Actor Vijay: ದಳಪತಿ ವಿಜಯ್‌ಗೆ "ಚಿನ್ನ" ಎಂದ ಪ್ರಕಾಶ್‌ರಾಜ್‌, ಟ್ವೀಟ್‌ನಲ್ಲಿ ಏನಿದೆ ?

Actor Vijay: ತಮಿಳುನಾಡು ರಾಜಕೀಯದಲ್ಲಿ ದಳಪತಿ ವಿಜಯ್‌ ಅವರು ಭಾರೀ ಸಂಚನವನ್ನೇ ಸೃಷ್ಟಿ ಮಾಡಿದ್ದಾರೆ. ನಟ ಹಾಗೂ ರಾಜಕಾರಣ ದಳಪತಿ ವಿಜಯ್‌ ಅವರ ರಾಜಕೀಯ ಪ್ರವೇಶ ತಮಿಳುನಾಡು ರಾಜಕೀಯದಲ್ಲಿ ಭಾರೀ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿದೆ. ಭಾನುವಾರ ವಿಜಯ್‌ ಅವರು ಅವರ ರಾಜಕೀಯ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮೊದಲ ರಾಜ್ಯಮಟ್ಟದ ಸಮಾವೇಶವನ್ನು ಮಾಡಿದ್ದಾರೆ. ಈ ನಡುವೆ ನಟ ಪ್ರಕಾಶ್‌ ರಾಜ್‌ ಅವರು ವಿಜಯ್‌ಗೆ ಚಿನ್ನ ಅಂತ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

ತಮಿಳುನಾಡಿನಲ್ಲಿ 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಹಲವು ಕಾರಣಗಳಿಂದ ಈಗ ಆಡಳಿತದಲ್ಲಿ ಇರುವ ಡಿಎಂಕೆ ಪಾರ್ಟಿ (ದ್ರಾವಿಡ ಮುನ್ನೇತ್ರ ಕಳಗಂ)ಯ ಬಗ್ಗೆ ಜನರಲ್ಲಿ ಸಣ್ಣ ಅಸಮಾಧಾನ ಶುರುವಾಗಿದೆ. ಅಲ್ಲದೇ ಕುಟುಂಬ ರಾಜಕೀಯದ ಬಗ್ಗೆ ಡಿಎಂಕೆ ಪಾರ್ಟಿಯ ಕಾರ್ಯಕರ್ತರೇ ಅಸಮಾಧಾನಿತರಾಗಿದ್ದಾರೆ.

Actor Vijay Prakashraj called Dalpati Vijay gold what s in the tweet

ಈ ನಡುವೆ ಎಐಎಡಿಎಂಕೆ (ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ) ತನ್ನ ಚಾರ್ಮ್‌ ಕಳೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿಧನದ ನಂತರ ಎಐಎಡಿಎಂಯಿಂದ ಪೈಪೋಟಿ ನೀಡುವ ನಾಯಕರು ಕಾಣಿಸುತ್ತಿಲ್ಲ. ಇನ್ನು ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆ ತಮಿಳುನಾಡಿನಲ್ಲಿ ಇಲ್ಲ.

ಈ ಸಂದರ್ಭದಲ್ಲೇ ತಮಿಳು ಚಿತ್ರರಂಗದ ಮೇರು ನಟ ದಳಪತಿ ವಿಜಯ್‌ ಅವರ ರಾಜಕೀಯ ಪ್ರವೇಶ ಪ್ರಾರಂಭವಾಗಿದೆ. ತಮಿಳು ರಾಜಕೀಯದಲ್ಲಿ ಇವರ ಆಗಮನ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. 2026ನೇ ಸಾಲಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕೆ ಎರಡು ವರ್ಷ ಬಾಕಿ ಉಳಿದಿರುವಾಗಲೇ ವಿಜಯ್‌ ಅ ಖಾಡಕ್ಕೆ ಇಳಿದಿದ್ದು ಭಾರೀ ಸಂಚಲನ ಮೂಡಿಸುತ್ತಿದ್ದಾರೆ.

Actor Vijay Prakashraj called Dalpati Vijay gold what s in the tweet

ಹಾಯ್‌ ಚಿನ್ನ ಎಂದ ಪ್ರಕಾಶ್‌ ರಾಜ್‌: ನಟರಾದ ಪ್ರಕಾಶ್‌ರಾಜ್‌ ಹಾಗೂ ವಿಜಯ್‌ ನಡುವೆ ಉತ್ತಮ ಸ್ನೇಹ ಸಂಬಂಧ ಇದೆ. ಈ ಹಿಂದೆಯೂ ಈ ಇಬ್ಬರು ನಟರು ಸೇರಿ ವಿವಿಧ ಹಿಟ್‌ ಮೂವಿಗಳನ್ನು ತಮಿಳುನಲ್ಲಿ ಕೊಟ್ಟಿದ್ದಾರೆ. ವಿಜಯ್‌ ಅಧಿಕೃತವಾಗಿ ಮೊದಲ ರಾಜ್ಯ ಮಟ್ಟದ ಸಮಾವೇಶವನ್ನು ಮಾಡುತ್ತಿದ್ದಂತೆಯೇ ಪ್ರಕಾಶ್‌ ರಾಜ್‌ ಅವರು ವಿಜಯ್‌ಗೆ ಭಿನ್ನವಾಗಿ ಚಿನ್ನ ಎಂದಿದ್ದಾರೆ.

ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪ್ರಕಾಶ್‌ ರಾಜ್‌ ಅವರು, ಆಲ್‌ ದಿ ಬೆಸ್ಟ್‌ ಚೆಲ್ಲಂ (ಚಿನ್ನ) ವಿಜಯ್‌ ನಿಮ್ಮ ಹೊಸ ಪಯಣಕ್ಕೆ ಶುಭವಾಗಲಿ ( All the best Chellam, on your new journey..) ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಇದೀಗ ಭಾರೀ ವೈರಲ್ ಆಗಿದೆ.

ಜನಸ್ತೋಮ: ತಮಿಳುನಾಡಿನಲ್ಲಿ ಭಾನುವಾರ ನಡೆದ ದಳಪತಿ ವಿಜಯ್‌ ಅವರ ಮೊದಲ ಹಾಗೂ ರಾಜ್ಯ ಮಟ್ಟದ ಸಮಾವೇಶಕ್ಕೆ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಜನ ಅಭಿಮಾನಿಗಳು ಹಾಗೂ ಬೆಂಬಲಿಗರು ಸೇರಿದ್ದಾರೆ. ಜನ ಸೇರಿರುವುದನ್ನು ನೋಡಿಯೇ ಅಲ್ಲಿನ ರಾಜಕೀಯ ಪಕ್ಷಗಳಿಗೆ ಸಣ್ಣದಾಗಿ ನಡುಕ ಶುರುವಾಗಿದೆ. ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡದೆ, ನೇರವಾಗಿ ವಿಧಾನಸಭೆ ಚುನಾವಣೆಯಲ್ಲೇ ಸ್ಪರ್ಧೆ ಮಾಡುವುದಕ್ಕೆ ವಿಜಯ್‌ ಭರ್ಜರಿ ಪ್ಲಾನ್‌ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+