ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾದವರ ಕುಟುಂಬ ಜಗಳದಲ್ಲಿ ಬಿಜೆಪಿಗೆ ಲಾಭ : ಸಮೀಕ್ಷೆ

|
Google Oneindia Kannada News

ನವದೆಹಲಿ, ಲಕ್ನೋ ನ 4: ಮತ್ತೊಂದು ಅವಧಿಗೂ ಗೆದ್ದು, ಅಧಿಕಾರವನ್ನು ಉಳಿಸಿಕೊಳ್ಳುವ ಸದಾವಕಾಶಕ್ಕೆ ಯಾವ ರೀತಿ ಮಣ್ಣುಹಾಕಿಕೊಳ್ಳಬಹುದು ಎನ್ನುವುದಕ್ಕೆ ಉತ್ತರಪ್ರದೇಶದಲ್ಲಿ ಆಡಳಿತ ಸಮಾಜವಾದಿ ಪಕ್ಷ ಒಂದೊಳ್ಳೆ ಉದಾಹರಣೆ.

ಮುಲಾಯಂ ಸಿಂಗ್ ಯಾದವರ ಮನೆಯ ಕುಟುಂಬ ಕಲಹ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದರೂ, ಉತ್ತರಪ್ರದೇಶದ ಜನತೆ ಮುಂದಿನ ಬಾರಿಯೂ ಮುಖ್ಯಮಂತ್ರಿಯಾಗಿ ಅಖಿಲೇಶ್ ಯಾದವ್ ಅವರನ್ನು ನೋಡಲು ಬಯಸುತ್ತಿದ್ದಾರೆ. (ರಂಗೇರುತ್ತಿರುವ ಬಿಜೆಪಿ ಕನಸು)

ಆದರೆ ಯಾದವರ ಮನೆಕಲಹದ ಗರಿಷ್ಠ ಲಾಭ ಸದ್ಯದ ಮಟ್ಟಿಗೆ ಬಿಜೆಪಿಗೆ ಆಗುತ್ತಿದೆ, ಅದಾದ ನಂತರ ಮಾಯಾವತಿ ಪಕ್ಷಕ್ಕೆ. ಇದರ ಜೊತೆಗೆ ಸಮಾಜವಾದಿ ಪಕ್ಷ ರಾಜ್ಯದಲ್ಲಿ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಎಸ್ಪಿ ಕುಟುಂಬ ಕಲಹದಿಂದ ಕಾಂಗ್ರೆಸ್ಸಿಗೆ ಅಷ್ಟೇನೂ ಲಾಭವಾಗುತ್ತಿಲ್ಲ.

ಎಬಿಪಿ ನ್ಯೂಸ್ ಮತ್ತು ಸಿಸಿರೋ ಜಂಟಿಯಾಗಿ ನಡೆಸಿದ ಸರ್ವೇ ಪ್ರಕಾರ, ಎಸ್ಪಿ ಆಂತರಿಕ ಸಮಸ್ಯೆಯಿಂದ ಬಿಜೆಪಿಗೆ ಶೇ. 39, ಬಿಎಸ್ಪಿಗೆ ಶೇ. 29ರಷ್ಟು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಶೇ.6ರಷ್ಟು ಲಾಭವಾಗಲಿದೆ.

ಜನಾಭಿಪ್ರಾಯದ ಪ್ರಕಾರ ಮುಲಾಯಂ ಮತ್ತು ಅಖಿಲೇಶ್ ಯಾದವ್ ನಡುವೆ ಕಲಹಕ್ಕೆ ಮೂಲ ಕಾರಣ ಶಿವಪಾಲ್ ಸಿಂಗ್ ಯಾದವ್ ಮತ್ತು ಅಮರ್ ಸಿಂಗ್. ಮುಂದೆ ಓದಿ..

ಸಿಎಂ ಆಗಿ ಯಾರು ಬೆಸ್ಟ್

ಸಿಎಂ ಆಗಿ ಯಾರು ಬೆಸ್ಟ್

1. ಅಖಿಲೇಶ್ ಯಾದವ್ (ಎಸ್ಪಿ) - ಶೇ. 31
2. ಮಾಯಾವತಿ (ಬಿಎಸ್ಪಿ) - ಶೇ. 27
3. ಯೋಗಿ ಆದಿತ್ಯನಾಥ್ (ಬಿಜೆಪಿ) - ಶೇ. 24
4. ಶೀಲಾ ದೀಕ್ಷಿತ್ (ಕಾಂಗ್ರೆಸ್) - ಶೇ. 2
5. ಮುಲಾಯಂ ಸಿಂಗ್ (ಎಸ್ಪಿ) - ಶೇ. 2

ಯಾದವರ ಜಗಳ

ಯಾದವರ ಜಗಳ

ಸಮಾಜವಾದಿ ಪಕ್ಷದ ಆಂತರಿಕ ಜಗಳದಿಂದ ಯಾರಿಗೆ ಲಾಭ ಎನ್ನುವ ಪ್ರಶ್ನೆಗೆ ಸರ್ವೇಯಲ್ಲಿ ಭಾಗವಹಿಸಿದವರ ಉತ್ತರ ಹೀಗಿತ್ತು..
1. ಬಿಜೆಪಿ - ಶೇ.39
2. ಬಿಎಸ್ಪಿ - ಶೇ.29
3. ಕಾಂಗ್ರೆಸ್ - ಶೇ. 06

ಅಖಿಲೇಶ್ ಯಾದವ್

ಅಖಿಲೇಶ್ ಯಾದವ್

ಕುಟುಂಬ ಸಮಸ್ಯೆ ಇರುವುದರಿಂದ ಅಖಿಲೇಶ್ ಯಾದವ್, ಎಸ್ಪಿಯಿಂದ ಹೊರ ನಡೆಯ ಬೇಕಾ ಎನ್ನುವ ಪ್ರಶ್ನೆಗೆ ಬೇಡ ಎಂದು ಶೇ. 55, ಪಕ್ಷ ಬಿಡಬೇಕೆಂದು ಶೇ. 19ರಷ್ಟು ಜನ ಪ್ರತಿಕ್ರಿಯಿಸಿದ್ದಾರೆ.

ಎಸ್ಪಿಗೆ ನಷ್ಟ

ಎಸ್ಪಿಗೆ ನಷ್ಟ

ಒಟ್ಟಾರೆಯಾಗಿ ಸಮಾಜವಾದಿ ಪಕ್ಷದ ಕುಟುಂಬ ಜಗಳದಿಂದ ಪಕ್ಷಕ್ಕೆ ಅತಿದೊಡ್ಡ ಹಾನಿಯಾಗಿದೆ. ಮುಲಾಯಂ ಸಿಂಗ್ ಇಮೇಜ್ ಶೇ. 30, ಅಖಿಲೇಶ್ ಶೇ. 16 ಮತ್ತು ಒಟ್ಟಾರೆಯಾಗಿ ಶೇ. 43ರಷ್ಟು ಜನ ಕುಟುಂಬ ಕಲಹ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕಮಲದ ಪಕ್ಷಕ್ಕೆ ಅನುಕೂಲಕರ ಪರಿಸ್ಥಿತಿ

ಕಮಲದ ಪಕ್ಷಕ್ಕೆ ಅನುಕೂಲಕರ ಪರಿಸ್ಥಿತಿ

ಈಗಿನ ಸರ್ವೇ ಪ್ರಕಾರ ಒಟ್ಟಾರೆಯಾಗಿ ಎಸ್ಪಿ ಜಗಳ ಬಿಜೆಪಿಗೆ ಭರಪೂರ ಲಾಭ ತಂದುಕೊಡಲಿದೆ. ಇದಾದ ನಂತರವಷ್ಟೇ ಬಿಎಸ್ಪಿಗೆ. ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಕಾಂಗ್ರೆಸ್ಸಿಗೆ ರೂಪಿಸುತ್ತಿದ್ದರೂ, ಪಕ್ಷಕ್ಕೆ ಸದ್ಯದ ಮಟ್ಟಿಗೆ ಯಾವುದೂ ವರ್ಕೌಟ್ ಆಗುತ್ತಿಲ್ಲ.

English summary
ABP News-CICERO snap poll, Uttar Pradesh assembly election: BJP, BSP major gainers in SP feud, but Akhilesh Yadav top choice as Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X