ಸೌಲಭ್ಯ ಪಡೆಯಲು ಆಧಾರ್ ಕಡ್ಡಾಯವಲ್ಲ: ಸುಪ್ರೀಂ
ನವದೆಹಲಿ, ಆಗಸ್ಟ್. 10: ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯವಲ್ಲ. ಈ ಬಗ್ಗೆ ಜಾಹೀರಾತು ನೀಡಿ ಜನರಲ್ಲಿ ಜಾಗೃತಿ ಮೂಡಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಜನರೇ ನೀಡಿದರೆ ಎಲ್ ಪಿಜಿ ಮತ್ತು ಇತರ ಸೌಲಭ್ಯಗಳಿಗೆ ಕಾರ್ಡ್ ಲಿಂಕ್ ಮಾಡಿಕೊಳ್ಳಬಹುದು. ಆದರೆ ಕಡ್ಡಾಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಮಂಗಳವಾರ ತಿಳಿಸಿದೆ.

ಎಸ್ ಎ ಬೋಬ್ದೆ, ಸಿ ನಾಗಪ್ಪನ್ ನೇತೃತ್ವದ ಪೀಠ ಅಪರಾಧ ಪ್ರಕರಣದಲ್ಲಿ ಮಾತ್ರ ಆಧಾರ್ ಕೇಳುವ ಹಕ್ಕು ಬರುತ್ತದೆ. ಆದರೆ ಅಲ್ಲಿಯೂ ಕೆಲ ನಿಯಮಾವಳಿಗೆ ಬದ್ಧವಾಗಿ ನಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದೆ.
ಮಾಥ್ಯೂ ಥಾಮಸ್ ಎಂಬುವರು ಸಲ್ಲಿಕೆ ಮಾಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಪೀಠ ಮಹತ್ವದ ನಿರ್ಧಾರ ನೀಡಿದೆ. ಈ ಮೂಲಕ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್ ಪುನರುಚ್ಚಾರ ಮಾಡಿದಂತಾಗಿದೆ. ಹಾಗಾಗಿ ಇನ್ನು ಮುಂದೆ ಆಧಾರ್ ಕಾರ್ಡ್ ಕಡ್ಡಾಯ ಎಂದು ಹೇಳುತ್ತಿದ್ದವರ ಬಾಯಿಗೆ ಬೀಗ ಬಿಳಲಿದೆ.












Click it and Unblock the Notifications