ನಟಿ ಮೇಲೆ ಹಲ್ಲೆ ಪ್ರಕರಣ, ಪಲ್ಸರ್ ಸುನಿ ಮೊಬೈಲ್ ಎಲ್ಲಿ?
ಬಹುಭಾಷಾ ನಟಿ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಸುನಿಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿ ಹಾಗೂ ಮತ್ತೊಬ್ಬ ಆರೋಪಿ ವಿಜೇಶ್ ನನ್ನು ಕೊಯಮತ್ತೂರಿಗೆ ಕರೆದೊಯ್ಯಲಾಗಿದೆ.
ಕೊಯಮತ್ತೂರು, ಫೆಬ್ರವರಿ 27: ಬಹುಭಾಷಾ ನಟಿ ಕಿಡ್ನಾಪ್ ಹಾಗೂ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಸುನಿಲ್ ಕುಮಾರ್ ಅಲಿಯಾಸ್ ಪಲ್ಸರ್ ಸುನಿ ಹಾಗೂ ಮತ್ತೊಬ್ಬ ಆರೋಪಿ ವಿಜೇಶ್ ನನ್ನು ಕೊಯಮತ್ತೂರಿಗೆ ಕರೆದೊಯ್ಯಲಾಗಿದೆ. ದುಷ್ಕೃತಕ್ಕೆ ಬಳಸಲಾದ ಮೊಬೈಲ್ ಫೋನ್ ಪತ್ತೆಗೆ ಕೇರಳ ಪೊಲೀಸರು ಮುಂದಾಗಿದ್ದಾರೆ.
ಆದರೆ, ದೌರ್ಜನ್ಯದ ದೃಶ್ಯಗಳನ್ನು ಸೆರೆ ಹಿಡಿಯಲಾದ ಸ್ಮಾರ್ಟ್ ಫೋನನ್ನು ನದಿಗೆ ಎಸೆದೆ ಎಂದು ಸುನಿ ವಿಚಾರಣೆ ವೇಳೆ ಹೇಳಿದ್ದಾನೆ.ನಟಿಯನ್ನು ಅಪಹರಿಸಿ, ಕಿರುಕುಳ ನೀಡಿದ ಘಟನಾ ಸ್ಥಳಕ್ಕೆ ಆರೋಪಿಗಳನ್ನು ಕರೆದೊಯ್ದು ಮಾಹಿತಿ, ಸಾಕ್ಷ್ಯ ಸಂಗ್ರಹ ನಡೆಸಿದ ಪೊಲೀಸರಿಗೆ ಫೋನ್ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.['ನಟಿ ಮೇಲೆ ನಡೆದಿದ್ದು ವ್ಯವಸ್ಥಿತವಾದ ಹಲ್ಲೆ']

ಸದ್ಯ ಸುನಿ ಬಳಿ ಇದ್ದ ಹೊಸ ಮೊಬೈಲ್ ಫೋನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಳೆ ಮೊಬೈಲ್ ಫೋನ್ ಎಲ್ಲಿದೆ ಗೊತ್ತಿಲ್ಲ.ಆಳುವ ಡಿಸಿಪಿ ಕೆಜಿ ಬಾಬು ಕಮರ್ ನೇತೃತ್ವದ ತನಿಖಾ ತಂಡ ಸೋಮವಾರ ಬೆಳಗ್ಗೆ ಸುನಿ ಹಾಗೂ ವಿಜೇಶ್ ರನ್ನು ಕೊಯಮತ್ತೂರಿಗೆ ಕರೆ ತಂದಿದೆ. ಘಟನೆ ಬಳಿಕ ತಲೆ ಮರೆಸಿಕೊಳ್ಳಲು ಬಳಸಿದ್ದ ಅಡಗುತಾಣದಲ್ಲಿ ಶೋಧ ಕಾರ್ಯ ಮುಂದುವರೆದಿದೆ.[ಪಲ್ಸರ್ ಸುನಿಯನ್ನು ಬಂಧಿಸಿದ್ದು ಹೇಗೆ?][ನಟಿ ಕಿಡ್ನಾಪ್ : ಕೊಯಮತ್ತೂರಿನಲ್ಲಿ 7 ಕಾಮುಕರ ಬಂಧನ]
ಕೊಯಮತ್ತೂರಿನಲ್ಲಿ ಆರೋಪಿಗಳಿಗೆ ನೆಲೆ ನೀಡಿದ್ದ ಮನೆ ಮಾಲೀಕನನ್ನು ಕಣ್ಣೂರು ಮೂಲದ ಚಾರ್ಲಿ ಎಂದು ಗುರುತಿಸಲಾಗಿದೆ. ಈತ ಕೂಡಾ ತಲೆ ಮರೆಸಿಕೊಂಡಿದ್ದಾನೆ. ಸದ್ಯಕ್ಕೆ ಈ ರೂಮಿನಿಂದ ಒಂದು ಮೊಬೈಲ್, ಟ್ಯಾಬ್, ಟೀ ಶರ್ಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುನಿ ಮೊಬೈಲ್ ನಲ್ಲಿ ಏನೇನಿತ್ತು ಎಂಬುದು ತಿಳಿದಿಲ್ಲ.[ನಟಿ ಮೇಲೆ ಕಿರುಕುಳ, ನನ್ನ ಪಾತ್ರವಿಲ್ಲ ಎಂದ ಸ್ಟಾರ್ ನಟ]












Click it and Unblock the Notifications