ಬಿಹಾರದಲ್ಲಿ 1600 ಕೋಟಿ ರೂ. ಹೂಡಿಕೆಗೆ ಮುಂದಾದ ಅದಾನಿ ಗ್ರೂಪ್
ಭಾರತದ ಅತಿ ದೊಡ್ಡ ಉದ್ಯಮಿಗಳಲ್ಲಿ ಒಬ್ಬರಾಗಿರುವ ಗೌತಮ್ ಅದಾನಿ ಮುಂದಾಳತ್ವದ ಅದಾನಿ ಗ್ರೂಪ್ ಈಗ ಬಿಹಾರದಲ್ಲಿ ಗ್ರ್ಯಾಂಡ್ ಎಂಟ್ರಿ ನೀಡಲು ಸಿದ್ಧತೆ ನಡೆಸಿದೆ. ಅದಾನಿ ಗ್ರೂಪ್ ನವಾಡ ಜಿಲ್ಲೆಯ ವಾರಿಸಲಿಗಂಜ್‌ನಲ್ಲಿ ಸುಮಾರು 1600 ಕೋಟಿ ರೂಪಾಯಿ ಹೂಡಲು ಮುಂದಾಗಿದೆ. ಅಂದಾನಿ ಗ್ರೂಪ್‌ನ ಅಡಿಯಲ್ಲಿ ಅಂಬುಜಾ ಸಿಮೆಂಟ್ ಲಿಮಿಟೆಡ್ ಇಲ್ಲಿ ಕೆಲಸವನ್ನು ಮಾಡಲಿದೆ.
ಅದಾನಿ ಗ್ರೂಪ್ 6 MTPA ನ ಸಿಮೆಂಟ್ ಮಿಶ್ರಣ ಘಟಕವನ್ನು ಬಿಹಾರದ ನವಾಡ ಜಿಲ್ಲೆಯ ಸ್ಥಾಪಿಸಲು ಯೋಜನೆ ರೂಪಿಸಿಕೊಂಡಿದೆ. ಉದ್ಯಮಿ ಗೌತಮ್ ಅದಾನಿ ಈ ಬಗ್ಗೆ ಶನಿವಾರ ಘೋಷಣೆ ಮಾಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಬಿಹಾರ ಹಾಗೂ ಆಂಧ್ರಪ್ರದೇಶಗಳಿಗೆ ಅತಿ ಹೆಚ್ಚಿನ ನೆರವನ್ನು ನೀಡಿತ್ತು. ಈಗ ಅದಾನಿ ಕಂಪನಿ ಸಹ ಬಿಹಾರದಲ್ಲಿ ಹಣ ಹೂಡಲು ಮುಂದಾಗಿದೆ. ಇಲ್ಲಿ ಈ ಘಟಕವನ್ನು ಸ್ಥಾಪನೆ ಮಾಡುವುದರಿಂದ ರಾಜ್ಯ ಸರ್ಕಾರಕ್ಕೆ 250 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಬಹುದಾಗಿದೆ. ಅಲ್ಲದೆ ಉದ್ಯೋಗವಕಾಶಗಳು ಹೆಚ್ಚಾಗಲಿವೆ. ಈ ಬಗ್ಗೆ ಮಾತನಾಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಅದಾನಿ ಗ್ರೂಪ್‌ನ ಹೂಡಿಕೆ ರಾಜ್ಯದಲ್ಲಿ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದ್ದಾರೆ.
ಬಿಹಾರ ರಾಜ್ಯದ ನಾವಡದಲ್ಲಿ ಅದಾನಿ ಗ್ರೂಪ್ ಸಿಮೆಂಟ್ ಕಾರ್ಖಾನೆ ಸ್ಥಾಪನೆ ಮಾಡುವುದರಿಂದ ಈ ಪ್ರದೇಶದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಸಾಧ್ಯ. ಈ ಕಾರ್ಖಾನೆಯನ್ನು ಆರಂಭಿಸುವುದರಿಂದ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಇದರಿಂದ ಕಾರ್ಮಿಕರು ಕೆಲಸಕ್ಕಾಗಿ ಬೇರೆ ಪ್ರದೇಶಗಳಿಗೆ ಹೋಗುವ ಅವಶ್ಯಕತೆ ಇಲ್ಲವೇ ಇಲ್ಲ. ಇದರಿಂದ ರಾಜ್ಯದಲ್ಲಿ ಉದ್ಯೋಗ ಕ್ರಾಂತಿ ಆಗುವ ಸಾಧ್ಯತೆ ಇದೆ.
ಅದಾನಿ ಗ್ರೂಪ್ ಉದ್ದೇಶಿಸಲು ಹೊರಟಿರುವ ಈ ಸಿಮೆಂಟ್ ಕಾರ್ಖಾನೆಯನ್ನು ಮೂರು ಹಂತಗಳಲ್ಲಿ ಪೂರ್ಣಗೊಳ್ಳಲಿದೆ. ಈ ಕಾರ್ಖಾನೆಯ ಸ್ಥಾಪನೆಗೆ ಮೊದಲ ಹಂತದಲ್ಲಿ ಕಂಪನಿ 1100 ಕೋಟಿ ರೂಗಳನ್ನು ಹೂಡಿಕೆ ಮಾಡಲಿದೆ. ಈ ಯೋಜನೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದೆ ಆದಲ್ಲಿ ಡಿಸೆಂಬರ್ 2025ರ ಒಳಗೆ ಪೂರ್ತಿ ಆಗುವ ಸಾಧ್ಯತೆ ಇದೆ.












Click it and Unblock the Notifications