Plane Crash: ಅಹಮದಾಬಾದ್ ವಿಮಾನ ದುರಂತ: ಏಕಕಾಲಕ್ಕೆ ಎರಡು ದುರಂತ! ಈ ಕಾರಣಕ್ಕೆ ಸಾವಿನ ಸಂಖ್ಯೆ ಹೆಚ್ಚಳ!
ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಭಾರೀ ಭೀಕರ ವಿಮಾನ ಪತನ ಗುಜರಾತ್‌ನಲ್ಲಿ ಸಂಭವಿಸಿದೆ. ವಿಮಾನ ಅತ್ಯಂತ ಭೀಕರವಾಗಿ ಅಪಘಾತಕ್ಕೆ ಒಳಗಾಗಿದ್ದು ಈ ವಿಮಾನದಲ್ಲಿ 242 ಜನ ಪ್ರಯಾಣಿಸುತ್ತಿದ್ದರು. ವಿಮಾನ ಪತನವು ಜನನಿಬಿಡ ಪ್ರದೇಶದಲ್ಲಿ ಆಗಿರುವುದರಿಂದ ಸಾವು - ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ಮತ್ತೊಂದು ಕಾರಣಕ್ಕೆ ಇಲ್ಲಿ ರಕ್ಷಣಾ ಕಾರ್ಯಾಚರಣೆ ಕಷ್ಟವಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕಟ್ಟಡದ ಮೇಲೆ ವಿಮಾನ ಪತನವಾಗಿರುವುದರಿಂದ ವಿಮಾನದಲ್ಲಿ ಇದ್ದವರು ಮಾತ್ರವಲ್ಲ. ಕಟ್ಟಡಗಳಲ್ಲಿ ಇದ್ದವರೂ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ನಿಖರ ಮಾಹಿತಿ ಲಭ್ಯವಾಗಬೇಕಿದೆ. ಆದರೆ, ವಿಮಾನ ಪತನದಲ್ಲಿ ಮೃತಪಟ್ಟವರ ರಕ್ಷಣೆ ಸವಾಲಾಗಿ ಬದಲಾಗಿದೆ. ಸದ್ಯ ಅಲ್ಲೇನು ನಡೆಯುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.
ಗುಜರಾತ್‌ನಲ್ಲಿ ಭಾರೀ ವಿಮಾನ ದುರಂತ ಸಂಭವಿಸಿದ್ದು. ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಬಹುದೊಡ್ಡ ದುರಂತ ಇದಾಗಿದೆ. ಈ ವಿಮಾನ ದುರಂತವು ಜನ ನಿಬಿಡ ಪ್ರದೇಶದಲ್ಲಿ ನಡೆದಿರುವುದರಿಂದ ಕಾರ್ಯಾಚರಣೆಗೆ ಸಮಸ್ಯೆ ಎದುರಾಗಿದೆ. ಅಹಮದಾಬಾದ್‌ನಲ್ಲಿ ಜೂನ್12ರಂದು ಮಧ್ಯಾಹ್ನ ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಪತನವಾಗಿದೆ. ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ದುರಂತ ಸಂಭವಿಸಿದೆ. ಆದರೆ, ಇದು ನಿರ್ಜನ ಪ್ರದೇಶದಲ್ಲಿ ಪತನವಾಗಿಲ್ಲ. ಜನನಿಬಿಡ ಪ್ರದೇಶವಾದ ಗುಜರಾತ್ ಜಿಲ್ಲೆಯ ಅಹಮದಾಬಾದ್‌ನ ಮೇಘಾನಿ ನಗರದ ಸಂಭವಿಸಿದೆ. ಮೇಘಾನಿ ನಗರ್‌ನ ಕಟ್ಟಡದ ಮೇಲೆ ಈ ಪತನ ಸಂಭವಿಸಿದೆ. ಇನ್ನು ಈ ವಿಮಾನ ಭೀಕರವಾಗಿ ಅಪಘಾತಕ್ಕೆ ಒಳಗಾಗಿದ್ದು. ಯಾರು ಸಹ ಬದುಕುಳಿದಿರುವ ಸಾಧ್ಯತೆ ಇಲ್ಲ ಅಂತಲೇ ಹೇಳಲಾಗುತ್ತಿದೆ.

ಕಾರ್ಯಾಚರಣೆ ಸಂಕಷ್ಟ: ಇನ್ನು ಜನನಿಬಿಡ ಪ್ರದೇಶದಲ್ಲಿ ದುರಂತ ಸಂಭವಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆಯನ್ನು ಮುಂದುವರಿಸುವುದಕ್ಕೆ ಸಮಯ ಹಿಡಿಸುತ್ತಿದೆ. ವಿಮಾನ ದುರಂತ ಮಾತ್ರವಲ್ಲದೇ ಈ ನಗರದ ಜನರೂ ಸಹ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಗರವು ಕಿರಿದಾದ ಪ್ರದೇಶದಲ್ಲಿದ್ದು ಜನರನ್ನು ರಕ್ಷಿಸಲು ಸ್ಥಳೀಯ ಆಡಳಿತವು ಹರಸಾಹಸ ಮುಂದುವರಿದಿಸಿದೆ.
ನಿಖಿಲ್ ಕುಮಾರಸ್ವಾಮಿ ಸಂತಾಪ: ಇನ್ನು ಈ ವಿಮಾನ ದುರಂತದ ಬಗ್ಗೆ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು, ಗುಜರಾತ ರಾಜ್ಯದ ಅಹಮದಾಬಾದ್ ನಿಂದ ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ತಾಂತ್ರಿಕ ದೋಷದಿಂದ ಪತನವಾದ ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ.
ವಿಮಾನದಲ್ಲಿ 242 ಪ್ರಯಾಣಿಕರು ಇದ್ದ ಬಗ್ಗೆ ಪ್ರಾಥಮಿಕವಾಗಿ ತಿಳಿದು ಬಂದಿದ್ದು, ಈ ದುರಂತದಲ್ಲಿ ಸಾವೀಗಿಡಾದವರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.












Click it and Unblock the Notifications