Abhijit Deepke Arrest: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅಭಿಜೀತ್ ದೀಪ್ಕೆ ಟ್ವೀಟ್; ಸೋಷಿಯಲ್ ಮೀಡಿಯಾದಲ್ಲಿ ವೈರಲ್

Abhijit Deepke Arrest: ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.

ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ನಂತರ, ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸೌರಭ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಸಹ ಬಂಧಿಸಲಾಗಿದೆ ಅಭಿಜೀತ್ ದೀಪ್ಕೆ ಅವರನ್ನು ಜಂತರ್ ಮಂತರ್ ತಲುಪುವ ಮೊದಲೇ ವಿಮಾನದಿಂದ ಬಂಧಿಸಲಾಯಿತು. ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ದೆಹಲಿ ಪೊಲೀಸರು ವಿಮಾನವನ್ನು ಪ್ರವೇಶಿಸಿ ಅಭಿಜೀತ್ ದೀಪ್ಕೆ, ಸೌರಭ್ ದಾಸ್ ಹಾಗೂ ಅವರ ಸಹಚರರನ್ನು ವಶಕ್ಕೆ ಪಡೆದಿದ್ದರು.

Abhijeet Dipke Arrest Tweet on PM Narendra Modi Goes Viral on Social Media Sir Jantar Mantar protest

Abhijit Deepke Arrest: ಅಭಿಜಿತ್ ದೀಪ್ಕೆ ಸೋಷಿಯಲ್ ಮೀಡಿಯಾ ಟ್ವೀಟ್

ನಮ್ಮ ಪ್ರತಿಭಟನೆ ಆರಂಭವಾಗುವ ಮೊದಲೇ ಮೋದಿ ಸೋಲನ್ನು ಒಪ್ಪಿಕೊಂಡಿದ್ದಾರೆ. ಪ್ರತಿಭಟನಾಕಾರರ ಮೇಲೆ ಸಾಮೂಹಿಕವಾಗಿ ದಮನಕಾರಿ ಕ್ರಮ ಕೈಗೊಳ್ಳುವುದು ಮತ್ತು ದೆಹಲಿಯನ್ನು ಬಂದ್ ಮಾಡುವುದು ಶಕ್ತಿಯ (ಅಧಿಕಾರದ) ಸಂಕೇತವಲ್ಲ. ಬದಲಾಗಿ, ತನ್ನದೇ ಜನರಿಗೆ ಹೆದರುವ ನಾಯಕನ ಸಂಕೇತಗಳಾಗಿವೆ ಎಂದು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅಭಿಜಿತ್ ದೀಪ್ಕೆ ಅವರು ಟ್ವೀಟ್ ಮಾಡಿದ್ದಾರೆ.

ನೆಟ್ಟಿಗರು ಹೇಳಿದ್ದೇನು ?

ಇನ್ನು ಅಭಿಜೀತ್ ದೀಪ್ಕೆ ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಟ್ವೀಟ್‌ಗೆ ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಇದು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಇರುವ ಕಾಳಜಿ. ಜನರು ಅವರನ್ನು ಆಯ್ಕೆ ಮಾಡಿದ್ದೇ ಇಂತಹ ಕೆಲಸಗಳನ್ನು ಮಾಡಲು. ಆದರೆ, ನಿಮಗೆ ಇದು ಅರ್ಥವಾಗುವುದಿಲ್ಲ ಎಂದು ಕೆಲವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

#SIR ವಿಚಾರವಾಗಿ ಕಿರುಚಲು ಪ್ರಾರಂಭಿಸಿದ ಕ್ಷಣದಿಂದಲೇ ಇಡೀ ಇಂಡಿಯಾ ಮೈತ್ರಿಕೂಟ ಸೋಲನ್ನು ಒಪ್ಪಿಕೊಂಡಿದೆ. ಈ ಜನರು ನಿಮ್ಮನ್ನು ಅಲೆಮಾರಿಗಳಂತೆ, ದಲಾಲ್‌ಗಳಂತೆ ಮತ್ತು ಅವ್ಯವಸ್ಥೆಯನ್ನು ಸೃಷ್ಟಿಸಲು ಬಾಡಿಗೆಗೆ ಪಡೆದ ಪ್ರತಿಭಟನಾಕಾರರಂತೆ ತೊಡಗಿಸಿಕೊಂಡಿದ್ದಾರೆ - ನಿಮಗೆ ಸ್ವಾಭಿಮಾನವಿಲ್ಲವೇ ಎಂದೂ ಕೆಲವರು ಪ್ರಶ್ನೆ ಮಾಡಿದ್ದಾರೆ.

ಸೌರಭ್ ದಾಸ್ ಟ್ವೀಟ್

ಇನ್ನು ಕಾಕ್ರೋಚ್ ಜನತಾ ಪಾರ್ಟಿಯ ಮುಖಂಡ ಸೌರಭ್ ದಾಸ್ ಅವರು ಸಹ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸರಣಿ ಟ್ವೀಟ್ ಮಾಡಿದ್ದಾರೆ. ಇದು ನಮ್ಮ ದೇಶವನ್ನು ಮರಳಿ ಪಡೆಯುವ ಹೋರಾಟ ಇದು, ನಮ್ಮ ಪ್ರಜಾಪ್ರಭುತ್ವವನ್ನು ಉಳಿಸುವ ಹೋರಾಟ & ನಮ್ಮ ಜೆನ್‌ಜೀಗಳ ಭವಿಷ್ಯಕ್ಕಾಗಿ ನಡೆಯುತ್ತಿರುವ ಹೋರಾಟ ಎಂದಿದ್ದಾರೆ.

ನನ್ನ ಪೀಳಿಗೆಯ ಬಗ್ಗೆ ನಂಬಲಾಗದಷ್ಟು ಹೆಮ್ಮೆಯಿದೆ. ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳುವವರೆಗೆ ನಾವು ಹೋರಾಡುತ್ತೇವೆ. ಕೆಲವು ಗಂಟೆಗಳಲ್ಲಿ ಜಂತರ್ ಮಂತರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಮ್ಮೆಲ್ಲರನ್ನು ಭೇಟಿಯಾಗುತ್ತೇವೆ! ಇದು ದೀರ್ಘ ಹೋರಾಟ. 🇮🇳❤️✊🏻🪳 ಎಂದು ಟ್ವೀಟ್ ಮಾಡಿದ್ದರು. ಆದರೆ ಇದರ ಬೆನ್ನಲ್ಲೇ ಪ್ರಮುಖ ಸದಸ್ಯರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+