ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೇ ಮಧ್ಯದಲ್ಲಿ ಗರಿಷ್ಠ ಮಟ್ಟ ಮುಟ್ಟಲಿದೆ ಕೊರೊನಾ; ಎಷ್ಟು ಪ್ರಕರಣ ದಾಖಲಾಗಬಹುದು?

|
Google Oneindia Kannada News

ನವದೆಹಲಿ, ಏಪ್ರಿಲ್ 27: ದೇಶದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟ ಮೇ ಮಧ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ. ಮೇ 4ರಿಂದ 8ರವರೆಗೆ ದಿನನಿತ್ಯದ ಪ್ರಕರಣಗಳು ನಾಲ್ಕು ಲಕ್ಷದವರೆಗೂ ದಾಖಲಾಗುತ್ತವೆ ಎಂದು ಐಐಟಿ ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ.

ಕಾನ್ಪುರ ಹಾಗೂ ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು "ಸೂತ್ರ" (SUTRA)- suspectible, undetected, tested and removed approach ಮಾದರಿ ಮೂಲಕ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಕುರಿತು ಅಂದಾಜು ಮಾಡಿದ್ದಾರೆ. ಅವರ ಈ ಅಂದಾಜಿನ ಪ್ರಕಾರ ಭಾರತದಲ್ಲಿ ಮೇ ಮಧ್ಯ ಭಾಗದ ಹೊತ್ತಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷ ಮೀರಲಿದೆ. ಮುಂದೆ ಓದಿ...

ಮೇ 1ರಿಂದ ನಿಮ್ಮದೇ ಆಯ್ಕೆಯ ಕೊರೊನಾ ಲಸಿಕೆ ಪಡೆಯಬಹುದುಮೇ 1ರಿಂದ ನಿಮ್ಮದೇ ಆಯ್ಕೆಯ ಕೊರೊನಾ ಲಸಿಕೆ ಪಡೆಯಬಹುದು

 ಮೇ ಮಧ್ಯ ಭಾಗದಲ್ಲಿ ಗರಿಷ್ಠ ಪ್ರಕರಣ ದಾಖಲು

ಮೇ ಮಧ್ಯ ಭಾಗದಲ್ಲಿ ಗರಿಷ್ಠ ಪ್ರಕರಣ ದಾಖಲು

ಮೇ ಮಧ್ಯಭಾಗದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗರಿಷ್ಠ ಮಟ್ಟ ತಲುಪಬಹುದು. ಈ ಸಮಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 38-48 ಲಕ್ಷ ಆಗಬಹುದು. ದಿನನಿತ್ಯದ ಕೊರೊನಾ ಪ್ರಕರಣಗಳ ಸಂಖ್ಯೆ ನಾಲ್ಕು ಲಕ್ಷವನ್ನು ಮೀರಬಹುದು ಎಂದು ವಿಜ್ಞಾನಿಗಳು ಅಂದಾಜು ಮಾಡಿದ್ದಾರೆ. ಈ ಅವಧಿ ಮುಗಿದ ನಂತರ ಕೊರೊನಾ ಪ್ರಕರಣಗಳು ಕ್ರಮೇಣ ಇಳಿಕೆಯಾಗುತ್ತವೆ ಎಂದು ತಿಳಿಸಿದ್ದಾರೆ.

 ವರದಿ ಪರಿಷ್ಕೃತಗೊಳಿಸಿದ ವಿಜ್ಞಾನಿಗಳು

ವರದಿ ಪರಿಷ್ಕೃತಗೊಳಿಸಿದ ವಿಜ್ಞಾನಿಗಳು

ಕಳೆದ ವಾರ ಐಐಟಿ ವಿಜ್ಞಾನಿಗಳು ವರದಿಯೊಂದನ್ನು ಸಿದ್ಧಪಡಿಸಿ ಮೇ 11ರಿಂದ 15ರವರೆಗೆ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತವೆ. ಈ ಅವಧಿಯಲ್ಲಿ 33ರಿಂದ 35 ಲಕ್ಷದವೆಗೂ ಸಕ್ರಿಯ ಪ್ರಕರಣಗಳು ದಾಖಲಾಗಿ, ಮೇ ಅಂತ್ಯಕ್ಕೆ ಇಳಿಮುಖವಾಗುತ್ತವೆ ಎಂದು ಹೇಳಿದ್ದರು. ಇದೀಗ ಆ ವರದಿಯನ್ನು ಪರಿಷ್ಕೃತಗೊಳಿಸಿದ್ದಾರೆ. ಮೇ4ರಿಂದಲೇ ಹೆಚ್ಚಿನ ಮಟ್ಟದಲ್ಲಿ ಪ್ರಕರಣಗಳು ದಾಖಲಾಗುವುದು ಗೋಚರಿಸುತ್ತದೆ ಎಂದಿದ್ದಾರೆ.

ಏಪ್ರಿಲ್ 26; ಭಾರತದಲ್ಲಿ ಮೂರೂವರೆ ಲಕ್ಷ ಮೀರಿದ ಕೊರೊನಾ ಪ್ರಕರಣಏಪ್ರಿಲ್ 26; ಭಾರತದಲ್ಲಿ ಮೂರೂವರೆ ಲಕ್ಷ ಮೀರಿದ ಕೊರೊನಾ ಪ್ರಕರಣ

 ಮೇ 14-18 ಸಕ್ರಿಯ ಪ್ರಕರಣಗಳಲ್ಲಿ ಏರಿಕೆ

ಮೇ 14-18 ಸಕ್ರಿಯ ಪ್ರಕರಣಗಳಲ್ಲಿ ಏರಿಕೆ

ಮೇ 14-18 ಸಕ್ರಿಯ ಪ್ರಕರಣಗಳು ಹೆಚ್ಚಾಗುವ ಅವಧಿಯಾಗುತ್ತದೆ. ಮೇ 4ರಿಂದ 8 ಹೊಸ ಪ್ರಕರಣಗಳು ಅತಿ ಹೆಚ್ಚಿನ ಮಟ್ಟದಲ್ಲಿ ದಾಖಲಾಗುವ ಸಮಯ. ದಿನನಿತ್ಯದ ಪ್ರಕರಣಗಳಲ್ಲಿ ಏರಿಕೆ ಕಂಡು ಹತ್ತು ದಿನದಲ್ಲಿ ಸಕ್ರಿಯ ಪ್ರಕರಣಗಳು ಗರಿಷ್ಠ ಮಟ್ಟಕ್ಕೆ ಮುಟ್ಟುತ್ತವೆ ಎಂದಿದ್ದಾರೆ. ಮೂರು ಮುಖ್ಯ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೂತ್ರ ಮಾದರಿ ಸಿದ್ಧಪಡಿಸಲಾಗಿದೆ. ಸೋಂಕಿತರ ಸಂಪರ್ಕಿಸಿದವರ ಪ್ರಮಾಣ, ಜನರು ಸೋಂಕಿಗೆ ತೆರೆದುಕೊಂಡಿರುವ ಪ್ರಮಾಣ ಹಾಗೂ ಸದ್ಯದ ಕೊರೊನಾ ಅಂಕಿ ಸಂಖ್ಯೆಗಳ ಆಧಾರದಲ್ಲಿ ಸೋಂಕು ಯಾವಾಗ ಗರಿಷ್ಠ ಮಟ್ಟ ತಲುಪುತ್ತದೆ ಎಂದು ಅಂದಾಜಿಸಿರುವುದಾಗಿ ಕಾನ್ಪುರದ ಐಐಟಿ ಪ್ರಾಧ್ಯಾಪಕ ಮನಿಂದರ್ ಅಗರ್ ವಾಲ್ ತಿಳಿಸಿದ್ದಾರೆ.

 ಭಾರತದಲ್ಲಿ ಮೂರೂವರೆ ಲಕ್ಷ ಮೀರಿದ ಕೊರೊನಾ ಪ್ರಕರಣ

ಭಾರತದಲ್ಲಿ ಮೂರೂವರೆ ಲಕ್ಷ ಮೀರಿದ ಕೊರೊನಾ ಪ್ರಕರಣ

ಭಾರತದಲ್ಲಿ ಸೋಮವಾರ 3,52,991 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಒಂದೇ ದಿನ 2812 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 2,19,272 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯ ಹೆಲ್ತ್‌ ಬುಲೆಟಿನ್ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ದಾಖಲಾದ ಈ ಪ್ರಕರಣಗಳೊಂದಿಗೆ ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆ 1,73,13,163ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 28,13,658 ಆಗಿದೆ.

English summary
Active Covid cases likely to peak at 38-48 lakh in mid May predicted IIT scientist,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X