ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಹುಕೋಟಿ ಹೆಲಿಕಾಪ್ಟರ್ ಡೀಲ್ ಕುದಿರಿಸಿದ ಭೂಪರು

By Mahesh
|
Google Oneindia Kannada News

ನವದೆಹಲಿ, ಫೆ.13: ರಕ್ಷಣಾ ಇಲಾಖೆ ಜೊತೆಗೆ ಅಗಸ್ಟಾವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಹಗರಣ ಯುಪಿಎ ಸರ್ಕಾರದ ಮಾನ ಹರಾಜಾಕ್ಕಿದೆ.ಇಟಲಿಯಲ್ಲಿ ಕಂಪನಿ ಸಿಇಒ ಬಂಧನ ನಂತರ ಭಾರತದಲ್ಲಿ ಹಗರಣದ ಬಗ್ಗೆ ಸಿಬಿಐ ತನಿಖೆಗೆ ರಕ್ಷಣಾ ಇಲಾಖೆ ಆದೇಶಿಸಿದೆ.

ನಿವೃತ್ತ ವಾಯುಸೇನಾ ಮುಖ್ಯಸ್ಥ ಎಸ್ ಪಿ ತ್ಯಾಗಿ ಅವರ ಮೇಲೆ ಡೀಲ್ ಕುದುರಿಸಲು ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಡೀಲ್ ಕುದುರಿಸಿದ್ದು ನನ್ನ ಕಸಿನ್ ಸಂಜೀವ್ ಕುಮಾರ್ ತ್ಯಾಗಿ ಇದರಲ್ಲಿ ನನ್ನ ಕೈವಾಡವಿಲ್ಲ ಎಂದು ತ್ಯಾಗಿ ಪ್ರತಿಕ್ರಿಯಿಸಿದ್ದಾರೆ. ಇಟಲಿ ಸರ್ಕಾರದ ಆರೋಪ ಪಟ್ಟಿಯಲ್ಲಿ ತ್ಯಾಗಿ ಅವರ ಹೆಸರು ಕಾಣಿಸಿಕೊಂಡಿದೆ.

ಕಾಮನ್‌ವೆಲ್ತ್, ಕಲ್ಲಿದ್ದಲು, 2ಜಿ ಸ್ಪೆಕ್ಟ್ರಂ, ಟೆಟ್ರಾ ಟ್ರಕ್ ನಂಥ ಕೋಟ್ಯಂತರ ರೂಪಾಯಿ ಕರ್ಮಕಾಂಡಕ್ಕೆ ಇದೀಗ ಮತ್ತೊಂದು ಹಗರಣ ಸುತ್ತಿಕೊಳ್ಳುತ್ತಿದೆ. ಇಟಲಿಯ ಕಂಪನಿಯೊಂದರ ಜತೆ ಹೆಲಿಕಾಪ್ಟರ್ ಖರೀದಿಗಾಗಿ ಕೇಂದ್ರದ ಯುಪಿಎ ಸರ್ಕಾರ ಮಾಡಿಕೊಂಡಿದ್ದ 3,546 ಕೋಟಿ ರೂಪಾಯಿಯ ಒಪ್ಪಂದದಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. ಡೀಲ್ ಕುದಿರಿಸಿದ ಭೂಪರು ಹಾಗೂ ಡೀಲ್ ಬಗ್ಗೆ ರಕ್ಷಣಾ ಇಲಾಖೆ ಏನು ಹೇಳಿದೆ ಮುಂದೆ ಓದಿ...

ಹೆಲೆಕಾಪ್ಟರ್ ಡೀಲ್ ಕುದಿರಿಸಿದ ಭೂಪರು

ಹೆಲೆಕಾಪ್ಟರ್ ಡೀಲ್ ಕುದಿರಿಸಿದ ಭೂಪರು

ಭಾರತದ ಈ ಡೀಲ್ ಪಡೆಯುವ ಸಲುವಾಗಿ ಸ್ವಿಟ್ಜರ್ಲೆಂಡ್ ಮೂಲದ ಕನ್ಸಲ್ಟಟೆಂಟ್ ಗ್ಯೂಡೋ ರಾಲ್ಫ್ ಹಾಸ್ಚೆಕ್ ಅವರಿಗೆ ಅಗಸ್ಟಾವೆಸ್ಯ್‌ಲ್ಯಾಂಡ್ ಬರೋಬ್ಬರಿ 350 ಕೋಟಿ ರೂಪಾಯಿ (51 ಮಿಲಿಯನ್ ಯೂರೋ) ನೀಡಿದೆ. ಅಗಸ್ಟಾ ವೆಸ್ಟ್‌ಲ್ಯಾಂಡ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಇಟಲಿಯ ತನಿಖಾ ಸಂಸ್ಥೆಗಳು ಈ ವರ್ಷಾರಂಭದಲ್ಲಿ ತನಿಖೆ ಆರಂಭಿಸಿವೆ.

ಹೆಲೆಕಾಪ್ಟರ್ ಡೀಲ್ ಕುದಿರಿಸಿದ ಭೂಪರು

ಹೆಲೆಕಾಪ್ಟರ್ ಡೀಲ್ ಕುದಿರಿಸಿದ ಭೂಪರು

ಆದರೆ, 2012ರಲ್ಲಿಯೇ ಭಾರತೀಯ ವಿವಿಐಪಿಗಳ ಬಳಕೆಗೆ ಈಗಾಗಲೇ ಎಂಬ್ರೇರ್ 135 ಹೆಸರಿನ 5 ಜೆಟ್ ಮತ್ತು ಮೂರು ಬೋಯಿಂಗ್ ವಿಮಾನ ನೀಡಲಾಗಿದೆ. ಫಿನ್ಮೆಕ್ಯಾನಿಕಾ ಕಂಪನಿಯ ಮುಖ್ಯಸ್ಥ ಮತ್ತು ಅಗಸ್ಟಾ ಕಂಪನಿಯ ಸ್ಥಾಪಕ ಫ್ರಾನ್ಸಿಸ್ಕೋ ಗೌರ್ಗುವಾಂಗ್ಲಿನ್ ಅವರ ಕಾಲದಲ್ಲಿಯೇ ಇಟಲಿ ತನಿಖೆ ಆರಂಭಿಸಿತ್ತು. ಅವರ ಬಳಿಕ ಕಂಪನಿಯ ಉತ್ತರಾಧಿರಾಧಿಕಾರಿಯಾದ ಒರ್ಸಿ ಅವರನ್ನು ಬಂಧಿಸಲಾಗಿದೆ.

ಹೆಲೆಕಾಪ್ಟರ್ ಡೀಲ್ ಕುದಿರಿಸಿದ ಭೂಪರು

ಹೆಲೆಕಾಪ್ಟರ್ ಡೀಲ್ ಕುದಿರಿಸಿದ ಭೂಪರು

ಗ್ಯೂಡೋ ಹಾಸ್ಚೆಕ್ ಮತ್ತು ಕಾರ್ಲೋ ಗೆರೋಸಾ ಗ್ಯೂಡೋ ಹಾಸ್ಚೆಕ್ - ಸ್ವಿಸ್ ಮೂಲದ ಬಿಸಿನೆಸ್‌ಮ್ಯಾನ್. ಭಾರತದ ಹಲವು ಡೀಲ್‌ಗಳನ್ನು ಈತನೇ ಹಲವು ವರ್ಷಗಳಿಂದ ಆಪರೇಟ್ ಮಾಡುತ್ತಿದ್ದಾರೆ. ಭಾರತದ ಡೀಲ್ ಅಗಸ್ಟಾವೆಸ್ಟ್ ಲ್ಯಾಂಡ್‌ಗೆ ದಕ್ಕುವಂತೆ ಮಾಡಿರುವ ಇಬ್ಬರು ಏಜೆಂಟ್‌ಗಳಲ್ಲಿ ಒಬ್ಬ. ನವದೆಹಲಿಯ ಅಗಸ್ಟಾವೆಸ್ ಲ್ಯಾಂಡ್ ಶಾಖೆ ಜತೆ ಆಪ್ತ ಸಂಬಂಧ ಹೊಂದಿದ್ದಾನೆ. ಇದಕ್ಕೂ ಮುನ್ನವೇ ಫಿನ್‌ಮೆಕ್ಯಾನಿಕಾದ ಕೋಟ್ಯಂತರ ರೂಪಾಯಿ
ಕಾಂಟ್ರ್ಯಾಕ್ಟ್‌ಗಳನ್ನು ಭಾರತದಲ್ಲಿ ನಿಭಾಯಿಸಿರುವ ಆಸಾಮಿ.

ಹೆಲೆಕಾಪ್ಟರ್ ಡೀಲ್

ಹೆಲೆಕಾಪ್ಟರ್ ಡೀಲ್

ಕಾರ್ಲೋ ಗೆರೋಸಾ : ಹಾಸ್ಚೆಕ್ ಇಟಲಿಯ ಪಾರ್ಟನರ್ ಮತ್ತು ಭಾರತದ ಹಳೇ ಡೀಲರ್. ಇಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಹೊರಗುತ್ತಿಗೆ ನೀಡುವ ಚಂಡೀಗಢ ಮೂಲದ ಏರೋಮ್ಯಾಟ್ರಿಕ್ಸ್ ಕಂಪನಿಯ ಒಡೆಯ. ಹಾಶ್ಚೆಕ್ ಮತ್ತು ಗೆರೋಸಾ ನಡುವೆ ನಡೆದಿರುವ ಸಂಭಾಷಣೆ ಪ್ರಕಾರ ಭಾರತದಲ್ಲಿಯೇ ಈ ಹಣ ಹಂಚಿಕೆಯಾಗಿರುವ ಮಾಹಿತಿ ಹಾಶ್ಚೆಕ್ ಇದೆ. ಹಣದ ಹಂಚಿಕೆ ಕುರಿತಂತೆ ಭಾರತದ ಬಿಸಿನೆಸ್ ಕುರಿತು ತನ್ನ ಪತ್ನಿಯೊಂದಿಗೆ
ತಳಮಳಗಳನ್ನು ಹೇಳಿಕೊಂಡಿದ್ದ ಎನ್ನಲಾಗಿದೆ.

ಹೆಲೆಕಾಪ್ಟರ್ ಡೀಲ್

ಹೆಲೆಕಾಪ್ಟರ್ ಡೀಲ್

2010ರ ಫೆಬ್ರವರಿಯಲ್ಲಿ 12 ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ಇಟಲಿ ಮತ್ತು ಇಂಗ್ಲೆಂಡ್‌ಗಳಿಂದ ರಕ್ಷಣಾ ಇಲಾಖೆ ಮಾಹಿತಿ ಸಂಗ್ರಹಿಸಿದೆ. ಆದರೆ, ಯಾವುದೇ ಖಚಿತ ಮಾಹಿತಿ ಇಲ್ಲ.

ಎರಡೂ ಸರ್ಕಾರಗಳಿಂದ ಅಧಿಕೃತ ಮಾಹಿತಿ ಇಲ್ಲ, ಪ್ರಕರಣವನ್ನು ಸಿಬಿಐಗೆ ವಹಿಸಲು ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ಭ್ರಷ್ಟಾಚಾರ ಕುರಿತಂತೆ ರೋಮ್ ನ ನಮ್ಮ ಪ್ರತಿನಿಧಿ ಮೂಲಕ ಮಾಹಿತಿ ಕೇಳಿದೆವು. ಆದರೆ, ಪ್ರಕರಣ ನ್ಯಾಯಾಂಗ ಪರಿಶೀಲನೆಯಲ್ಲಿರುವ ಕಾರಣ ಸರ್ಕಾರ ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂದು ಇಟಲಿ ಹೇಳಿದೆ.

ಹೆಲೆಕಾಪ್ಟರ್ ಡೀಲ್

ಹೆಲೆಕಾಪ್ಟರ್ ಡೀಲ್

ಕ್ರಿಸ್ಟಿಯನ್ ಮಿಚೆಲ್: ಲಂಡನ್ ಮೂಲದ ಕನ್ಸಲ್ಟೆಂಟ್. 350 ಕೋಟಿ ರೂಪಾಯಿ ಕಮೀಷನ್‌ನಲ್ಲಿ ಈತನೇ ಸಿಂಹಪಾಲು ಹೊಂದಿದ್ದಾನೆ ಎಂಬುದು ಆರೋಪ. ಕಾಂಗ್ರೆಸ್ ಮತ್ತು ಸರ್ಕಾರದ ಜತೆ ನಿಕಟ ಸಂಪರ್ಕ ಹೊಂದಿರುವ ಭೂಪ. 80 ಮತ್ತು 90ರ ದಶಕದಲ್ಲಿ ಇವರ ತಂದೆ ವೂಲ್ಫ್‌ಗ್ಯಾಂಗ್ ರಿಚರ್ಡ್ ಮ್ಯಾಕ್ಸ್ ಮಿಚೆಲ್ ಭಾರತದಲ್ಲಿಯೇ ಇದ್ದರು. ಇತ್ತೀಚೆಗಷ್ಟೇ ನಿಧನರಾಗಿದ್ದಾರೆ. ಭಾರತ ಸರ್ಕಾರದ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಅವರು ವಿವಾದಗಳಿಂದಲೇ ಗುರ್ತಿಸಿಕೊಂಡಿದ್ದರಂತೆ.

ಹೆಲೆಕಾಪ್ಟರ್ ಡೀಲ್

ಹೆಲೆಕಾಪ್ಟರ್ ಡೀಲ್

ಸಂಜೀವ್ ಕುಮಾರ್ ತ್ಯಾಗಿ: ದೆಹಲಿ ಮೂಲದ ಉದ್ದಿಮೆದಾರ. ಮಾಜಿ ವಾಯುಸೇನಾ ಮುಖ್ಯಸ್ಥ ಎಸ್ ಪಿ ತ್ಯಾಗಿ ಕಸಿನ್. ಗೆರೋಸಾ ಸ್ನೇಹಿತನಾಗಿರುವ ತ್ಯಾಗಿಯನ್ನು ಜೂಲಿ ಎಂದು ಕರೆಯಲಾಗುತ್ತೆ. ವಿದ್ಯುತ್ ಕ್ಷೇತ್ರದ ಸಲಹೆಗಾರ. ದೆಹಲಿಯ ಫಿರೋಜ್ ಷಾ ರಸ್ತೆಯಲ್ಲಿ ತ್ಯಾಗಿ ಕಚೇರಿ ಇದೆ. ಭಾರೀ ನಂಟು ಹೊಂದಿರುವ ತ್ಯಾಗಿ, ಐಷಾರಾಮಿ ಕಾರ್‌ಗಳಲ್ಲಿಯೇ ಓಡಾಟ ನಡೆಸಿದರೂ ರಿಯಲ್ ಎಸ್ಟೇಟ್‌ನಲ್ಲಿ ನಯಾಪೈಸೆ ಹೂಡಿಕೆ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.

English summary
The Central Bureau of Investigation is to inquire into charges of unethical dealings by Italian company Finmeccanica in the sale of 12 helicopters by its Anglo-Italian subsidiary AgustaWestland to the Ministry of Defence. The deal is valued at around Rs 3,500 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X