Trisha-Vijay: ಈ ವಯಸ್ಸಲ್ಲಿ ಡ್ರಾಮಾ ಬೇಕಾ..? ತ್ರಿಷಾ ನಿಗೂಢ ಪೋಸ್ಟ್ ಯಾರಿಗೆ ಟಕ್ಕರ್?
ತಮಿಳುನಾಡು ಸಿಎಂ ವಿಜಯ್ ಹಾಗೂ ನಟಿ ತ್ರಿಷಾ ಅವರ ನಡುವಿನ ಸಂಬಂಧದ ಕುರಿತು ಹಲವು ದಿನಗಳಿಂದ ಚರ್ಚೆಗಳು ಹಾಗೂ ವದಂತಿಗಳು ಹರಿದಾಡುತ್ತಿವೆ. ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ತ್ರಿಷಾ ಹೆಸರು ಕೇಳಿಬಂದಿತ್ತು. ಈ ಬೆನ್ನಲ್ಲೇ ತ್ರಿಷಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಿಗೂಢ ಪೋಸ್ಟ್‌ಗಳು ಇದೀಗ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿವೆ.
ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ತ್ರಿಷಾ, "ಈ ವಯಸ್ಸಿನಲ್ಲಿ ಡ್ರಾಮಾ ಮಾಡುವುದು ನಿಜಕ್ಕೂ ನಾಚಿಕೆಗೇಡು. ಹೋಗಿ ಸ್ವಲ್ಪ ಹಣ ಸಂಪಾದಿಸಿ, ಜೀವನದಲ್ಲಿ ಶಾಂತಿ ಕಂಡುಕೊಳ್ಳಿ" ಎಂಬರ್ಥದ ಸಂದೇಶವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ಒಮ್ಮೆ ದೇವರಲ್ಲಿ ಪ್ರಾರ್ಥಿಸಿದ್ದ ಸುಂದರ ಜೀವನವೇ ಇಂದು ನಿಮಗೆ ಸಿಕ್ಕಿರುವುದು ಎಂತಹ ಅದೃಷ್ಟ ಎಂಬ ಮತ್ತೊಂದು ಸಂದೇಶವನ್ನೂ ಪೋಸ್ಟ್ ಮಾಡಿದ್ದಾರೆ.

ಆದರೆ ಈ ಪೋಸ್ಟ್‌ಗಳನ್ನು ತ್ರಿಷಾ ಯಾರನ್ನು ಉದ್ದೇಶಿಸಿ ಹಾಕಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇತ್ತೀಚೆಗೆ ತಮ್ಮ ಹಾಗೂ ವಿಜಯ್ ಕುರಿತು ಕೇಳಿಬರುತ್ತಿರುವ ಟೀಕೆಗಳು ಮತ್ತು ವಿವಾದಗಳ ಹಿನ್ನೆಲೆಯಲ್ಲಿ ಅವರು ಈ ರೀತಿಯ ಪೋಸ್ಟ್ ಮಾಡಿದ್ದಾರೆಯೇ ಎಂಬ ಚರ್ಚೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ.
ಇತ್ತೀಚೆಗೆ ತ್ರಿಷಾ ಹಾಗೂ ವಿಜಯ್ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ಕೂಡ ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರದ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲೂ ಸಾಕಷ್ಟು ಚರ್ಚೆಗಳು ನಡೆದಿದ್ದವು.
ಇನ್ನೊಂದೆಡೆ, ಎಐಎಡಿಎಂಕೆ ನಾಯಕ ಉದಯಕುಮಾರ್ ಅವರು ತ್ರಿಷಾ ಶೀಘ್ರದಲ್ಲೇ ಡಿಸಿಎಂ ಆಗಲಿದ್ದಾರೆ ಎಂಬ ವ್ಯಂಗ್ಯಾತ್ಮಕ ಹೇಳಿಕೆ ನೀಡಿದ್ದರು. ಇದರ ನಡುವೆ ವಿಜಯ್ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ, ಪತ್ನಿ ಸಂಗೀತಾ ಅವರೊಂದಿಗೆ ವಿಚ್ಛೇದನದ ವದಂತಿಗಳಿಗೂ ತ್ರಿಷಾ ಅವರ ಹೆಸರನ್ನು ಜೋಡಿಸಲಾಗಿತ್ತು.
ಈ ಎಲ್ಲ ಬೆಳವಣಿಗೆಗಳ ನಡುವೆಯೂ ತ್ರಿಷಾ ಇದುವರೆಗೆ ಯಾವುದೇ ವಿವಾದದ ಬಗ್ಗೆ ನೇರವಾಗಿ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಅವರು ಹಂಚಿಕೊಂಡಿರುವ ನಿಗೂಢ ಪೋಸ್ಟ್‌ಗಳು ಯಾರಿಗೆ ಉದ್ದೇಶಿತ ಎಂಬುದು ಸ್ಪಷ್ಟವಾಗದಿದ್ದರೂ, ನೆಟ್ಟಿಗರು ಮಾತ್ರ ಇದನ್ನು ಇತ್ತೀಚಿನ ವಿವಾದಗಳಿಗೆ ತ್ರಿಷಾ ನೀಡಿರುವ ಪರೋಕ್ಷ ತಿರುಗೇಟು ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ, ತ್ರಿಷಾ ತಮ್ಮ ಪೋಸ್ಟ್‌ಗಳಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದಿರುವುದರಿಂದ, ಈ ಸಂದೇಶಗಳು ನಿಜವಾಗಿಯೂ ಯಾರನ್ನು ಉದ್ದೇಶಿಸಿವೆ ಎಂಬುದು ಸದ್ಯಕ್ಕೆ ಊಹಾಪೋಹವಾಗಿಯೇ ಉಳಿದಿದೆ.


Click it and Unblock the Notifications
