• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

#StayCurious: ಆನ್ ಲೈನ್ ನಲ್ಲೇ ಅಬುಧಾಬಿಯ ಸುತ್ತಾಟದ ಅನುಭವ ಪಡೆಯಿರಿ

|

ಅಬುಧಾಬಿಯ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯು (DCT ಅಬುಧಾಬಿ) #StayCurious ಎಂಬ ವರ್ಚುವಲ್ ಪ್ಲಾಟ್ ಫಾರ್ಮ್ ಅನ್ನು ಘೋಷಣೆ ಮಾಡಿದೆ. ಈ ಮೂಲಕ ವಿಶ್ವದಾದ್ಯಂತ ಇರುವವರಿಗೆ ಒಂದು ಸಮಗ್ರ ಹಬ್ ನಲ್ಲಿ ಶಿಕ್ಷಣ ಹಾಗೂ ಮನರಂಜನೆಯ ಮಾಹಿತಿಯನ್ನು ಒದಗಿಸುತ್ತದೆ.

   Trump to welcome military working Dog Conan to White House | Oneindia Kannada

   ಎಮಿರೇಟ್ಸ್ ನಲ್ಲಿ ದೊರೆಯುವ ವಿಶಿಷ್ಟ ಆತಿಥ್ಯದ ಬಗ್ಗೆ 360 ಡಿಗ್ರಿ ಇಂಟರ್ ಆಕ್ಟಿವ್ ಅನುಭವ ನೀಡುತ್ತದೆ. ಸೂರ್ಯೋದಯ, ಅದ್ಭುತ ದೃಶ್ಯಾವಳಿಗಳು, ಅನಿಯಮಿತವಾದ ಮನರಂಜನೆಯನ್ನು ಮನೆಯಲ್ಲಿ ಕೂತ ಜಾಗದಲ್ಲೇ ಪಡೆಯಬಹುದು.

   ಕೊರೊನಾದ ಕಾರಣಕ್ಕೆ ವಿಶ್ವದಾದ್ಯಂತ ಪ್ರವಾಸೋದ್ಯಮದ ಮೇಲೆ ಲಾಕ್ ಡೌನ್ ಪೆಟ್ಟು ಬಿದ್ದಿದೆ. ಇಂಥ ಸಂದರ್ಭದಲ್ಲಿ #StayCurious ಮೂಲಕ ಜಗತ್ತಿನಾದ್ಯಂತ ಇರುವವರಿಗೆ ಕಲಿಕೆ, ಅನ್ವೇಷಣೆಯ ಹಸಿವು ತಣಿಸಲು ಐದು ಬಗೆಯ ಮಾಹಿತಿ ಒದಗಿಸುತ್ತಿದೆ. ಭವಿಷ್ಯದಲ್ಲಿ ಈ ಅನುಭವ ಮತ್ತಷು ವಿಶಿಷ್ಟವಾಗಿ ರೂಪಿಸಲು ಸಿದ್ಧತೆ ನಡೆದಿದೆ.

   * ಸಾಹಸಿಗಳಾಗಿ

   ವರ್ಚುವಲ್ ಪ್ರವಾಸದ ಮೂಲಕ ಅಬುಧಾಬಿಯ ಹೃದಯ ಭಾಗಕ್ಕೆ ಕರೆದೊಯ್ಯುತ್ತದೆ. ಎಮಿರೇಟ್ಸ್ ನ ಮನಮೋಹಕ ದೃಶ್ಯಗಳು ಹಾಗೂ ವೈವಿಧ್ಯವನ್ನು ಕಾಣಲು ಅನುವು ಮಾಡಿಕೊಡುತ್ತದೆ. ಅಬುಧಾಬಿಯ ಇತಿಹಾಸ, ಪರಂಪರೆ ಬಗ್ಗೆ ಮೌಲ್ಯಯುತವಾದ ಒಳನೋಟ ನೀಡುತ್ತದೆ.

   * ತೃಪ್ತಿ ಅನುಭವಿಸಿ

   ಎಮಿರೇಟ್ಸ್ ನ ಟಾಪ್ ಬಾಣಾಸಿಗರಿಂದ ಅಡುಗೆ ಕಲಿಕೆ ವರ್ಕ್ ಶಾಪ್ ಮತ್ತು ಮಾಸ್ಟರ್ ಕ್ಲಾಸ್ ಸರಣಿಗಳು ಈ ಸೆಕ್ಷನ್ ನಲ್ಲಿವೆ. ಅಬುಧಾಬಿಯ ರುಚಿಕಟ್ಟಾದ ಅಡುಗೆ ಬಗ್ಗೆ ಬಳಕೆದಾರರಿಗೆ ಮಾಹಿತಿ ನೀಡಲಾಗುತ್ತದೆ.

   * ಜ್ಞಾನ ಪಡೆದುಕೊಳ್ಳಿ

   ವೆಬ್ ಸೈಟ್ ಬಳಕೆದಾರರಿಗೆ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಹೆಸರಾಂತ ಶಿಕ್ಷಣ ಸಂಸ್ಥೆಗಳು ಉಚಿತ ವರ್ಚುವಲ್ ಕೋರ್ಸ್ ಮತ್ತು ಶಿಕ್ಷಣ ಮಾಹಿತಿಗಳನ್ನು ನೀಡುತ್ತಿವೆ. ಅದರಲ್ಲಿ ಗ್ರೋ ವಿಥ್ ಗೂಗಲ್, ಕೋರ್ಸೆರಾಮ್ ಎಮಿರೇಟ್ಸ್ ಇತಿಹಾಸ, ಮಕ್ತಬಾ ಡಿಜಿಟಲ್ ಲೈಬ್ರರಿ ಇನ್ನೂ ಹಲವಾರು ಮಾಹಿತಿಗಳಿವೆ.

   * ಕ್ರಿಯಾತ್ಮಕವಾಗಿರಿ

   DCT ಅಬುಧಾಬಿಯು "CulturAll" ವರ್ಚುವಲ್ ಅನುಭವದ ಮೂಲಕ ಅಬುಧಾಬಿಯ ಸಂಸ್ಕೃತಿ ಶ್ರೀಮಂತಿಕೆ ಬಗ್ಗೆ ತಿಳಿಯಲು ವೀಕ್ಷಕರನ್ನು ಪ್ರೇರೇಪಿಸುತ್ತದೆ.

   * ಮನರಂಜನೆ ಪಡೆಯಿರಿ

   ಈ ಹಬ್ ಮೂಲಕ ವರ್ಚುವಲ್ ಕಾರ್ಯಕ್ರಮಗಳ ಸರಣಿಯನ್ನೇ ವೀಕ್ಷಿಸಬಹುದು. ಮನೆಯಲ್ಲಿ ಇರುವಾಗಲೇ ವೀಕ್ಷಕರಿಗೆ ಮನರಂಜನೆ ದೊರೆಯಬೇಕು ಎಂಬ ಕಾರಣಕ್ಕೆ ಮುಂಬರುವ ದಿನಗಳಲ್ಲಿ DCT ಅಬು ಧಾಬಿ ಈ ಸೆಕ್ಷನ್ ಆರಂಭಿಸಲಿದೆ.

   ಅಬುಧಾಬಿ DCTಯ ಹಂಗಾಮಿ ಕಿರಿಯ ಕಾರ್ಯದರ್ಶಿ ಅಲ್ ಹೊಸನಿ ಮಾತನಾಡಿ, ಈ ಸವಾಲಿನ ಸಮಯದಲ್ಲಿ ವಿಶ್ವದಾದ್ಯಂತ ಇರುವ ಜನರನ್ನು ಒಟ್ಟುಗೂಡಿಸಿಕೊಂಡು, ಅವರ ಬದುಕಿಗೆ ಶ್ರೀಮಂತ ಅನುಭವ ನೀಡಲಿದೆ. ಅದೇ ವೇಳೆ ಮನರಂಜನೆ ಕೂಡ ಒದಗಿಸಲಿದೆ. ಜನರು ಕನಸು ಕಾಣಲು, ಕ್ರಿಯಾತ್ಮಕತೆಗೆ, ಕುತೂಹಲ ತಣಿಸುವುದಕ್ಕೆ ಹಾಗೂ ಇಡೀ ಜಗತ್ತನ್ನು ಅರಿಯಲು, ಒಬ್ಬರು ಮತ್ತೊಬ್ಬರ ಬಗ್ಗೆ ತಿಳಿಯಲು #StayCurious ಎಂಬುದು ಒಂದು ಅವಕಾಶ ಎಂದಿದ್ದಾರೆ.

   ಸರಿಸಾಟಿಯಿಲ್ಲದ ಆತಿಥ್ಯ ನೀಡಲು ಯಾವಾಗಲೂ ಅಬುಧಾಬಿ ಹೆಸರುವಾಸಿ. ನಮ್ಮ ಮಧ್ಯೆ ದೈಹಿಕವಾದ ಅಂತರ ಇದ್ದರೂ ನಮ್ಮ ನಗರದ ಹೃದಯಕ್ಕೆ ಹಾಗೂ ಸಂಸ್ಕೃತಿಗೆ ಈ ಹೊಸ ಆವಿಷ್ಕಾರ ಅನುಭವದ ಮೂಲಕ ವರ್ಚುವಲ್ ಪ್ರವಾಸಿಗರನ್ನು ಸ್ವಾಗತಿಸುತ್ತೇವೆ. ಭವಿಷ್ಯದಲ್ಲಿ ಸ್ವತಃ ಬಂದು ಇಲ್ಲಿ ಆ ಅನುಭವ ಪಡೆಯಬಹುದು ಎಂದು ಅವರು ಹೇಳಿದ್ದಾರೆ.

   www.staycurious.ae ಮೂಲಕ #StayCurious ಅನ್ನು ಆನ್ ಲೈನ್ ನಲ್ಲಿ ಸಂಪರ್ಕಿಸಬಹುದು. ಮುಂಬರುವ ವಾರಗಳಲ್ಲಿ ಇಂಟರ್ ಆಕ್ಟಿವ್ ಹಬ್ ನಲ್ಲಿ ಇನ್ನಷ್ಟು ಮಾಹಿತಿಗಳು ಸೇರ್ಪಡೆ ಮಾಡಲಿದೆ.

   English summary
   The Department of Culture and Tourism – Abu Dhabi (DCT Abu Dhabi) has announced the launch of its new virtual exploration platform, #StayCurious, which will provide audiences worldwide with original education and entertainment content in one comprehensive hub.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X