ಕೇಜ್ರಿವಾಲ್ ಕಳಂಕಿತರ ಪಟ್ಟಿಗೆ ಇನ್ನೆರಡು ಹೆಸರು ಸೇರ್ಪಡೆ
ನವದೆಹಲಿ, ಫೆ 3: ಕಳಂಕಿತರ ಪಟ್ಟಿಯನ್ನು ಬಿಡುಗಡೆ ಮಾಡಿದ ನಂತರ ಪ್ರಮುಖ ಪಕ್ಷಗಳು ಮಾಡಿದ ವ್ಯಾಪಕ ಟೀಕೆಗೆ ಸೊಪ್ಪು ಹಾಕದ ಆಮ್ ಆದ್ಮಿ ಪಕ್ಷ ಆ ಪಟ್ಟಿಗೆ ಮತ್ತಿಬ್ಬರು ಪ್ರಮುಖ ರಾಜಕಾರಣಿಗಳ ಹೆಸರನ್ನು ಶನಿವಾರ (ಫೆ 1) ಸೇರ್ಪಡಿಸಿದೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರ ಸ್ವಚ್ಚ ಹಿನ್ನಲೆಯುಳ್ಳ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಆ ಮೂಲಕ ಸಂಸತ್ತು ಭ್ರಷ್ಟ ಮುಕ್ತ ರಾಜಕಾರಣಿಗಳನ್ನು ಹೊಂದಿರಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪಕ್ಷದ ನಿಲುವನ್ನು ಸಮರ್ಥಿಸಿ ಕೊಂಡಿದ್ದಾರೆ. (ಕೇಜ್ರಿ ಹಿಟ್ ಲಿಸ್ಟ್ ನಲ್ಲಿರುವ ರಾಜ್ಯದ ನಾಲ್ವರು ಯಾರು)
ನಾವು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಅಜೆಂಡಾದೊಂದಿಗೆ ಸ್ಪರ್ಧಿಸುತ್ತಿದ್ದೇವೆ. ಕ್ರಿಮಿನಲ್ ಮತ್ತು ಭ್ರಷ್ಟ ಹಿನ್ನಲೆಯುಳ್ಳ ಅಭ್ಯರ್ಥಿಗಳನ್ನು ಸೋಲಿಸುವುದು ನಮ್ಮ ಉದ್ದೇಶ.
ವಂಶ ಪಾರಂಪರ್ಯ ರಾಜಕೀಯ ಪ್ರತಿನಿಧಿಸುವವರನ್ನೂ ನಾವು ಸೋಲಿಸಲು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಎಎಪಿ ಕಳಂಕಿತರ ಪಟ್ಟಿಗೆ ಮತ್ತೆರಡು ಹೆಸರು ಸೇರ್ಪಡೆ

ಸೋನಿಯಾ ಗಾಂಧಿ ಕಳಂಕಿತರ ಪಟ್ಟಿಯಲ್ಲಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೆಸರನ್ನು ಎಎಪಿ ತನ್ನ ಕಳಂಕಿತರ ಪಟ್ಟಿಯಲ್ಲಿ ಸೇರಿಸಿದೆ. ಇವರ ವಿರುದ್ದ ಕೂಡಾ ತಮ್ಮ ಅಭ್ಯರ್ಥಿಯನ್ನು ಮುಂಬರುವ ಚುನಾವಣೆಯಲ್ಲಿ ಕಣಕ್ಕಿಳಿಸಲಿದ್ದೇವೆ - ಕೇಜ್ರಿವಾಲ್

ನರೇಂದ್ರ ಮೋದಿ ವಿರುದ್ದ ನಮ್ಮ ಅಭ್ಯರ್ಥಿ
ಕಾರ್ಯಕರ್ತರ ಮತ್ತು ಸ್ವಂಸೇವಕರ ಪ್ರತಿಕ್ರಿಯೆ ನಂತರ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೆಸರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿದೆ. ಕಾರ್ಯಕಾರಿಣಿಯಲ್ಲಿ ನಾವು ತೆಗೆದು ಕೊಂಡ ನಿರ್ಧಾರದ ನಂತರ ಇವರ ವಿರುದ್ದ ಕೂಡಾ ನಮ್ಮ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ - ಕೇಜ್ರಿವಾಲ್

ಯಾತಕ್ಕಾಗಿ ಇವರಿಬ್ಬರು ಕಳಂಕಿತರು
ಇಬ್ಬರೂ ಕಳಂಕಿತ ಪಕ್ಷವನ್ನು ಪ್ರತಿನಿಧಿಸುತ್ತಿರುವುದರಿಂದ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗೂ ತಮ್ಮ ತಮ್ಮ ಪಕ್ಷದ ಮುಖಂಡರನ್ನು ಸಮರ್ಥಿಸಿ ಕೊಳ್ಳುತ್ತಿರುವುದರಿಂದ ಇವರನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದ್ದಾರೆ.

ಕಳಂಕಿತರ ಪಟ್ಟಿಯಲ್ಲಿ ಕರ್ನಾಟಕದವರ ಹೊರತಾಗಿ ಯಾರಿದ್ದರು - 1
ಮುಲಾಯಂ ಸಿಂಗ್ ಯಾದವ್, ಮಾಯಾವತಿ, ಕಪಿಲ್ ಸಿಬಲ್, ರಾಹುಲ್ ಗಾಂಧಿ, ಸುಶೀಲ್ ಕುಮಾರ್ ಶಿಂಧೆ, ಶರದ್ ಪವಾರ್, ಪ್ರಫುಲ್ ಪಟೇಲ್, ಪಿ ಚಿದಂಬರಂ, ಸಲ್ಮಾನ್ ಖುರ್ಷಿದ್. ನವೀನ್ ಜಿಂದಾಲ್, ಅವತಾರ್ ಸಿಂಗ್ ಭಡಾನ, ಅನು ಟಂಡನ್.

ಕಳಂಕಿತರ ಪಟ್ಟಿಯಲ್ಲಿ ಕರ್ನಾಟಕದವರ ಹೊರತಾಗಿ ಯಾರಿದ್ದರು - 2
ಫಾರೂಕ್ ಅಬ್ದುಲ್ಲಾ, ಶ್ರೀಪ್ರಕಾಶ್ ಜೈಸ್ವಾಲ್, ಕಮಲನಾಥ್, ಜಿ ಕೆ ವಾಸನ್, ನಿತಿನ್ ಗಡ್ಕರಿ, ಜಗನ್ಮೋಹನ್ ರೆಡ್ಡಿ, ಅಳಗಿರಿ, ಕನಿಮೋಳಿ, ತರುಣ್ ಗೋಗಯ್, ಸುರೇಶ್ ಕಲ್ಮಾಡಿ, ಎ ರಾಜ, ಅನುರಾಗ್ ಠಾಕೂರ್












Click it and Unblock the Notifications