ಸದ್ಯವೇ ಆಧಾರ್ ವಿಶ್ವದ ಬಯೋಮೆಟ್ರಿಕ್ ಹಿರಿಯಣ್ಣ
ನವದೆಹಲಿ, ಏ. 28: ಆಧಾರ್ ಕಾರ್ಡ್ ವ್ಯವಸ್ಥೆ ಸದ್ಯವೇ ಮತ್ತೊಂದು ಹಿರಿಮೆಯನ್ನು ತನ್ನದಾಗಿರಿಸಿಕೊಳ್ಳಲಿದೆ. ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ವ್ಯವಸ್ಥೆ ಎಂಬ ಹಿರಿಮೆಗೆ ಆಧಾರ್ ಕಾರ್ಡ್ ಪಾತ್ರವಾಗಲಿದೆ.
ಸದ್ಯ ಫೆಡರಲ್ ಬ್ಯೂರೋ ಆಫ್ ಇನ್ ವೆಸ್ಟಿಗೇಶನ್(ಎಫ್ ಬಿಐ) ಅತಿದೊಡ್ಡ ಬಯೋಮೆಟ್ರಿಕ್ ವ್ಯವಸ್ಥೆ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ. ಆದರೆ ಭಾರತದ 82 ಕೋಟಿ ಜನ ಆಧಾರ್ ನೋಂದಾವಣಿ ಮಾಡಿಕೊಂಡಿದ್ದು ಎಫ್ ಬಿಐ ನ್ನು ಹಿಂದಕ್ಕೆ ಹಾಕಲು ಇನ್ನು 15 ಕೋಟಿ ಜನರ ಅಗತ್ಯವಿದೆ.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಆಧಾರ್ ಗೆ ನೋಂದಣಿಯಾಗುತ್ತಿರುವವರ ಸಂಖ್ಯೆ ತಿಂಗಳಿಗೆ 2 ಕೋಟಿ ಇದೆ. ಆಧಾರ್ ನೋಂದಣಿಯಲ್ಲಿ ಉತ್ತರ ಪ್ರದೇಶ ಮುಂದೆ ಇದೆ. ಅಲ್ಲಿನ 10.48 ಕೋಟಿ ಜನ ಕಾರ್ಡ್ ಪಡೆದುಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ 9.19 ಕೋಟಿ ಜನ ಮತ್ತು ಪಶ್ಚಿಮ ಬಂಗಾಳದಲ್ಲಿ 6.12 ಕೋಟಿ ಜನ ಆಧಾರ್ ವ್ಯವಸ್ಥೆಗೆ ಒಳಪಟ್ಟಿದ್ದಾರೆ.[ಮದುವೆ ಪ್ರಮಾಣ ಪತ್ರ ಪಡೆಯುವುದು ಹೇಗೆ?]
ಭಾರತದ ಜನಸಂಖ್ಯೆಯ ಸುಮಾರು ಶೇ. 67 ಜನ ಆಧಾರ್ ಕಾರ್ಡ್ ಪಡೆದುಕೊಂಡಿದ್ದಾರೆ. ಆಧಾರ್ ಕಾರ್ಡ್ ನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಜನಧನ ಯೋಜನೆಯೊಂದಿಗೆ ಸಂಯೋಜನೆ ಮಾಡಿತ್ತು. ಅಲ್ಲದೇ ಗ್ಯಾಸ್ ಸಬ್ಸಿಡಿ ಮತ್ತು ಪಾಸ್ ಪೋರ್ಟ್ ಪಡೆಯಲು ಆಧಾರ್ ಕಾರ್ಡ್ ಅಗತ್ಯತೆ ಬಗ್ಗೆ ಆದೇಶಗಳು ಬಂದಿದ್ದವು.[ಅರ್ಜಿ ಹಾಕಿದ 48 ಗಂಟೆಗಳಲ್ಲಿ ಪಾಸ್ ಪೋರ್ಟ್]











Click it and Unblock the Notifications