5000 ಇವಿಎಂ ತಿರುಚಲು 140 ಎಂಜಿನಿಯರ್ ಗಳ ನೇಮಕ: ಹಾರ್ದಿಕ್ ಪಟೇಲ್

ಅಹಮದಾಬಾದ್, ಡಿಸೆಂಬರ್ 14: 5000 ಇವಿಎಂಗಳನ್ನು ಟ್ಯಾಂಪರ್ ಮಾಡಲು 140 ಎಂಜಿನಿಯರ್ ಗಳು ಕೆಲಸ ಮಾಡುತ್ತಿದ್ದಾರೆ ಎಂದು ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಸಂಚಾಲಯ ಹಾರ್ದಿಕ್ ಪಟೇಲ್ ಹೇಳಿದ್ದಾರೆ.

ಆದರೆ ಈ ವಾದವನ್ನು ಅಹಮದಾಬಾದ್ ಜಿಲ್ಲಾಧಿಕಾರಿ ತಳ್ಳಿ ಹಾಕಿದ್ದಾರೆ. ಈ ಆರೋಪ ಆಧಾರ ರಹಿತ ಎಂದು ಅವರು ಹೇಳಿದ್ದಾರೆ.

"ಅಹಮದಾಬಾದ್ ನ ಕಂಪನಿಯೊಂದು 140 ಎಂಜಿನಿಯರ್ ಗಳ ಮೂಲಕ 5,000 ಇವಿಎಂಗಳನ್ನು ಹ್ಯಾಕ್ ಮಾಡಲು ಸಜ್ಜಾಗಿದೆ," ಎಂದು ಹಾರ್ದಿಕ್ ಶನಿವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.

Ahmedabad collector rubbishes Hardik Patel's claims of EVM tampering

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಹಮದಾಬಾದ್ ಜಿಲ್ಲಾಧಿಕಾರಿ ಅವಂತಿಕಾ ಸಿಂಗ್, ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡಬೇಕಿದ್ದರೂ ಅದು ಚುನಾವಣಾ ಆಯೋಗವೇ ನೀಡಬೇಕು ಎಂದು ಹೇಳಿದ್ದಾರೆ.

ಇದೆಲ್ಲಾ ಆಧಾರ ರಹಿತ ಆರೋಪಗಳು. ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಅನಿಸುತ್ತಿಲ್ಲ. ಒಂದೊಮ್ಮೆ ಸ್ಪಷ್ಟನೆ ನೀಡಬೇಕಿದ್ದರೆ ಚುನಾವಣಾ ಆಯೋಗವೇ ಸ್ಪಷ್ಟನೆ ನೀಡಬೇಕು," ಎಂದು ಅವರು ಹೇಳಿದ್ದಾರೆ.

ಇದಾದ ನಂತರ ಮತ್ತೆ ಭಾನುವಾರ ಸಂಜೆ ಪ್ರತಿಕ್ರಿಯೆ ನೀಡಿರುವ ಹಾರ್ದಿಕ್, "ಎಟಿಎಂಗಳನ್ನು ಹ್ಯಾಕ್ ಮಾಡಬಹುದು. ಹೀಗಾಗಿ ಇವಿಎಂಗಳನ್ನೂ ಹ್ಯಾಕ್ ಮಾಡಬಹುದು. ಒಂದೊಮ್ಮೆ ಯಾವುದೇ ಕ್ಷೇತ್ರಗಳಲ್ಲಿ 1,200 ರಿಂದ 1,500 ಮತಗಳಿಂದ ಜಯ ಸಾಧಿಸಿದಲ್ಲಿ, ಅಲ್ಲಿ ಇವಿಎಂಗಳನ್ನು ಬಳಸಲಾಗಿರುತ್ತದೆ. ಪಾರದರ್ಶಕ ಚುನಾವಣೆ ನಡೆದರೆ ಬಿಜೆಪಿಗೆ ಸೋಲು ಕಂಡಿತ," ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+