ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲಿಕಾಪ್ಟರ್ ಹಗರಣ: ಮಾಜಿ ಪಿಎಂ ಎಂಎಂ ಸಿಂಗ್ ಗೆ ಸಿಬಿಐ ಭೀತಿ

ಸುಮಾರು 3,600 ಕೋಟಿ ರೂಪಾಯಿ ಮೊತ್ತದ ವಿವಿಐಪಿ ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಲು ತನಿಖಾ ತಂಡ ಸಿಬಿಐ ಮುಂದಾಗಿದೆ.

By Mahesh
|
Google Oneindia Kannada News

ನವದೆಹಲಿ, ಡಿಸೆಂಬರ್ 12: ಸುಮಾರು 3,600 ಕೋಟಿ ರೂಪಾಯಿ ಮೊತ್ತದ ವಿವಿಐಪಿ ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಪ್ರಶ್ನಿಸಲು ತನಿಖಾ ತಂಡ ಸಿಬಿಐ ಮುಂದಾಗಿದೆ.

ಮನಮೋಹನ್ ಸಿಂಗ್ ಅವರಿಂದ ಕೆಲ ವಿಷಯಗಳ ಬಗ್ಗೆ ಸ್ಪಷ್ಟನೆ ಪಡೆದುಕೊಳ್ಳಲು ಸಿಬಿಐ ಮುಂದಾಗಿದ್ದು, ಮಾಜಿ ಪ್ರಧಾನಿ ಸಿಂಗ್ ಅವರ ಕಾಲದಲ್ಲಿ ಪ್ರಧಾನಿ ಸಚಿವಾಲಯದಲ್ಲಿದ್ದ ಅಧಿಕಾರಿಗಳನ್ನು ಕೂಡಾ ಪ್ರಶ್ನಿಸಲಾಗುತ್ತದೆ. [3,600 ಕೋಟಿ ರು ಮೌಲ್ಯದ ಡೀಲ್ ಕ್ಯಾನ್ಸಲ್]

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರದಂದು ವಾಯುಸೇನೆಯ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ. ತ್ಯಾಗಿ ಹಾಗೂ ಇನ್ನಿಬ್ಬರು ಡಿಸೆಂಬರ್ 14ರ ತನಕ ಸಿಬಿಐ ಕಸ್ಟಡಿಯಲ್ಲಿರುತ್ತಾರೆ.[ಭಾರತವನ್ನು ಕಾಡುವ 25 ಭ್ರಷ್ಟಾಚಾರ ಪ್ರಕರಣಗಳು]

ಮಾಜಿ ಪ್ರಧಾನಿ ಎಂಎಂ ಸಿಂಗ್ ಅವರ ಕಾಲದಲ್ಲಿದ್ದ ಅಧಿಕಾರಿಗಳ ಹೆಸರುಗಳನ್ನು ಕೋರ್ಟ್ ಮುಂದೆ ತ್ಯಾಗಿ ಹೇಳಿದ್ದಾರೆ. ಸುಮಾರು 1.5 ಲಕ್ಷ ಕಡತಗಳು ಇಟಲಿಯ ಮಿಲಾನ್ ನಿಂದ ಬಂದಿದ್ದು, ಅಪಾರ ಪ್ರಮಾಣದ ಮಾಹಿತಿಯನ್ನು ಈಗ ಪರಿಶೀಲಿಸಬೇಕಿದೆ. [ಮಾಜಿ ಪ್ರಧಾನಿ ಸಿಂಗ್ ಟ್ರಾವೆಲ್ ಶೀಟ್ ಬಹಿರಂಗ]

ಮಧ್ಯವರ್ತಿ ಗಿಯಾಡೋ ಹಶ್ಕೆ ಪಾತ್ರ

ಮಧ್ಯವರ್ತಿ ಗಿಯಾಡೋ ಹಶ್ಕೆ ಪಾತ್ರ

ಅಗಸ್ಟಾ ವೆಸ್ಟ್ ಲ್ಯಾಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಗಿಯಾಡೋ ಹಶ್ಕೆ ಪಾತ್ರದ ಬಗ್ಗೆ ಕೂಡಾ ತ್ಯಾಗಿ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ ಕೆ ನಾರಾಯಣನ್, ವಿಶೇಷ ಭದ್ರತಾ ಪಡೆಯ ಮಾಜಿ ಮುಖ್ಯಸ್ಥ ಬಿವಿ ವಾಂಚೋ, ಗುಪ್ತಚರ ಇಲಾಖೆಯ ಮಾಜಿ ಮುಖ್ಯಸ್ಥ ಇಸ್ಎಲ್ ನರಸಿಂಹನ್ ಸೇರಿದಂತೆ 2005ರಲ್ಲಿ ವಿಶೇಷ ಸಭೆಯಲ್ಲಿ ಪಾಲ್ಗೊಂಡಿದ್ದ ಉನ್ನತ ಅಧಿಕಾರಿಗಳನ್ನು ಸಿಬಿಐ ಪ್ರಶ್ನಿಸಿದೆ.

ಏನಿದು ವಿವಿಐಪಿ ಹಗರಣ?

ಏನಿದು ವಿವಿಐಪಿ ಹಗರಣ?

ವಿವಿಐಪಿಗಳ ಪ್ರಯಾಣಕ್ಕಾಗಿ ವಾಯುಪಡೆಗೆ 12 ಹೆಲಿಕಾಪ್ಟರ್ ಖರೀದಿಗೆ ಸರ್ಕಾರ ಟೆಂಡರ್ ಕರೆಯಲಾಗಿತ್ತು. ಅಮೆರಿಕ, ಇಟಲಿ ಸೇರಿದಂತೆ ಪ್ರತಿಷ್ಠಿತ ರಾಷ್ಟ್ರಗಳ ಕಂಪನಿಗಳು ಟೆಂಡರ್ನಲ್ಲಿ ಪಾಲ್ಗೊಂಡಿದ್ದವು. ಆದರೆ. ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿ ಕೆಲ ರಾಜಕಾರಣಿಗಳಿಗೆ 360 ಕೋಟಿ ರೂಪಾಯಿ ಲಂಚ ನೀಡಿ ಟೆಂಡರ್ ಪಡೆದಿತ್ತು. ಈ ಲಂಚದ ಮೊತ್ತ ವರ್ಗಾವನೆ ಮೇಲೆ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ ಉದ್ಯಮಿ ಹಾಗೂ ವಕೀಲ ಖೇತಾನ್ ರನ್ನು ಬಂಧಿಸಿದೆ.

ನಿವೃತ್ತ ಮುಖ್ಯಸ್ಥ ಎಸ್.ಪಿ.ತ್ಯಾಗಿ ಬಂಧನ

ನಿವೃತ್ತ ಮುಖ್ಯಸ್ಥ ಎಸ್.ಪಿ.ತ್ಯಾಗಿ ಬಂಧನ

ವಿವಿಐಪಿ ಹೆಲಿಕಾಪ್ಟರ್ ಖರೀದಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಖೇತಾನ್, ವಾಯುಪಡೆಯ ನಿವೃತ್ತ ಮುಖ್ಯಸ್ಥ ಎಸ್.ಪಿ.ತ್ಯಾಗಿ ಮತ್ತು ಇತರ 19 ವ್ಯಕ್ತಿಗಳ ವಿರುದ್ಧ ಎಫ್ ಐಆರ್ ಕೂಡಾ ಹಾಕಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರದಂದು ವಾಯುಸೇನೆಯ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿದೆ. ತ್ಯಾಗಿ ಹಾಗೂ ಇನ್ನಿಬ್ಬರು ಡಿಸೆಂಬರ್ 14ರ ತನಕ ಸಿಬಿಐ ಕಸ್ಟಡಿಯಲ್ಲಿರುತ್ತಾರೆ.
ಫಿನ್ಮೆಕ್ಯಾನಿಕಾ ಕಂಪನಿ

ಫಿನ್ಮೆಕ್ಯಾನಿಕಾ ಕಂಪನಿ

2012ರಲ್ಲಿಯೇ ಭಾರತೀಯ ವಿವಿಐಪಿಗಳ ಬಳಕೆಗೆ ಈಗಾಗಲೇ ಎಂಬ್ರೇರ್ 135 ಹೆಸರಿನ 5 ಜೆಟ್ ಮತ್ತು ಮೂರು ಬೋಯಿಂಗ್ ವಿಮಾನ ನೀಡಲಾಗಿದೆ. ಫಿನ್ಮೆಕ್ಯಾನಿಕಾ ಕಂಪನಿಯ ಮುಖ್ಯಸ್ಥ ಮತ್ತು ಅಗಸ್ಟಾ ಕಂಪನಿಯ ಸ್ಥಾಪಕ ಫ್ರಾನ್ಸಿಸ್ಕೋ ಗೌರ್ಗುವಾಂಗ್ಲಿನ್ ಅವರ ಕಾಲದಲ್ಲಿಯೇ ಇಟಲಿ ತನಿಖೆ ಆರಂಭಿಸಿತ್ತು. ಅವರ ಬಳಿಕ ಕಂಪನಿಯ ಉತ್ತರಾಧಿರಾಧಿಕಾರಿಯಾದ ಒರ್ಸಿ ಅವರನ್ನು ಬಂಧಿಸಲಾಗಿದೆ.[ಇನ್ನಷ್ಟು ಖದೀಮರ ಹೆಸರು ಇಲ್ಲಿದೆ ಓದಿ]

2005ರ ಸಭೆಯಲ್ಲಿ ಉಪಸ್ಥಿತರಿದ್ದವರ ವಿಚಾರಣೆ

2005ರ ಸಭೆಯಲ್ಲಿ ಉಪಸ್ಥಿತರಿದ್ದವರ ವಿಚಾರಣೆ

ಮನಮೋಹನ್​ರ ಜತೆ ಅವರ ಕಾರ್ಯದರ್ಶಿಯಾಗಿದ್ದ ಟಿ.ಕೆ.ಎ. ನಾಯರ್, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್, ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ, ಸಿಬಿಐ ಮಾಜಿ ವಿಶೇಷ ನಿರ್ದೇಶಕ ಸಲೀಂ ಅಲಿಯವರನ್ನೂ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

English summary
Investigators probing the AgustaWestland chopper deal are likely to question former Prime Minister, Dr Manmohan Singh and others. The CBI says that it would like to seek some clarifications from Dr Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X