Aadhaar Online: ಆಧಾರ್ ಕಾರ್ಡ್ ತಿದ್ದುಪಡಿ ಈಗ ಮತ್ತಷ್ಟು ಸುಲಭ, ಸರ್ಕಾರದಿಂದ ಗುಡ್ ನ್ಯೂಸ್
ಆಧಾರ್ ಕಾರ್ಡ್ ಭಾರತೀಯರ ಪಾಲಿಗೆ ಒಂದು ದೊಡ್ಡ ಶಕ್ತಿ ಇದ್ದಂತೆ, ಈ ಮೊದಲು ಎಲ್ಲಾ ಗುರುತಿನ ಚೀಟಿ ಹೊತ್ತುಕೊಂಡು ಸಾಗಬೇಕಿತ್ತು. ಆದರೆ ಈಗ ಆಧಾರ್ ಕಾರ್ಡ್ ಒಂದು ಇದ್ದರೆ ಬಹುತೇಕ ಎಲ್ಲಾ ಕೆಲಸಗಳು ಆಗಿಬಿಡುತ್ತದೆ. ಹೀಗಿದ್ದಾಗ ಆಧಾರ್ ಕಾರ್ಡ್ ಸೇವೆಯನ್ನು ಸರ್ಕಾರ ಇನ್ನಷ್ಟು ಉತ್ತಮಗೊಳಿಸಲು ಪ್ಲಾನ್ ಮಾಡುತ್ತಿದೆ, ಈ ಕಾರಣಕ್ಕೆ ಭಾರತ ಸರ್ಕಾರ ಹೊಸ ಆಧಾರ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಹಾಗಾದರೆ ಹೊಸ ಅಪ್ಲಿಕೇಶನ್ ಹೇಗೆಲ್ಲಾ ಸಹಕಾರಿ?? ಬನ್ನಿ ತಿಳಿಯೋಣ.
ಭಾರತ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಆಧಾರ್ ಅಪ್ಲಿಕೇಶನ್ ಮೂಲಕ ಜನರು ತಮ್ಮ ಗುರುತನ್ನು ಡಿಜಿಟಲ್ ರೂಪದಲ್ಲಿ ನಿರ್ವಹಿಸಲು ಮತ್ತು ಪರಿಶೀಲಿಸಲು ಮತ್ತಷ್ಟು ಸುಲಭವಾಗಲಿದೆ. ಇನ್ನು ಈ ಹೊಸ ಅಪ್ಲಿಕೇಶನ್ ಹಿಂದೆ ಇದ್ದ ಸಮಸ್ಯೆಗಳನ್ನು ಬಗೆಹರಿಸಿದೆ. ಪರಿಶೀಲನೆಗೋಸ್ಕರ ಆಧಾರ್ ಭೌತಿಕ ಪ್ರತಿಗಳನ್ನು ಸಲ್ಲಿಸುವ ಅಥವಾ ವೈಯಕ್ತಿಕ ವಿವರಗಳನ್ನು ನವೀಕರಿಸಲು ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಅನಿವಾರ್ಯತೆ ತೊಡೆದು ಹಾಕಲಿದೆ. ಜನ ತಾವು ಇರುವ ಜಾಗದಿಂದಲೇ ತಮ್ಮ ಆಧಾರ್ ತಿದ್ದುಪಡಿ ಮಾಡಲು ಸಾಧ್ಯವಿದೆ. ಈ ಹೊಸ ಆ್ಯಪ್ ಮೂಲಕ ಸಿಗುವ ಸೇವೆಗಳ ಮಾಹಿತಿ ಮುಂದೆ ಇದೆ.

ಮೊಬೈಲ್ ಮೂಲಕವೇ ಸಕಲ ಸೇವೆ
ಹೊಸ ಆ್ಯಪ್ ಮೂಲಕ ಪರಿಶೀಲನೆ ಉದ್ದೇಶಕ್ಕೆ ಭೌತಿಕ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ ಸಲ್ಲಿಸುವ ಅಗತ್ಯತೆ ಇರುವುದಿಲ್ಲ. ಇದರ ಜೊತೆಗೆ ನಿಮ್ಮ ನಿಮ್ಮ ಮೊಬೈಲ್ ಮೂಲಕವೇ ಕೆಲಸ ಸುಲಭವಾಗಿ ಮುಗಿದು ಹೋಗಲಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ದೃಢೀಕರಣಕ್ಕೆ ಒಳಪಟ್ಟು ಜನ ಈಗ ವಿಳಾಸಗಳು ಮತ್ತು ಮೊಬೈಲ್ ನಂಬರ್ ಸುಲಭವಾಗಿ ಚೇಂಜ್ ಮಾಡಬಹುದು. ಇದರ ಜೊತೆಗೆ ಬಳಕೆದಾರರು ದೃಢೀಕರಣದ ಇತಿಹಾಸ ಕಂಡುಕೊಳ್ಳಲು ಕೂಡ ಇದರಲ್ಲಿ ಅವಕಾಶ ಸಿಗಲಿದೆ.
ಗ್ರಾಹಕರ ಡೇಟಾ ಸುರಕ್ಷತೆಗೆ ಒತ್ತು
ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವ ಹೊಸ ಅಪ್ಲಿಕೇಷನ್, ಹೆಚ್ಚಿನ ಪಾರದರ್ಶಕತೆ ಮತ್ತು ಡಿಜಿಟಲ್ ಗುರುತಿನ ಮೇಲೆ ನಿಯಂತ್ರಣ ನೀಡುತ್ತದೆ. ಪರಿಶೀಲನೆಗಾಗಿ ತಮ್ಮ ಆಧಾರ್ ವಿವರಗಳನ್ನ ಎಲ್ಲಿ ಮತ್ತು ಯಾವಾಗ ಬಳಸಲಾಗಿದೆ ಎಂಬುದನ್ನ ಕೂಡ ನೋಡಬಹುದು. ಹಾಗೇ ಬಳಕೆದಾರರು ಸಂಪೂರ್ಣ ಆಧಾರ್ ಕಾರ್ಡ್ ಬದಲಿಗೆ ನಿರ್ದಿಷ್ಟ ವೈಯಕ್ತಿಕ ವಿವರ ಮಾತ್ರ ಹಂಚಿಕೊಳ್ಳಲು ಚಾನ್ಸ್ ಇದೆ. ಸಾಮರ್ಥ್ಯ, ಗೌಪ್ಯತೆ ಮತ್ತು ಭದ್ರತಾ ಕಾಳಜಿ ಸರಾಗಗೊಳಿಸಲು ಈ ಹೊಸ ಆಪ್ ಸಹಕಾರಿ ಆಗಿದೆ. ಈ ಮೂಲಕ ಗ್ರಾಹಕರ ಡೇಟಾ ದುರುಪಯೋಗ ಸಾಧ್ಯತೆಗೆ ಕಡಿವಾಣ ಹಾಕಿದೆ. ವಿಶೇಷ ಎಂದರೆ, ಹೋಟೆಲ್ ಮತ್ತಿತರ ಸ್ಥಳಗಳಲ್ಲಿ ಪೂರ್ಣ ವಿವರ ಬಹಿರಂಗಪಡಿಸದೆ ಹೆಸರು & ವಯಸ್ಸು ಸೇರಿ ಮೂಲ ಮಾಹಿತಿ ಒದಗಿಸಲು ಇದರಿಂದ ಸಹಕಾರಿ ಆಗಲಿದೆ.
5 ಆಧಾರ್ ಪ್ರೊಫೈಲ್ ನಿರ್ವಹಣೆ
ಈ ಅಪ್ಲಿಕೇಶನ್ ಮೂಲಕ ಮತ್ತೊಂದು ಮಹತ್ವದ ಅಪ್‌ಗ್ರೇಡ್ ಸಿಗಲಿದೆ, ಅದು ಏನೆಂದರೆ ಈಗ ಕುಟುಂಬ ನಿರ್ವಹಣಾ ಆಯ್ಕೆ ಎಂಬ ಹೊಸ ಅಂಶವನ್ನು ಕೂಡ ಇದು ಒಳಗೊಂಡಿದೆ. ಹೀಗಾಗಿ ಒಂದೇ ಮೊಬೈಲ್ ಸಾಧನ ಒಟ್ಟು 5 ಆಧಾರ್ ಪ್ರೊಫೈಲ್ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಒಂದೇ ಫೋನ್‌ನಿಂದ ಬಹು ಕುಟುಂಬ ಸದಸ್ಯರಿಗೆ ನವೀಕರಣ ಸುಲಭ ಕೂಡ ಆಗಲಿದೆ ಎಂಬುದು ವಿಶೇಷ. ಹಾಗೇ 3ನೇ ವ್ಯಕ್ತಿಗಳಿಂದ ಡೇಟಾ ನಿಯಮ ಉಲ್ಲಂಘನೆ ಆಗುವುದು ತಪ್ಪಲಿದೆ. ಒಟ್ನಲ್ಲಿ ಹೊಸ ಆಧಾರ್ ಅಪ್ಲಿಕೇಶನ್ ಇದೀಗ ಭವಿಷ್ಯದ ಭಾರತಕ್ಕೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications