ಜಗನ್ ಸಂಬಂಧಿ ಮದ್ವೆಗೆ ಜೊತೆಯಾಗಿ ಹೋದ ತಮಿಳುನಾಡು ಸಿಎಂ ವಿಜಯ್ ಮತ್ತು ನಟಿ ತ್ರಿಶಾ: ಇದು ಬೇಕಾ ಕೇಳ್ತಿದ್ದಾರೆ ನೆಟ್ಟಿಗರು

Vijay-Trisha News: ಆಂಧ್ರ ಮಾಜಿ ಸಿಎಂ ಸಂಬಂಧ ಮದುವೆ ಮನೆಗೆ ಕಲರ್ ಫುಲ್ ಡ್ರೆಸ್‌ನಲ್ಲಿ ತಮಿಳುನಾಡು ಸಿಎಂ ವಿಜಯ್ ಜೋಸೆಫ್ ಮತ್ತು ನಟಿ ತ್ರಿಶಾ ಒಟ್ಟಿಗೆ ಕಾಣಿಸಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ವೇದಿಕೆ ಮೇಲೆ ಒಟ್ಟಿಗೆ ಬಂದು ವಿಶ್ ಮಾಡಿದ್ದು,ವಿಡಿಯೋ ವೈರಲ್ ಆಗುತ್ತಿದೆ.

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸಂಬಂಧಿಯ ವಿವಾಹ ಅರತಕ್ಷತೆಯು ಚೆನ್ನೈನಲ್ಲಿ ನಡೆಯಿತು. ಈ ವೇಳೆ ಪ್ರಮುಖ ರಾಜಕೀಯ ನಾಯಕರು, ಉದ್ಯಮಿಗಳು ಆಗಮಿಸಿದ್ದರು. ತಮಿಳುನಾಡು ಮುಖ್ಯಮಂತ್ರಿ ವಿಜಯ್, ಮತ್ತವರ ಸ್ನೇಹಿತೆ ನಟಿ ತ್ರಿಶಾ ಅವರು ಜೊತೆಯಾಗಿ ವೇದಿಕೆಗೆ ಬಂದು ವಧು-ವರರಿಗೆ ವಿಶ್ ಮಾಡಿದ್ದಾರೆ. ಇತ್ತೀಚಿನ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ನೆಟ್ಟಿಗರು ಇದೆಲ್ಲ ಈಗಲೂ ಬೇಕಾ? ಎಂದು ಕೇಳುತ್ತಿದ್ದಾರೆ.

Vijay-Trisha News

ವೈ.ಎಸ್. ಜಗನ್ ಮೋಹನ್ ರೆಡ್ಡಿ ಹಾಗೂ ಅವರ ಸಹೋದರಿ, ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಮಧ್ಯೆ ಇದೇ ಮದುವೆಯ ಬೆಂಗಳೂರು ಲೋಕೇಷನ್ ವಿಚಾರವಾಗಿ ಒಂದಷ್ಟು ವಿವಾದ, ಜಗಳ ಉಂಟಾಗಿತ್ತು. ಕೊನೆಗೂ ವಿವಾದ ಸುಖಾಂತ್ಯವಾಗಿದ್ದು, ವಿವಾಹ ಕಾರ್ಯಕ್ರಮಗಳು ಆರಂಭವಾಗಿವೆ.

ತ್ರಿಶಾ, ವಿಜಯ್ ಜತೆ ತಾಯಿ ಹಾಜರ್

ಚೆನ್ನೈನಲ್ಲಿ ಗುರುವಾರ ನಡೆದ ಅರತಕ್ಷತೆಗೆ ಖ್ಯಾತ ಉದ್ಯಮಿ ಗೌತಮ್ ಅದಾನಿ, ವಿವಿಧ ರಾಜಕೀಯ ಗಣ್ಯರು ಬಂದು ಆಶೀರ್ವದಿಸಿದ್ದಾರೆ. ಸಿಎಂ ವಿಜಯ್, ತ್ರಿಶಾ ಜೊತೆಗೆ ವಿಜಯ್ ತಾಯಿ ಶೋಭಾ ಚಂದ್ರಶೇಖರ್ ಅವರು ಆಗಮಿಸಿ ಹೂಗುಚ್ಚ ನೀಡಿ ನವ ದಂಪತಿಗಳಿಗೆ ಶುಭ ಕೋರಿದ್ದಾರೆ. ವೇದಿಕೆಯಲ್ಲಿ ತ್ರಿಶಾ- ವಿಜಯ್ ಒಟ್ಟಿಗೆ ಕಾಣಿಸಿಕೊಂಡ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿವೆ.

ವಿಜಯ್ ಅವರು ಕಂದು ಬಣ್ಣದ ರಾಯಲ್ ಸೂಟ್ ಧರಿಸಿದರೆ, ತ್ರಿಶಾ ಅವರು ತಿಳಿ ಗುಲಾಬಿ ಬಣ್ಣದಲ್ಲಿ ದಂಪತಿಗಳಂತೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಮದುವೆ ಮನೆಯಲ್ಲಿ ವಧು-ವರರ ಜೊತೆಗೆ ಸಿಎಂ ವಿಜಯ್-ತ್ರಿಶಾ ಅವರ ಜೋಡಿ ಸಹ ವಿಶೇಷ ರೀತಿಯಲ್ಲಿ ಕಾಣಿಸಿತು. ಬಳಿಕ ವೇದಿಕೆಯಿಂದ ಇಳಿದು ಬಂದು ಮೂವರು ಒಂದೇ ಕಡೆ ಕೂತು ವಿವಾಹ ಸಮಾರಂಭ ವೀಕ್ಷಿಸಿದರು.

ವಿಜಯ್-ತ್ರಿಶಾ ಜೊತೆಯಾಗಿ ಭೇಟಿ ಮೊದಲೇನಲ್ಲ!

ತ್ರಿಶಾ ಅವರನ್ನು ವಿಜಯ್ ಅವರು ಮದುವೆ ಆಗುತ್ತಾರೆ, ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ ಎಂಬ ಸುದ್ದಿಗಳು ಮೇಲಿಂದ ಮೇಲೆ ಹರಿದಾಡುತ್ತಲೇ ಇವೆ. ಈಗಾಗಲೇ ಸಿಎಂ ವಿಜಯ್ ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿ, ಮರಳಿ ಅರ್ಜಿ ಹಿಂಪಡೆದಿದ್ದಾರೆ. ವಿಜಯ್ ಮತ್ತು ಪತ್ನಿ ಸಂಗೀತಾ ಅವರು ಮತ್ತೆ ಒಂದಾಗುತ್ತಾರೆ ಅಂತಲೂ ಹೇಳಲಾಗಿತ್ತು.

ಈ ನಡುವೆ ಸಿಎಂ ಆದ ವಿಜಯ್ ಅವರ ಪದಗ್ರಹಣಕ್ಕೂ ನಟಿ ತ್ರಿಶಾ ತಮ್ಮನೆಯ ಸಮಾರಂಭವೆಂಬಂತೆ ರೆಡಿಯಾಗಿ ಬಂದಿದ್ದರು. ಆವತ್ತು ಕಾರ್ಯಕ್ರಮದಲ್ಲಿ ತ್ರಿಶಾ ಅವರೇ ಹೈಲೈಟ್ ಆಗಿದ್ದರು. ಇತ್ತೀಚೆಗೆ ಆಗಸ್ಟ್ 15ರಂದು ತಮಿಳುನಾಡು ಸರ್ಕಾರದಿಂದ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲೂ ಅವರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅಲ್ಲದೇ ಸ್ಪೋರ್ಟ್ಸ್ ಕಾರ್ಯಕ್ರಮಕ್ಕೂ ಅವರು ಇಬ್ಬರು ಜೊತೆಯಾಗಿಯೇ ತೆರಳಿದ್ದರು. ಅದರ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇವರಿಬ್ಬರು ಜೊತೆಗೇ ಕಂಡಾಗಲೆಲ್ಲ ಅದೇ ಸುದ್ದಿಯಾಗುತ್ತದೆ. ಇದೀಗ ಜಗನ್ ಸಂಬಂಧಿ ಮದುವೆಗೂ ಅವರು ಜೋಡಿಯಾಗಿ ಬಂದಿದ್ದಾರೆ. ಫ್ಯಾನ್ಸ್ ಈಗಲೂ ಇದೆಲ್ಲ ಬೇಕಾ ಎಂದು ಕೇಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+