT' ಶೀರ್ಷಿಕೆಯಿರುವ ವಿಡಿಯೋವನ್ನು ಅಳಿಸುವುದಷ್ಟೇ ಸಾಕಾಗುವುದಿಲ್ಲ. (ಈ ವಿಡಿಯೋವನ್ನು ಅಸ್ಸಾಂ ಬಿಜೆಪಿ ಘಟಕವು ಡಿಲೀಟ್ ಮಾಡಿದೆ).ಇದೇ ಬಿಜೆಪಿ ಪಕ್ಷದ ನಿಜವಾದ ಮುಖ, ಸಾಮೂಹಿಕ ಹತ್ಯೆಗೆ ಉತ್ತೇಜನ ನೀಡುವ ಮನಸ್ಥಿತಿ. ಈ ವಿಷ, ದ್ವೇಷ ಮತ್ತು ಹಿಂಸೆಗೆ ನೀವು ಹೊಣೆಗಾರರು ನರೇಂದ್ರ ಮೋದಿ ಅವರೇ ಎಂದಿರುವ ಅವರು, ನ್ಯಾಯಾಲಯಗಳು ಮತ್ತು ಇತರ ಸಂಸ್ಥೆಗಳು ನಿದ್ರಿಸುತ್ತಿವೆಯೇ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜೆಪಿಯ ಅಧಿಕೃತ ಅಸ್ಸಾಂ ಪ್ರದೇಶ ಹ್ಯಾಂಡಲ್ ಅಲ್ಪಸಂಖ್ಯಾತರ ಹತ್ಯೆಯನ್ನು 'ಪಾಯಿಂಟ್-ಬ್ಲಾಂಕ್' ಆಗಿ ವೈಭವೀಕರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದೆ. ಇದು ತೀವ್ರ ಅಸಹ್ಯಕರವಾಗಿದೆ. ಇದನ್ನು ಕೇವಲ ಟ್ರೋಲ್ ವಿಷಯವೆಂದು ತಳ್ಳಿಹಾಕಲಾಗುವುದಿಲ್ಲ. ಇದು ಸಾಮೂಹಿಕ ಹಿಂಸಾಚಾರ ಮತ್ತು ನರಮೇಧಕ್ಕೆ ಕರೆ ನೀಡುತ್ತದೆ ಎಂದು ಕಾಂಗ್ರೆಸ್ ಪಕ್ಷವು ಹೇಳಿದೆ.
ದಶಕಗಳಿಂದ ಈ ದ್ವೇಷವನ್ನು ಇಟ್ಟುಕೊಂಡು ಕಳೆದ 11 ವರ್ಷಗಳಲ್ಲಿ ಅದನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸಿದ ಈ ಫ್ಯಾಸಿಸ್ಟ್ ಆಡಳಿತದ ನಿಜವಾದ ಮುಖದ ಪ್ರತಿಬಿಂಬವಾಗಿದೆ. ವಿಷಯದ ಗಂಭೀರತೆಯನ್ನು ಪರಿಗಣಿಸಿ, ಸಮಾಜದಲ್ಲಿ ವಿಷವನ್ನು ಹರಡುವ ಈ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಧಾನಿಯವರು ಇದನ್ನು ಖಂಡಿಸುವ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ಯಾವುದೇ ಭರವಸೆ ಇಲ್ಲ ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ, ನ್ಯಾಯಾಂಗವು ದೃಢವಾಗಿ ಮಧ್ಯಪ್ರವೇಶಿಸಬೇಕು.
Deleting the video where Assam CM Himanta Biswa Sarma is shown shooting Muslim men with a caption ‘POINT BLANK SHOT’ isn’t enough
— Supriya Shrinate (@SupriyaShrinate) February 8, 2026
This is who the BJP really is: Mass murderers
This venom, hatred and violence is on you Mr Modi
Are the courts and other institutions sleeping? pic.twitter.com/pcWd6nLfpf
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಈ ಕೃತ್ಯವನ್ನು ಖಂಡಿಸುತ್ತದೆ ಮತ್ತು ಶಾಂತಿಗೆ ಬೆದರಿಕೆ ಹಾಕುವ ಮತ್ತು ಸಾಮಾಜಿಕ ದ್ವೇಷವನ್ನು ಹರಡುವ ಇಂತಹ ಮುಕ್ತ ಹಿಂಸಾಚಾರದ ಕರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನ್ಯಾಯಾಂಗವನ್ನು ಒತ್ತಾಯಿಸುತ್ತದೆ ಎಂದು ಕಾಂಗ್ರೆಸ್ ಪಕ್ಷವು ಹೇಳಿದೆ.
-
ನಟಿ ಅದಾ ಶರ್ಮಾಗೆ ನಿಮ್ಮ ಸೈಜ್ ಎಷ್ಟು ಎಂದು ಅಸಭ್ಯವಾಗಿ ಕೇಳಿದ ನೆಟ್ಟಿಗ, ನಟಿಯಿಂದ ಬೋಲ್ಡ್ ರಿಪ್ಲೈ -
By Election: ಒಬ್ಬರಿಂದ ಪಕ್ಷ ಗೆಲ್ಲಲ್ಲ, ಇದು ಕಾಂಗ್ರೆಸ್ ಸಿದ್ಧಾಂತಕ್ಕೆ ಸಿಗುವ ಜಯ: ಸಲೀಂ ಅಹ್ಮದ್ ಟಾಂಗ್ ಕೊಟ್ಟಿದ್ಯಾರಿಗೆ? -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್












Click it and Unblock the Notifications