ಎಬಿಪಿ ಸಮೀಕ್ಷೆ: ದಕ್ಷಿಣ ಭಾರತದಲ್ಲಿ ಮಾತ್ರ ಎನ್ಡಿಎಗೆ ಸೋಲು
ಬೆಂಗಳೂರು, ಮೇ 24: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 4 ವರ್ಷವಾದ ಹಿನ್ನಲೆಯಲ್ಲಿ ಎಬಿಪಿ ಸಿಎಸ್ ಡಿಎಸ್ ಸಂಸ್ಥೆ ದಕ್ಷಿಣ ಭಾರತದಲ್ಲಿ ನಡೆಸಿರುವ ಸಮೀಕ್ಷೆ ವರದಿ ಇಲ್ಲಿದೆ
ಎಬಿಪಿಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆ 2018: ಈ ಸಮಯಕ್ಕೆ ಲೋಕಸಭೆ ಚುನಾವಣೆ ನಡೆದರೆ, ದಕ್ಷಿಣ ಭಾರತದಲ್ಲಿ ಎನ್ ಡಿಎ ವಿರುದ್ಧ ಯುಪಿಎ ಜಯಭೇರಿ ಬಾರಿಸಲಿದ್ದು, ಕಳೆದ ಚುನಾವಣೆಗಿಂತ ಸ್ವಲ್ಪಮಟ್ಟಿನ ಪ್ರಗತಿ ಸಾಧಿಸಲಿದೆ.

543 ಲೋಕಸಭಾ ಸ್ಥಾನಗಳ ಪೈಕಿ ಉತ್ತರ ಭಾರತದಲ್ಲಿರುವ 132 ಲೋಕಸಭಾ ಸ್ಥಾನಗಳಿದ್ದು, ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್ (ಎನ್ ಡಿಎ)ಗೆ 18 ರಿಂದ 22 ಸ್ಥಾನಗಳು ಸಿಕ್ಕರೆ, ಯುಪಿಎಗೆ 67 ರಿಂದ 75, ಇತರೆ 38 ರಿಂದ 44 ಸ್ಥಾನಗಳು ಸಿಗಲಿವೆ.
2014ರ ಲೋಕಸಭೆ ಚುನಾವಣೆಯಲ್ಲಿ ಉತ್ತರಭಾರತದಲ್ಲಿ ಎನ್ಡಿಎಗೆ 23, ಯುಪಿಎಗೆ 21 ಹಾಗೂ ಇತರೆ 88 ಸ್ಥಾನಗಳು ಸಿಕ್ಕಿತ್ತು.
ದಕ್ಷಿಣ ಭಾರತ:
* ಎನ್ ಡಿಎ 31% (2014ರಲ್ಲಿ 36%)
* ಯುಪಿಎ 37% (25%)
* ಇತರೆ 32% (39%)
ದಕ್ಷಿಣ ಭಾರತ: 132 ಸ್ಥಾನ
* ಎನ್ ಡಿಎ : 18-22
* ಯುಪಿಎ : 67-75
* ಇತರೆ : 38-44












Click it and Unblock the Notifications