Get Updates
Get notified of breaking news, exclusive insights, and must-see stories!

ತಮಿಳುನಾಡಿನಲ್ಲೂ ಶುರುವಾಯ್ತು ಅದಾನಿ ಗದ್ದಲ; ಎಂ.ಕೆ ಸ್ಟಾಲಿನ್ ಡಬಲ್ ಡ್ರಾಮಾ ಎಂದ ಕೆ. ಅಣ್ಣಾಮಲೈ!

ಗೌತಮ್ ಅದಾನಿ ವಿಚಾರವು ಇದೀಗ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಸೌರಶಕ್ತಿ ಗುತ್ತಿಗೆ ಪಡೆದುಕೊಳ್ಳಲು ಅವರು ಭಾರತದ ಅಧಿಕಾರಿಗಳಿಗೆ ಲಂಚ ನೀಡಿದ್ದರು ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಹಾಗೂ ಅದಾನಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವುದಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಹೇಳಿದ್ದಾರೆ. ಇದೀಗ ತಮಿಳುನಾಡಿನ ಡಿಎಂಕೆ ಸರ್ಕಾರ ಹಾಗೂ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರಿಗೂ ಈ ವಿಚಾರದಲ್ಲಿ ಸಂಕಷ್ಟ ಎದುರಾಗುವ ಸಾಧ್ಯತೆ ಕಾಣಿಸುತ್ತಿದೆ.

ಉದ್ಯಮಿ ಹಾಗೂ ಬಿಲೆನಿಯರ್ ಗೌತಮ್ ಅದಾನಿ ಅವರಿಗೆ ಅಮೆರಿಕದಿಂದ ವಾರೆಂಟ್ ಜಾರಿಯಾಗಿದೆ. ಇದರ ಬೆನ್ನಲ್ಲೇ ಭಾರತದ ವಿವಿಧ ರಾಜ್ಯಗಳ ಸರ್ಕಾರದೊಂದಿಗೆ ಅವರು ನಡೆಸಿರುವ ವ್ಯವಹಾರಗಳ ಬಗ್ಗೆಯೂ ಭಾರೀ ಚರ್ಚೆ ನಡೆದಿದೆ. ಗುತ್ತಿಗೆಯನ್ನು ಪಡೆದುಕೊಳ್ಳುವ ಉದ್ದೇಶದಿಂದ ಅದಾನಿ ಸಮೂಹವು ಭಾರತದ ಅಧಿಕಾರಿಗಳಿಗೆ ಭಾರೀ ಮೊತ್ತದ ಹಣ (ಲಂಚ) ನೀಡಿದೆ ಎನ್ನುವ ಆರೋಪ ಇದೆ. ಇನ್ನು ಈಗಾಗಲೇ ಈ ಬಗ್ಗೆ ಭಾರೀ ಆರೋಪಗಳು ಕೇಳಿ ಬರುತ್ತಿವೆ.

Adani ruckus started in Tamil Nadu to MK Stalin double drama as K Annamalai

ಇದೀಗ ತಮಿಳುನಾಡಿನಲ್ಲೂ ಈ ವಿಷಯ ಭಾರೀ ಗದ್ದಲಕ್ಕೆ ಕಾರಣವಾಗಿದೆ. ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರು ಟ್ವೀಟ್‌ ಮಾಡಿ ತಮಿಳುನಾಡು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ತಮ್ಮ ಆಡಳಿತ ಭ್ರಷ್ಟಾಚಾರ ಹಾಗೂ ದುರಾಡಳಿತವನ್ನು ಜನರಿಂದ ಮರೆಮಾಚುವುದಕ್ಕೆ ಅಂಬಾನಿ & ಅದಾನಿ ಎಂದು ಡಿಎಂಕೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿತ್ತು. ಇದೀಗ ಡಿಎಂಕೆ ಸರಕಾರ ಹಾಗೂ ಕುಟುಂಬ ಅದಾನಿ ಕಂಪನಿ ಜತೆಗಿನ ಸಂಪರ್ಕದ ಸುದ್ದಿ ಹೊರಬಿದ್ದಿದೆ.

ಈಗ ಡಿಎಂಕೆ ಉಲ್ಟಾ ಹೊಡೆದಿದ್ದು, ಈ ವಿಷಯವನ್ನು ಮರೆಮಾಚಲು ಪ್ರಯತ್ನಿಸುತ್ತಿದೆ. ಈ ವಿಷಯದ ಬಗ್ಗೆ ತಮಿಳುನಾಡಿನ ಹಿರಿಯ ರಾಜಕೀಯ ನಾಯಕರರಾದ ಪಾಟಲಿ ಪೀಪಲ್ಸ್ ಪಾರ್ಟಿಯ (Pattali Makkal Katchi) ಸಂಸ್ಥಾಪಕ ಡಾ.ಎಸ್‌ ರಾಮ್‌ದಾಸ್‌ ಅವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ಪ್ರತಿಕ್ರಿಯೆಯು ಸಂಪೂರ್ಣವಾಗಿ ಖಂಡನೀಯವಾಗಿದೆ ಎಂದಿದ್ದಾರೆ.

ಸ್ಟಾಲಿನ್‌ ಅವರು ಮರೆತಿರಬಹುದು. ಅವರ ಇಂದಿನ ಟೀಕೆಯನ್ನು ಸ್ಟಾಲಿನ್‌ ಹೇಗೆ ಎದುರಿಸುತ್ತಿದ್ದರು ಎಂದು ಅಂತ ಅಣ್ಣಾಮಲೈ ಹೇಳಿದ್ದಾರೆ. ರಾಜಕೀಯದಲ್ಲಿ ಡಿಎಂಕೆಯ ದ್ವಿಪಾತ್ರವನ್ನು (ಇಬ್ಭಗೆಯ ನೀತಿ) ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಅದರಲ್ಲೂ ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ರಾಮ್‌ದಾಸ್‌ ಅವರು ಕೇಳಿದ ಪ್ರಶ್ನೆಯ ಸತ್ಯಾಸತ್ಯತೆಯನ್ನು ಎದುರಿಸಲಾಗದೆ. ಈ ರೀತಿ ಉಡಾಫೆಯ ಉತ್ತರವನ್ನು ನೀಡುವುದು ಮುಖ್ಯಮಂತ್ರಿಯ ಅಸಮರ್ಥತೆಯನ್ನು ತೋರಿಸುತ್ತದೆ. ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಯಲ್ಲಿ ಇರುವವರಿಗೆ ಸೂಕ್ತವಲ್ಲ ಎಂದಿದ್ದಾರೆ.

ಅವರಿಗೆ ಮಾಡೋಕೆ ಕೆಲಸ ಇಲ್ಲ

ಇನ್ನು ಅದಾನಿ ವಿಚಾರವಾಗಿ ಕೇಳಿ ಬಂದಿರುವ ಆರೋಪದ ಬಗ್ಗೆ ತಮಿಳುನಾಡಿನ ಹಿರಿಯ ರಾಜಕಾರಣಿ ರಾಮ್‌ದಾಸ್‌ ಅವರು ಪ್ರಶ್ನೆ ಮಾಡಿದ್ದಾರೆ. ಆದರೆ, ಈ ಪ್ರಶ್ನೆಗೆ ಉತ್ತರಿಸುವುದಿರಲಿ ಆ ಪ್ರಶ್ನೆಯ ಬಗ್ಗೆ ತಮಿಳುನಾಡಿನ ಸಿ.ಎಂ ಸ್ಟಾಲಿನ್‌ ಅವರು ವ್ಯಂಗ್ಯವಾಗಿ ಉತ್ತರಿಸಿದ್ದಾರೆ. ರಾಮ್‌ದಾಸ್‌ ಅವರಿಗೆ ಮಾಡುವುದಕ್ಕೆ ಕೆಲಸ ಇಲ್ಲ. ದಿನಾ ಒಂದಿಲ್ಲೊಂದು ಏನಾದರೂ ಮಾತನಾಡುತ್ತಾರೆ ಎಲ್ಲದಕ್ಕೂ ನನಗೆ ಉತ್ತರಿಸೋಕೆ ಆಗಲ್ಲ ಎಂದಿದ್ದಾರೆ ಎಂ.ಕೆ ಸ್ಟಾಲಿನ್.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+