Aadhaar Card: ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕೆ?; ಈ ದಿನಾಂಕದೊಳಗೆ ಪ್ರಕ್ರಿಯೆ ಮುಗಿಸಿ
Aadhaar Card: ಪ್ರಮುಖ ದಾಖಲೆಗಳಲ್ಲಿ ಆದಾರ್ ಕಾರ್ಡ್ ಕೂಡ ಒಂದಾಗಿದೆ. ಯಾವುದಾರೂ ಅರ್ಜಿ ಹಾಕಬೇಕೆಂದರೆ ಇದು ಅಗತ್ಯವಾಗಿ ಬೇಕಾಗುತ್ತದೆ. ಇನ್ನು ಇದೀಗ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡುವ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಲಾಗಿದೆ. ಹಾಗಾದರೆ ನವೀಕರಣಕ್ಕಾಗಿ ಯಾವೆಲ್ಲ ದಾಖಲೆಗಳು ಬೇಕು ಹಾಗೂ ಪ್ರಕ್ರಿಯೆಗಳು ಹೇಗಿರಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತದ ನಿರ್ಣಾಯಕ ಗುರುತಿನ ಪ್ರಕ್ರಿಯೆಯ ಭಾಗ ಆಗಿರುವ ಆಧಾರ್ ಕಾರ್ಡ್‌ನ ನವೀಕರಣದ ಗಡುವನ್ನು 2025ರ ಜೂನ್ 14ರ ವರೆಗೆ ವಿಸ್ತರಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಈ ನಿರ್ಧಾರವನ್ನು UIDAI ಮೂಲಕ ಪ್ರಕಟಿಸಲಾಗಿದೆ. ಇದರಿಂದಾಗಿ 10 ವರ್ಷಕ್ಕಿಂತ ಹಳೆಯದಾದ ಆಧಾರ್ ದತ್ತಾಂಶಗಳನ್ನು ಉಚಿತವಾಗಿ ಅಪ್ಡೇಟ್ ಮಾಡಿಕೊಳ್ಳಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಆಧಾರ್ ಕಾರ್ಡ್ ವಾಸ್ತವಾಧರಿತ ಗುರುತಿನ ಚೀಟಿಗಳಲ್ಲಿ ಒಂದಾಗಿದೆ. ಇದನ್ನು ಪಡಿತರ ಚೀಟಿ, ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಪಿಂಚಣಿ ಸೇರಿದಂತೆ ಹಲವು ಸೇವೆಗಳಿಗಾಗಿ ಬಳಕೆ ಮಾಡಲಾಗುತ್ತದೆ. UIDAI ಪ್ರಕಾರ, 10 ವರ್ಷಕ್ಕಿಂತ ಹಳೆಯದಾದ ಆಧಾರ್ ಮಾಹಿತಿಯನ್ನು ನವೀಕರಿಸದಿದ್ದಲ್ಲಿ ಅವುಗಳನ್ನು ರದ್ದುಗುಳಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈಗಾಗಲೇ ಉಚಿತವಾಗಿ ಅಪ್ಡೇಟ್ ಮಾಡುವ ಗಡುವನ್ನು ಹಲವು ಬಾರಿ ಗಡುವು ವಿಸ್ತರಣೆ ಮಾಡಲಾಗಿದೆ. ಈ ಬಾರಿ ಉಚಿತವಾಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಕೊನೆ ದಿನಾಂಕ ಡಿಸೆಂಬರ್ 14, 2025ರ ವರೆಗೆ ವಿಸ್ತರಣೆ ಮಾಡಲಾಗಿದೆ. UIDAI ಈ ಉಚಿತ ಸೇವೆಯನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತಿದೆ.
ಆಧಾರ್ ಅಪ್ಡೇಟ್‌ಗೆ ಬೇಕಾಗುವ ದಾಖಲೆಗಳ ವಿವರ
* ಪಡಿತರ ಚೀಟಿ
* ಮತದಾರ ಗುರುತಿನ ಚೀಟಿ
* ವಾಸಸ್ಥಳ ಪ್ರಮಾಣಪತ್ರ
* ಉದ್ಯೂಗ ಖಾತರಿ ಯೋಜನೆಯ ಜಾಬ್ ಕಾರ್ಡ್
* ವಾಹನ ಚಾಲನಾ ಪರವಾನಗಿ
* ಪ್ಯಾನ್ ಕಾರ್ಡ್
* ಪಾರ್ಟ್ ಫೋಟೋ
* ಸಿಜಿಎನ್‌ಎಸ್ ಕಾರ್ಡ್
ಆಧಾರ್ ಅಪ್ಡೇಟ್ ಮಾಡುವ ವಿಧಾನಗಳು
* ಮೈ ಆಧಾರ್ ಪೋರ್ಟಲ್ ಓಪನ್ ಮಾಡಿ
* https://myaadhar.udai.gov.in ಗೆ ಭೇಟಿ ನೀಡಿ ಲಾಗ್ ಇನ್ ಆಗಿ
* ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ನಮೂದಿಸಿ
* ನಿಮ್ಮ ನೋಂದಾಹಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾದ ಒಟಿಪಿಯನ್ನು ನಮೂದಿಸಿ
* ನವಿಕರಿಸಬೇಕಾದ ಮಾಹಿತಿಯನ್ನು ಆಯ್ಕೆ ಮಾಡಿ
* ಅಲ್ಲಿ ವಿಳಾಸ, ಪೋಟೋ ಅಥವಾ ಇತರ ಮಾಹಿತಿಗಳನ್ನು ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.
* ಬಳಿಕ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಇನ್ನು ಅಪ್ಡೇಟ್ ಪ್ರಿಕ್ರಿಯೆಗೆ ಯಾವುದೇ ಶುಲ್ಕ ಇರುವುದಿಲ್ಲದೆ ಉಚಿವಾಗಿರಲಿದೆ. ಈ ಅವಕಾಶ 2025ರ ಜೂನ್ 14ರ ವರೆಗೆ ಮಾತ್ರ ಇರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications