Adani Enterprises: ವಿಮಾನಯಾನ ಕ್ಷೇತ್ರಕ್ಕೆ ಅದಾನಿ ಎಂಟ್ರಿ? ಎಲ್ಲ ವದಂತಿಗಳಿಗೆ ಕಂಪನಿ ಫುಲ್‌ಸ್ಟಾಪ್
ಬೆಂಗಳೂರು: ಅದಾನಿ ಎಂಟರ್‌ಪ್ರೈಸಸ್ ಕಂಪನಿಯು ಹೊಸದಾಗಿ ವಿಮಾನ ಸಂಸ್ಥೆಯನ್ನು ತೆರೆಯುವ ಯೋಜನೆಗೆ ಕೈ ಹಾಕಿದೆ ಎಂಬ ಸುದ್ದಿಗಳು ಹರಿದಾಡಿವೆ. ಇದೆಲ್ಲ ವದಂತಿಗಳು ಎಂದು ಅದಾನಿ ತಿಳಿಸಿದೆ. ವಿಮಾನಯಾನ ಸಂಸ್ಥೆಯನ್ನು ಆರಂಭಿಸಲಿದೆ ಎಂಬ ಸುದ್ದಿಗಳನ್ನು ಹರಡಲಾಗಿದೆ. ಇವೆಲ್ಲವು ಸಂಪೂರ್ಣ ಆಧಾರರಹಿತ ಮತ್ತು ವಾಸ್ತವಿಕ ಸತ್ಯದಿಂದ ದೂರು ಉಳಿದಿವೆ ಎಂದು ಕಂಪನಿಯ ವಕ್ತಾರರು ಅಧಿಕೃತ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅದಾನಿ ಎಂಟರ್‌ಪ್ರೈಸಸ್ ವಿಮಾನಯಾನ ಸಂಸ್ಥೆಯನ್ನು ಪ್ರಾರಂಭಿಸಲು ಚಿಂತನೆ ಮಾಡಿದೆ ಎಂಬ ಮಾಧ್ಯಮ ವರದಿಗಳು ಹಾಗೂ ಮಾರುಕಟ್ಟೆ ಊಹಾಪೋಹಗಳು ಸ್ಪಷ್ಟವಾಗಿ ನಿರಾಕರಿಸಲು ಬಯಸುತ್ತೇವೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ವಾಸ್ತವಿಕವಾಗಿ ತಪ್ಪಾಗಿವೆ" ಎಂದು ಈ ಸುಳ್ಳು ಸುದ್ದಿಗಳನ್ನು ಕಂಪನಿ ನಿರಾಕರಿಸಿದೆ ಎಂದು ಸ್ಪಷ್ಟಪಡಿಸಿದೆ.

ವಿಮಾನಯಾನ ವ್ಯವಹಾರವನ್ನು ಕಂಪನಿಯು ಪ್ರವೇಶಿಸುತ್ತಿದೆ. ಈ ಬಗ್ಗೆ ಯಾವುದೇ ಪ್ರಸ್ತಾಪವನ್ನು ಅದಾನಿ ಎಂಟರ್‌ಪ್ರೈಸಸ್ ಹೊಂದಿಲ್ಲ. ವಿಮಾನ ನಿಲ್ದಾಣಗಳು, ಇಂಧನ, ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ವಿಸ್ತರಿಸಿವೆ. ಇದರ ನಡುವೆ ಅದಾನಿ ಗ್ರೂಪ್ ವಾಯುಯಾನಕ್ಕೆ ವೈವಿಧ್ಯಗೊಳಿಸುವ ಸಾಧ್ಯತೆಯ ಬಗ್ಗೆ ವ್ಯವಹಾರ ಮತ್ತು ಹಣಕಾಸು ವಲಯಗಳಲ್ಲಿ ಹೆಚ್ಚುತ್ತಿರುವ ಬಿರುಸಿನ ಚರ್ಚೆ ಮಧ್ಯ ಹೊಸ ವಾಯುಯಾನ ಸಂಸ್ಥೆ ತೆರೆಯಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು.
ವದಂತಿಗೆ ತೆರೆ ಎಳೆದ ಅದಾನಿ ಕಂಪನಿ
ಕಂಪನಿಯು ಅಧಿಕೃತ ಹೇಳಿಕೆ ಮೂಲಕ ಇತ್ತೀಚೆಗೆ ಕಂಡು ಬಂದ ವದಂತಿ, ಊಹಾಪೋಹಗಳಿಗೆ ತೆರೆ ಎಳೆಯಲು ಪ್ರಯತ್ನಿಸಿದೆ. ಹೊಸ ವಿಮಾನಯಾನ ಉದ್ಯಮವನ್ನು ಪ್ರಾರಂಭಿಸಲು ಯಾವುದೇ ಉದ್ದೇಶ ಹೊಂದಿಲ್ಲ ಎಂದು ಪುನರುಚ್ಚರಿಸಿದೆ. ಅದಾನಿ ಗ್ರೂಪ್‌ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್, ವಿಮಾನ ನಿಲ್ದಾಣಗಳು, ಗಣಿಗಾರಿಕೆ, ನವೀಕರಿಸಬಹುದಾದ ಇಂಧನ, ದತ್ತಾಂಶ ಕೇಂದ್ರಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಣೆ ಮುಂದುವರಿಸಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Click it and Unblock the Notifications
