Tatkal Ticket Booking: ರೈಲ್ವೆ ತತ್ಕಾಲ್ ಟಿಕೆಟ್ ಬುಕ್ಕಿಂಗ್‌ಗೆ ಇನ್ಮುಂದೆ ಆಧಾರ್ ಕಡ್ಡಾಯ, ಹೊಸ ನಿಯಮ
Indian Railways New Rule: ರೈಲುಗಳು ಸಂಚರಿಸುವ ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆಯು ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ರೈಲ್ವೆ ಟಿಕೆಟ್ ಅನ್ನು ಆನ್‌ಲೈನ್ ನಲ್ಲಿ ಬುಕ್ ಮಾಡುವವರಿಗೆ ಅದರಲ್ಲೂ ತತ್ಕಾಲ್ ನಲ್ಲಿ (Tatkal Ticket Booking) ಯಾರೆಲ್ಲ ಟಿಕೆಟ್ ಬುಕ್ ಮಾಡುತ್ತೀರೋ ಅವರಿಗೆ ಸಂಬಂಧಿಸಿದ ಸುದ್ದಿ ಇದಾಗಿದೆ. ಈ ಪ್ರಮುಖ 'ಆಧಾರ್' ದಾಖಲೆ ಕಡ್ಡಾಯಗೊಳಿಸಲು ಇಲಾಖೆ ಮುಂದಾಗಿದೆ. ಯಾಕೆ ಕಾರಣವೇನು? ಎಂಬ ಮಾಹಿತಿ ಇಲ್ಲಿದೆ.
ಭಾರತೀಯ ರೈಲ್ವೆ ತತ್ಕಾಲ್ ರೈಲು ಟಿಕೆಟ್‌ಗಳನ್ನು ಬುಕ್ ಮಾಡುವವರಿಗೆ ಕಡ್ಡಾಯ ಇ-ಆಧಾರ್ ದೃಢೀಕರಣ (E-Aadhaar Authentication) ಪರಿಚಯಿಸಲು ಮುಂದಾಗಿದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಶೀಘ್ರವೇ ಈ ಯೋಜನೆ ಜಾರಿಗೆ ತಲು ರೈಲ್ವೆ ಅಧಿಕಾರಿಗಳು ತಯಾರಿ ಮಾಡಿಕೊಂಡಿದ್ದಾರೆ. ಯಾರೆಲ್ಲ ಕೊನೆ ಗಳಿಗೆಯಲ್ಲಿ ಒಂದು ದಿನ ಮೊದಲು ಟ್ರೈನ್ ಟಿಕೆಟ್ ಕಾಯ್ದಿರಿಸಲು ತತ್ಕಾಲ್ ಬುಕ್ಕಿಂಗ್ ಮೊರೆ ಹೋಗುತ್ತೀರೋ ಅವರೆಲ್ಲರಿಗೆ ಈ ಹೊಸ ನಿಯಮ ಅನ್ವಯವಾಗಲಿದೆ.

ರೈಲು ಪ್ರಯಾಣಕ್ಕೆಂದು ತತ್ಕಾಲ್ ನಲ್ಲಿ ಟಿಕೆಟ್ ಬುಕ್ಕಿಂಗ್ ವೇಳೆ ಕಂಡು ಬರುತ್ತಿರುವ ಮತ್ತು ವಂಚನೆ ತಡೆಯುವ ಪ್ರಮುಖ ಉದ್ದೇಶದಿಂದ ಈ ಹೊಸ ಕ್ರಮ ಜಾರಿಗೆ ಭಾರತೀಯ ರೈಲ್ವೆ ಮುಂದಾಗಿದೆ. ಈ ಹೊಸ ನಿಯಮದಿಂದಾಗಿ ತತ್ಕಾಲ್ ಕೋಟಾದಡಿ ನೈಜ ಪ್ರಯಾಣಿಕರಿಗೆ ಟಿಕೆಟ್ ಲಭ್ಯವಾಗುವಂತೆ ಮಾಡುವ ಗುರಿ ಇಲಾಖೆ ಹೊಂದಿದೆ. ಇನ್ನು ಮುಂದೆ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಇ-ಆಧಾರ್ ಪರಿಶೀಲನೆ (ದೃಢೀಕರಣ) ಲಿಂಕ್ ಮೂಲಕ ಬುಕ್ ಆಗಲಿದೆ. ಇದರಿಂದ ಪಾರದರ್ಶಕ ಟಿಕೆಟ್ ಪ್ರಕ್ರಿಯೆಗೆ ಪೂರಕ ವ್ಯವಸ್ಥೆ ಕಲ್ಪಿಸಿದಂತಾಗುತ್ತದೆ.
ಪೂರ್ವ ಯೋಜನೆ ಇಲ್ಲದೇ ದಿಢೀರ್ ರೈಲು ಪ್ರಯಾಣ ಮಾಡಬೇಕಾದ ಸಂದರ್ಭದಲ್ಲಿ ತತ್ಕಾಲ್ ಟಿಕೆಟ್‌ಗಳ ಬುಕ್ ಮಾಡುವಾಗ ಏಜೆಂಟ್‌ಗಳು ಅನ್ಯಾಯ ದಾರಿ ಅನುಸರಿಸಬಹುದು. ಈ ಹೊಸ ನಿಯಮದಡಿ ಪ್ರಯಾಣಿಕರು ತಮ್ಮ ಇ-ಆಧಾರ್ ದೃಢೀಕರಣ ಮಾಡಿ ಸ್ವಯಂ ಬುಕ್ಕಿಂಗ್ ಮಾಡಬಹುದು. ಈ ವೇಳೆ ಆಧಾರ್ ಗುರುತನ್ನು ಡಿಜಿಟಲ್ ರೂಪದಲ್ಲಿ ಪರಿಶೀಲಿಸುವುದು ಅವಶ್ಯಕವಾಗಿರುತ್ತದೆ. ಇದರಿಂದ ಮೋ ಹೋಗುವುದನ್ನು ರೈಲ್ವೆ ಇಲಾಖೆ ತಡೆಯಲು ಮಹತ್ವದ ಹೆಜ್ಜೆ ಇಟ್ಟಿದೆ.
ಮೂಲಗಳ ಪ್ರಕಾರ ಜೂನ್ ಅಂತ್ಯಕ್ಕೆ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಭಾರತೀಯ ರೈಲ್ವೆ ಸಜ್ಜಾಗಿದೆ. ನೈಜ ರೈಲ್ವೆ ಪ್ರಯಾಣಿಕರಿಗೆ ಅಗತ್ಯತೆಗನುಗುಣವಾಗಿ ದೃಢೀಕೃತ ಟಿಕೆಟ್‌ಗಳನ್ನು ಪಡೆಯಬಹುದಾಗಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ.
ತತ್ಕಾಲ್ ನಲ್ಲಿ ಎಷ್ಟು ಟಿಕೆಟ್ ಮಾರಾಟ
ರೈಲು ಪ್ರಯಾಣಕ್ಕೂ ಎರಡು ತಿಂಗಳು (60 ದಿನಗಳ) ಮೊದಲು ನೀವು ನಿಮ್ಮ ಸೀಟುಗಳನ್ನು ಬುಕ್ಕಿಂಗ್ ಮೂಲಕ ಕಾಯ್ದಿರಿಸಬಹುದಾಗಿದೆ. ಒಟ್ಟು ಟಿಕೆಟ್‌ಗಳಲ್ಲಿ ಶೇಕಡಾ 20ರಷ್ಟು ಟಿಕೆಟ್‌ಗಳನ್ನು ತತ್ಕಾಲ್ ಯೋಜನೆಯ ಮೂಲಕ ಮಾರಾಟ ಮಾಡಲಾಗುತ್ತದೆ. ಇದು ರೈಲು ಹೊರಡುವ ಒಂದು ದಿನ ಮೊದಲು ಬೆಳಗ್ಗೆ 10 ಗಂಟೆಗೆ ಬುಕ್ಕಿಂಗ್ ಮಾಡಲಾಗುತ್ತದೆ. ಸದ್ಯ ಇದಕ್ಕೆ ಟಿಕೆಟ್ ಬುಕಿಂಗ್‌ಗಾಗಿ ಇ-ಆಧಾರ್ ದೃಢೀಕರಣ ನಿಯಮವನ್ನು ಇದೇ ಜೂನ್ ಅಂತ್ಯಕ್ಕೆ ಜಾರಿ ಮಾಡುವ ಸಾಧ್ಯತೆ ಇದೆ.












Click it and Unblock the Notifications