ಕನ್ನಡ ಸೇರಿ 9 ಭಾಷೆಗಳಲ್ಲಿ NDTV ಹೊಸ ಚಾನಲ್‌ಗಳ ಆರಂಭ, ಪ್ರಸ್ತಾವನೆಗೆ MIB ಒಪ್ಪಿಗೆ
ಬೆಂಗಳೂರು ಮೇ 19: ಸುದ್ದಿ ಮಾಧ್ಯಮ ಸಂಸ್ಥೆಯಾದ ಎನ್‌ಡಿಟಿವಿ (NDTV) ವಾಹಿನಿಯು ಸದ್ಯ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿದೆ. ಮುಂದಿನ ದಿನಗಳಲ್ಲಿ ಈ ಎನ್‌ಟಿವಿಯ ವಾಹನಿಯನ್ನು ಕನ್ನಡ ಸೇರಿದಂತೆ ಇನ್ನಿತರ ಭಾಷೆಗಳಲ್ಲಿ ನೋಡಬಹುದಾಗಿದೆ. ವಿವಿಧ ಭಾಷೆಯಲ್ಲಿ ಎನ್‌ಡಿಟಿವಿ ಸುದ್ದಿ ಚಾನಲ್‌ಗಳ ಆರಂಭಕ್ಕೆ ಈಗಾಗಲೇ ಗ್ರಿನ್ ಸಿಗ್ನಲ್ ಸಿಕ್ಕಿದೆ.
ಎನ್‌ಡಿಟಿವಿ ಸುದ್ದಿ ಚಾನಲ್‌ಗಳ ಜಾಲ ಭಾರತದ ವಿವಿಧ ಭಾಷೆಗಳ ಪ್ರದೇಶಗಳಿಗೂ ವಿಸ್ತರಣೆ ಆಗಲಿದೆ. ಈ ಸಂಬಂಧ ಚಿಂತನೆ ನಡೆಸಿರುವ ಸಂಸ್ಥೆ ಹಂತ ಹಂತವಾಗಿ ಒಂಬತ್ತು ಭಾಷೆ ಸುದ್ದಿ ಚಾನಲ್‌ಗಳನ್ನು (ವಾಹಿನಿ) ಪ್ರಾರಂಭಿಸಲು ಯೋಜಿಸಿದೆ. ಅದಾನಿ ಸಮೂಹದ ನಿಯಂತ್ರಣಕ್ಕೆ ಬಂದ ನಂತರ ಈ ಎನ್‌ಡಿಟಿವಿ ಸಮೂಹದ ನೆಟ್‌ವರ್ಕ್‌ನ ಮೊದಲ ಪ್ರಮುಖ ವಿಸ್ತರಣೆ ಕಾಣುತ್ತಿದೆ.

ಪ್ರಸ್ತುತ ಎನ್‌ಡಿಟಿವಿ ಸಮೂಹವು ಇಂಗ್ಲಿಷ್ ಸುದ್ದಿ ಚಾನೆಲ್ ಎನ್‌ಡಿಟಿವ್ 24x7, ಹಿಂದಿ ಸುದ್ದಿ ಚಾನೆಲ್ ಎನ್‌ಡಿಟಿವಿ ಇಂಡಿಯಾ ಮತ್ತು ವ್ಯಾಪಾರ ಸುದ್ದಿ ಚಾನಲ್ ಎನ್‌ಡಿಟಿವಿ ಫ್ರಾಪಿಟ್ ನಿರ್ವಹಿಸುತ್ತದೆ. ಮುಂದಿನ ದಿನಗಳಲ್ಲಿ ಇಂಗ್ಲಿಷ್ ಮತ್ತು ಹಿಂದಿಯ ಹೊರತಾಗಿ, ಮರಾಠಿ, ಬೆಂಗಾಲಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷಾ ವಾಹಿನಿಗೂ ಪ್ರವೇಶಿಸಲಿದೆ. ಈ ಮೂಲಕ ಆಯಾ ಭಾಷೆಗಳಲ್ಲಿ ಎನ್‌ಡಿಟಿ ಕಾರ್ಯ ನಿರ್ವಹಿಸಲಿದೆ.
ಎನ್‌ಡಿಟಿವಿಯ ಒಂಬಂತ್ತು ಚಾನಲ್ ಆರಂಭಕ್ಕೆ ಅನುಮತಿ
ಉತ್ತರ ಪ್ರದೇಶ, ಬಿಹಾರ, ರಾಜಸ್ತಾನ್ ಮತ್ತು ಮಧ್ಯಪ್ರದೇಶದಂತಹ ಸುದ್ದಿ ಜಾಲ ಮಾರುಕಟ್ಟೆ ಗುರಿಯಾಗಿಟ್ಟುಕೊಂಡು ಅನೇಕ ಸುದ್ದಿ ಸಂಸ್ಥೆಗಳು ಆಯಾ ಭಾಷೆಗೆ ತಕ್ಕಂತೆ ನಿರ್ದಿಷ್ಟ ಚಾನಲ್ ಆರಂಭಿಸಿವೆ. ಅದೇ ಹಾದಿಯಲ್ಲಿ ಸಾಗುತ್ತಿರುವ ಎನ್‌ಡಿಟಿ ಸಲ್ಲಿಸಿದ ಪ್ರಸ್ತಾವನೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ (MIB) ಒಂಬತ್ತು ಸುದ್ದಿ ಚಾನೆಲ್‌ಗಳಿಗೆ ಪರವಾನಗಿ ಪಡೆಯುವ ಪ್ರಸ್ತಾವನೆ ಅನುಮೋದನೆ ನೀಡಿದೆ ಎಂದು ಎನ್‌ಡಿಟಿವಿ ಸಮೂಹ ತಿಳಿಸಿದೆ.

ನವದೆಹಲಿ ಟೆಲಿವಿಷನ್ ಲಿಮಿಟೆಡ್‌ನ (ಕಂಪನಿ) ನಿರ್ದೇಶಕರ ಮಂಡಳಿಯು ಕಳೆದ ಮೇ 17 ನಡೆಸಿದ ಸಭೆಯಲ್ಲಿ ಎನ್‌ಡಿಟಿವಿಯ ಒಂಬತ್ತು ಚಾನಲ್ ಬಿಡುಗಡೆಗೆ ಪ್ರಸ್ತಾಪವನೆಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅನುಮತಿ ನೀಡಿದೆ. ಕೆಲವೇ ದಿನಗಳಲ್ಲಿ ಒಂಬತ್ತು ಭಾಷೆಯ ಚಾನಲ್‌ಗಳ ಆರಂಭದ ಅಧಿಕೃತ ದಿನಾಂಕ ಘೋಷಣೆ ಆಗಲಿದೆ.
ಎಎಂಜಿ ಮೀಡಿಯಾ ನೆಟ್‌ವರ್ಕ್‌ಗಳ ಮುಖ್ಯಸ್ಥ ಸಂಜಯ್ ಪುಗಾಲಿಯಾ ಅವರು, NDTVಯ ಮಾಲೀಕತ್ವನ್ನು ವ್ಯಾಪ್ತಿಗೆ ಪಡೆದುಕೊಂಡ ನಂತರ ಅದಾನಿ ಸಮೂಹವು ಎನ್‌ಡಿಟಿವಿ ನ್ಯೂಸ್‌ರೂಮ್ ಅನ್ನು ಬಹುಮುಖಿ ಬಹು-ಮಾಧ್ಯಮ ಡಿಜಿಟಲ್ ವೇದಿಕೆಯಾಗಿ ಬಲಪಡಿಸುತ್ತದೆ. ಅದರಲ್ಲಿ ವ್ಯಾಪಕವಾಗಿ ಹೂಡಿಕೆ ಮಾಡುತ್ತಿದೆ ಎಂದು ತಿಳಿಸಿದರು.
ಅದಾನಿ ಗ್ರೂಪ್ ಪಾಲು ಶೇ.64.71
ಡಿಸೆಂಬರ್ 2022 ರಲ್ಲಿ ಎನ್‌ಡಿಟಿವಿ ಸಂಸ್ಥೆಯಲ್ಲಿ ಒಟ್ಟು ಶೇಕಡ 27.26ರಷ್ಟು ಪಾಲ ಹೊಂದಿದ್ದ ಅದಾನಿ ಸಮೂಹವು ಪ್ರವರ್ತಕರಾದ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಅವರಿಂದ ಪ್ರತಿ ಷೇರಿಗೆ ರೂ.342.65 ರಂತೆ 602.2 ಕೋಟಿ ರೂ.ಗೆ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿತು. ಈ ಮೂಲಕ ಎನ್‌ಡಿಟಿವಿ ಸುದ್ದಿ ಕಂಪನಿಯಲ್ಲಿ ಅದಾನಿ ಗ್ರೂಪ್ ಶೇಕಡಾ 64.71ರಷ್ಟು ಪಾಲು ಹೊಂದಿದೆ.
ಅದಾನಿ ಸಮೂಹವು ಎಎಂಜಿ ಮೀಡಿಯಾ ನೆಟ್‌ವರ್ಕ್ಸ್‌ನ ಸ್ವಾಮ್ಯದ ಅಂಗಸಂಸ್ಥೆಯಾಗಿರುವ ವಿಶ್ವಪ್ರಧನ್ ಕಮರ್ಷಿಯಲ್ ಕಂಪನಿ (VCPL) ನಿಂದ RRPR ಹೋಲ್ಡಿಂಗ್ ಕಂಪನಿಯಲ್ಲಿ (RRPR) ನಲ್ಲಿ ಶೇಕಡಾ 99.5ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಯಿತಿ. ಅಲ್ಲಿಂದ ಎನ್‌ಡಿಟಿವಿಯ ಷೇರು ಖರೀದಿಯನ್ನು ಅದಾನಿ ಗ್ರೂಪ್ ಹಂತ ಹಂತವಾಗಿ ಖರೀದಿಸಿ ಇದೀಗ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.
ವರದಿಯೊಂದರ ಪ್ರಕಾರ, ಭಾರತದ ಒಟ್ಟು ಚಾನೆಲ್‌ಗಳಲ್ಲಿ ಶೇಕಡಾ 44 ರಷ್ಟು ಸ್ಥಾನ ಸುದ್ದಿ ವಾಹಿನಿಗಳದ್ದೇ ಇದೆ. ಉಳಿದಂತೆ ಜಾಹೀರಾತು, ಇನ್ನಿತರ ಮನರಂಜೆನಗಳ ಚಾನಲ್‌ಗಳು ಸ್ಥಾನ ವಹಿಸಿಕೊಂಡಿವೆ ಎಂದು ತಿಳಿದು ಬಂದಿದೆ.












Click it and Unblock the Notifications