Aahdaar Updates: ಭಾರತದಲ್ಲಿ ಆಧಾರ್ ದೃಢೀಕರಣ ಶೇ. 31ರಷ್ಟು ಹೆಚ್ಚಳ! ಇದು ಡಿಜಿಟಲ್ ಬೆಳವಣಿಗೆ
ಬೆಂಗಳೂರು, ಫೆಬ್ರವರಿ 13: ಭಾರತದಲ್ಲಿ ಆಧಾರ್ ಗುರುತಿನ ಚೀಟಿ (Aahdaar Card) ದೈನಂದಿನ ವ್ಯವಹಾರಗಳಲ್ಲಿ ಬಳಕೆ ಆಗುತ್ತಿದೆ. ದಿನೇ ದಿನೆ ಆಧಾರ್ ಬಳಕೆ, ಉಪಯುಕ್ತಕೆ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕಿಂತಲೂ 2025ರ ಒಂದೇ ತಿಂಗಳಲ್ಲಿ ಆಧಾರ್ ದೃಢೀಕರಣ ಪ್ರಮಾಣ ಶೇಕಡಾ 31ರಷ್ಟು ಏರಿಕೆ ಆಗಿದೆ ಎಂದು ಕೇಂದ್ರ ಸರ್ಕಾರವು ಅಧಿಕೃತ ಮಾಹಿತಿ ನೀಡಿದೆ. ಇದನ್ನು ಡಿಜಿಟಲ್ ಆರ್ಥಿಕ ಬೆಳವಣಿಗೆ ಅಂತಲೂ ಕೇಂದ್ರ ವ್ಯಾಖ್ಯಾನಿಸಿದೆ.
ಭಾರತೀಯ ಎಂಬುದಕ್ಕೆ ಪ್ರಮುಖ ಗುರುತಾಗಿರುವ ಆಧಾರ್ ಕಾರ್ಡ್ ಕೇವಲ ಹಣಕಾಸು ಮತ್ತು ಬ್ಯಾಂಕ್ ವ್ಯವಹಾರಗಳಿಗೆ, ಮತದಾನ ಸಂದರ್ಭದಲ್ಲಿ, ಶಿಕ್ಷಣ ರಂಗದಲ್ಲಿ ಮಾತ್ರವಲ್ಲದೇ ಅನೇಕ ಕ್ಷೇತ್ರಗಳಲ್ಲಿ, ವಿವಿಧ ಹಂತಗಳಲ್ಲಿ ಬಳಕೆಯಾಗುತ್ತಿದೆ. ಈ ಆಧಾರ್‌ನಿಂದ ಹತ್ತ ಹಲವು ಪ್ರಯೋಜನಗಳು ಇವೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಆಂಡ್ ಐಟಿ ಸಚಿವಾಲಯದ ಅಂಕಿ ಸಂಖ್ಯೆ ಪ್ರಕಾರ, 2025 ರ ಜನವರಿ ಒಂದೇ ತಿಂಗಳಲ್ಲಿನಲ್ಲಿ ಆಧಾರ್ ಹೊಂದಿರುವವರು 284 ಕೋಟಿಗೂ ಹೆಚ್ಚು ದೃಢೀಕರಣ ವಹಿವಾಟುಗಳನ್ನು ನಡೆಸಿದ್ದಾರೆ. ಇದು ಭಾರತದಲ್ಲಿ ಡಿಜಿಟಲ್ ಆರ್ಥಿಕತೆಯ ನಿರಂತರ ವಿಸ್ತರಣೆ, ಆದ್ಯತೆಯನ್ನು ಎತ್ತಿ ತೋರಿಸಿದೆ.
2024 ರ ಜನವರಿಯಲ್ಲಿ ಒಟ್ಟು 214.8 ಕೋಟಿ ಆಧಾರ್ ಧೃಡೀಕರಣ ವಹಿವಾಟು ನಡೆದಿವೆ. ಆ ವರ್ಷಕ್ಕೆ ಹೋಲಿಸಿದರೆ ಹಾಲಿ 2025 ರ ಜನವರಿಯಲ್ಲಿ ದೃಢೀಕರಣ ವಹಿವಾಟುಗಳಲ್ಲಿ ಶೇಕಡಾ 32% ಅಧಿಕ ಬೆಳವಣಿಗೆ ಸಾಧಿಸಲಾಗಿದೆ. ಈ ಮೂಲಕ ಆಧಾರ್ ಡಿಜಿಟಲ್ ವಹೀವಾಟು ಏರಿಕೆ ಆಗಿದೆ ಎಂದು ಸಚಿವಾಲಯದ ವರದಿ ಮಾಹಿತಿ ನೀಡಿದೆ.

ನಿತ್ಯ ಸರಾಸರಿ 09 ಕೋಟಿ ಆಧಾರ್ ದೃಢೀಕರಣ
ಇನ್ನೂ ಸರಳವಾಗಿ ಹೇಳುವುದಾದರೆ, ಆಧಾರ್ ಹೊಂದಿರುವವರ ಪೈಕಿ ಆಧಾರ್ ದೃಢೀಕರಣ (Aadhaar Authentications) ಮಾಡುವವರ ಸಂಖ್ಯೆ ಏರಿಕೆ ಆಗಿದೆ. ನಿತ್ಯ ಸರಾಸರಿ 09 ಕೋಟಿಗೂ ಹೆಚ್ಚು ದೃಢೀಕರಣ ನಡೆಯುತ್ತಿವೆ. ಇದು ಜನರ ದೈನಂದಿನ ಜೀವನದಲ್ಲಿ ಆಧಾರ್‌ನ ಹೆಚ್ಚುತ್ತಿರುವ ಅಳವಡಿಕೆ ಮತ್ತು ಉಪಯುಕ್ತತೆ ತೋರಿಸುತ್ತದೆ.
ಸುಮಾರು 550 ಘಟಕ ಆಧಾರ್ ದೃಢೀಕರಣ ಸೇವೆ ನೀಡುತ್ತಿವೆ. ಕಳೆದ ತಿಂಗಳೂ ಜನವರಿಯಲ್ಲಿ, ಸುಮಾರು 12 ಕೋಟಿ ಮಂದಿಯ ಆಧಾರ್ ಮುಖ ದೃಢೀಕರಣ (Face Authentications) ಮಾಡಲಾಗಿದೆ. ಒಟ್ಟಾರೆ ಮುಖ ದೃಢೀಕರಣ ವಹಿವಾಟು ಸಂಖ್ಯೆ 102 ಕೋಟಿ ದಾಟಿದೆ.
ಇನ್ನೂ ಈ ಫೇಸ್ ದೃಢೀಕರಣವನ್ನು 2021 ರ ಅಕ್ಟೋಬರ್ ನಲ್ಲಿ ಪರಿಚಯಿಸಲಾಯಿತು. ಕಳೆದ 12 ತಿಂಗಳುಗಳಲ್ಲಿ ಆಧಾರ್‌ನಲ್ಲಿ ಮುಖ ದೃಢೀಕರಣ ವಹಿವಾಟು ಪ್ರಮಾಣ ಒಟ್ಟು ಸುಮಾರು 78 ಕೋಟಿಗೆ ಹೆಚ್ಚಾಗಿದೆ ಎಂದು ಸಚಿವಾಲಯ ಹೇಳಿದೆ.
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಅಭಿವೃದ್ಧಿಪಡಿಸಿದ AI/ML ಆಧಾರಿತ ಫೇಸ್ ರೆಕಗ್ನೈಜೇಷನ್ ಅನ್ನು ಆರೋಗ್ಯ, ಹಣಕಾಸು, ವಿಮೆ, ಫಿನ್‌ಟೆಕ್, ದೂರಸಂಪರ್ಕ ಸೇರಿದಂತೆ ವಿವಿಧ ರಂಗಗಳಲ್ಲಿ ಬಳಕೆ ಆಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೆಲವು ಪರಿಹಾರ, ಸೌಲಭ್ಯಗಳ ಪ್ರಯೋಜನೆ ಅರ್ಹರಿಗೆ ತಲುಪಿಸುವಾಗಿ ಆಧಾರ್ ಮುಖ ದೃಢೀಕರಣ ಪಡೆಯುತ್ತದೆ.
ಜನವರಿ ಆಧಾರ್ ದೃಢೀಕರಣದ ಮುಖ್ಯಾಂಶಗಳು
* ಆಧಾರ್ ಫಿಂಗರ್ ಪ್ರಿಂಟ್ ದೃಢೀಕರಣ ಸಂಖ್ಯೆ: 131.59 ಕೋಟಿ
* ಆಧಾರ್ ಒಟಿಪಿ ದೃಢೀಕರಣ ಸಂಖ್ಯೆ: 41.52 ಕೋಟಿ
* ಆಧಾರ್ ಮುಖ ದೃಢೀಕರಣ ಸಂಖ್ಯೆ: 11.56 ಕೋಟಿ
* ಆಧಾರ್ ಐರಿಸ್ ದೃಢೀಕರಣ ಸಂಖ್ಯೆ: 3.24 ಕೋಟಿ
* ಆಧಾರ್ ಜನಸಂಖ್ಯಾ ದೃಢೀಕರಣ ಸಂಖ್ಯೆ: 96. 72 ಕೋಟಿ.
* ಆಧಾರ್ KYC ಸಂಖ್ಯೆ: 43+ ಕೋಟಿ.
ಆಧಾರ್ ಇ-ಕೆವೈಸಿಯ ಮಹತ್ವದ ಪಾತ್ರ
ಜನರಿಗೆ ಪಾರದರ್ಶಕ ಮತ್ತು ಸುಧಾರಿತ ಅನುಭವವನ್ನು ಆಧಾರ್ ಇ-ಕೆವೈಸಿ ಸೇವೆಯು ಒದಗಿಸತ್ತದೆ. ಕೆವೈಸಿ ಸೇವೆಯು ವ್ಯವಹಾರ ಸುಲಭಗೊಳಿಸಲು ಸಹಾಯ ಮಾಡುತ್ತದೆ. ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಹಣಕಾಸು ಸೇವೆಯಲ್ಲೂ ಈ ಆಧಾರ್ ಕೆವೈಸಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.
ಜನವರಿಯಲ್ಲಿ 43 ಕೋಟಿಗೂ ಹೆಚ್ಚು ಇ-ಕೆವೈಸಿ ವಹಿವಾಟುಗಳು ನಡೆಸಲಾಗಿದ್ದು, ಜನವರ ಅಂತ್ಯದವರೆಗೆ ಇದುವರೆಗಿನ ಒಟ್ಟಾರೆ ಆಧಾರ್ ಇ-ಕೆವೈಸಿ ವಹಿವಾಟುಗಳು ಸರಿಸುಮಾರು 2268 ಕೋಟಿ ಮೀರಿವೆ.












Click it and Unblock the Notifications