Vijay Trisha: ವಿಜಯ್ ಜೊತೆ ತ್ರಿಶಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಎಂದಿದ್ಯಾಕೆ ಚಲಿಸುವ ಮೋಡಗಳು ನಟಿ ಅಂಬಿಕಾ!

ನಟಿ ತ್ರಿಶಾ ಕೃಷ್ಣನ್ ಹಾಗೂ ನಟ, ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಇತ್ತೀಚಿನ ದಿನಗಳಲ್ಲಿ ಮತ್ತೆ ಒಂದಾಗಿ ಕಾಣಿಸಿಕೊಳ್ಳುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ತ್ರಿಶಾ ಹಾಗೂ ವಿಜಯ್ ಅವರು ಒಂದಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಚಲಿಸುವ ಮೋಡಗಳು ನಟಿ ಅಂಬಿಕಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯುಕೆಯ ಸಿಲ್ವರ್‌ಸ್ಟೋನ್‌ನಲ್ಲಿ ಈಚೆಗೆ ಅಜಿತ್ ಕುಮಾರ್ ಅವರ "ಲೆ ಮಾನ್ಸ್ ಕಪ್' (Le Mans Cup) ಕಾರ್ ರೇಸ್‌ನಲ್ಲಿ ವಿಜಯ್ ಹಾಗೂ ತ್ರಿಶಾ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಚಾಲನೆ ನೀಡಿದ್ದರು. ವಿಜಯ್ ರೇಸ್ ವೀಕ್ಷಿಸುತ್ತಿರುವ ಸಂದರ್ಭದಲ್ಲಿ ತ್ರಿಶಾ ಸಹ ಕಾಣಿಸಿಕೊಂಡಿದ್ದರು. ಈ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರ ಪ್ರಮುಖ ಕಾರ್ಯಕ್ರಮಗಳಲ್ಲಿ ತ್ರಿಶಾ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ತ್ರಿಶಾ ಹಾಗೂ ವಿಜಯ್ ಅವರು ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಇದೀಗ ಬಹುಭಾಷಾ ನಟಿ ಅಂಬಿಕಾ ಅವರು ಮಾತನಾಡಿದ್ದಾರೆ.

Vijay Trisha Friendship Chalisuva modagalu Actress Ambika Reacts to Their Recent Public Appearances

"ರೆಡ್‌ಪಿಕ್ಸ್' (RedPix) ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅಂಬಿಕಾ ಅವರು, ವಿಜಯ್ ಮತ್ತು ತ್ರಿಶಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಬಾರದು ಅಂತ ಹೇಳಿದ್ದಾರೆ. ಅಂಬಿಕಾ ಅವರು, ವಿಜಯ್ ಮತ್ತು ತ್ರಿಶಾ ನಡುವಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಪ್ರಭಾವಿ ಸ್ಥಾನದಲ್ಲಿರುವ ಆಪ್ತ ಸ್ನೇಹಿತರನ್ನು ಒಳಗೊಂಡ ಅನಗತ್ಯ ಊಹಾಪೋಹ ಅಥವಾ ಟೀಕೆಗೆ ಕಾರಣವಾಗುವ ಸಂದರ್ಭಗಳಿಂದ ದೂರವಿರುವುದು ಒಳ್ಳೆಯದು ಅಂತ ಹೇಳಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಅಂಬಿಕಾ ಅವರು, ಇತ್ತೀಚೆಗೆ ನಾನು ತ್ರಿಶಾ ಬಗ್ಗೆ ಮಾತನಾಡಿರುವ ಸಂದರ್ಶನವೊಂದನ್ನು ನೀಡಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ ಯಾರೋ ಒಬ್ಬರು ತ್ರಿಶಾ ಅವರನ್ನು ಬೆಂಬಲಿಸಿ, 'ಅವರು 1980ರ ದಶಕದ ತ್ರಿಶಾ ಆಗಿದ್ದರಾ?' ಎಂದು ಪ್ರಶ್ನಿಸಿದ್ದಾರೆ. ಈಗ ನನಗೆ ಎರಡು ವಿಷಯಗಳನ್ನು ತಿಳಿದುಕೊಳ್ಳಬೇಕು. ನಾನು 1980ರ ದಶಕದ ತ್ರಿಶಾ ಆಗಿದ್ದರೆ, 1980ರ ದಶಕದ ವಿಜಯ್ ಯಾರು? ನನಗೆ ತಿಳಿಯಬೇಕು. ಆ ವ್ಯಕ್ತಿ ನನಗೆ ಅದನ್ನು ಹೇಳಬೇಕು. ಅದು ಒಂದು ವಿಷಯ ಎಂದಿದ್ದಾರೆ.

ಅಭಿಮಾನಿಗಳು ಎಷ್ಟು ಸಮರ್ಥಿಸಿಕೊಂಡಾರು ?

ನೀವು ಒಂದೇ ರೀತಿಯ ಬಟ್ಟೆ ಧರಿಸುವುದು, ಒಂದೇ ಮಾದರಿಯ ಡ್ರೆಸ್ ಹಾಕಿಕೊಳ್ಳುವುದರ ಬಗ್ಗೆ ಮಾತನಾಡುತ್ತಿದ್ದೀರಾ ಅಥವಾ ಲಂಡನ್‌ಗೆ ಒಟ್ಟಿಗೆ ಪ್ರಯಾಣಿಸುವುದರ ಬಗ್ಗೆ ಮಾತನಾಡುತ್ತಿದ್ದೀರಾ ಎಂದು ಕೆಲವರು ಕೇಳಿದ್ದಾರೆ. ನಾನು ಅವರ ಸ್ಥಾನದಲ್ಲಿದ್ದರೆ, ನಾನು ಮಾಡುವ ಯಾವುದಾದರೂ ಕೆಲಸದಿಂದ ನನ್ನ ಸ್ನೇಹಿತನಿಗೆ ಟೀಕೆ ಎದುರಾಗಬಹುದು ಅಥವಾ ಕೆಟ್ಟ ಹೆಸರು ಬರಬಹುದು ಅಂತ ತಿಳಿದಿದ್ದರೆ, ಅದನ್ನು ತಪ್ಪಿಸುತ್ತಿದ್ದೆ. ಇದು ನನ್ನ ಅಭಿಪ್ರಾಯ ಅಂತ ಹಿರಿಯ ನಟಿ ಅಂಬಿಕಾ ಅವರು ಹೇಳಿದ್ದಾರೆ.

ಇಲ್ಲವಾದರೆ ಈ ವಿಚಾರದಲ್ಲಿ ಜನರಿಗೂ ಬೇಸರವಾಗಬಹುದು. ನಾವು ಕೇವಲ ಸ್ನೇಹಿತರು ಎಂದು ನೀವು ಹೇಳುತ್ತೀರಿ. ಆದರೆ ಪ್ರತಿ ಬಾರಿಯೂ ನಾವು ನಿಮ್ಮನ್ನು ಸಮರ್ಥಿಸಿಕೊಂಡು, ನಿಮ್ಮ ಪರವಾಗಿ ಮಾತನಾಡುತ್ತಲೇ ಇರಬೇಕೇ ಎಂದೂ ಕೇಳಬಹುದು. ಹೀಗಾಗಿ, ನಾವು ಆ ಸ್ನೇಹಕ್ಕೆ ಬೆಲೆ ಕೊಡುತ್ತಿದ್ದರೆ, ನಮ್ಮ ನಡೆ-ನುಡಿಯ ಬಗ್ಗೆಯೂ ಹೆಚ್ಚು ಜಾಗರೂಕರಾಗಿರಬೇಕು ಎಂದು ಅಂಬಿಕಾ ಹೇಳಿದ್ದಾರೆ.

ವಿಜಯ್ ಮತ್ತು ತ್ರಿಶಾ ಅವರ ಇತ್ತೀಚಿನ ಭೇಟಿಯ ವಿಡಿಯೋದಲ್ಲಿ, ಇಬ್ಬರೂ ಕಾರ್ಯಕ್ರಮದ ಸ್ಥಳದಲ್ಲಿ ಕುಳಿತು ರೇಸ್ ವೀಕ್ಷಿಸುತ್ತಿರುವ ದೃಶ್ಯಗಳು ವೈರಲ್ ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+