ಸಿಎಂ ನಾಯ್ಡುಗೆ ಕಿಸ್ ಕೊಡಲು ಮುಗಿಬಿದ್ದ ಮಹಿಳೆ! ವಿಡಿಯೋ ವೈರಲ್
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ರಾಜಕಾರಣಿಗಳೆಂದರೆ ಸಾಮಾನ್ಯವಾಗಿ ಫ್ಯಾನ್ಸ್ ಇದ್ದೇ ಇರುತ್ತಾರೆ. ಅವರನ್ನೊಮ್ಮೆ ನೋಡಬೇಕು, ಅವರನ್ನೊಮ್ಮೆ ಮುಟ್ಟಬೇಕು ಎಂದು ಹಲವರು ಕನಸು ಕಾಣುತ್ತಾರೆ. ಕೆಲವೊಮ್ಮೆ ಈ ಕನಸು ನನಸಾದಾಗ ಏನು ಮಾಡಲು ಗೊತ್ತಾಗದೆ ಫಜೀತಿಗೆ ಸಿಲುಕುತ್ತಾರೆ. ಆಂಧ್ರ ಸಿಎಂ ವಿಚಾರದಲ್ಲೂ ಇಂತದ್ದೇ ಘಟನೆ ನಡೆದಿದೆ.
ಮಹಿಳೆಯೊಬ್ಬರು ನಾಯ್ಡು ಅವರಿಗೆ ಮುತ್ತು ಕೊಡಲು ಮುಗಿಬಿದ್ದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ಸಾರ್ವಜನಿಕವಾಗಿ ಕಿಸ್ ಮಾಡಲು ಹೋಗಿದ್ದು, ಇದರಿಂದ ನಾಯ್ಡು ಜಸ್ಟ್ ಮಿಸ್ ಆಗಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಈ ಸಂಗತಿ ನಡೆದಿದೆ ಎಂದು ವರದಿಯಾಗಿದೆ.

ಚಂದ್ರಬಾಬು ನಾಯ್ಡು ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು ನಾಯ್ಡು ಅವರನ್ನು ಕಂಡು ಫುಲ್ ಖುಷ್ ಆಗಿದ್ದಾರೆ. ಬಳಿಕ ಅವರಿಗೆ ಹೂಗುಚ್ಛ ನೀಡಲು ಮುಂದಾಗಿ, ಬಳಿಕ ಅವರ ಕೆನ್ನೆಗೆ ಮುತ್ತು ಕೊಡಲು ಮಹಿಳೆ ಮುಗಿಬಿದ್ದಿದ್ದಾರೆ. ಆದರೆ, ನಾಯ್ಡು ಅವರು ಮಹಿಳೆಯ ಮುತ್ತಿನಿಂದ ಪಾರಾಗಿದ್ದಾರೆ.
Visakhapatnam (AP) 74-year-old TDP Chief Chandrababu Naidu dodges a kiss attempt from an enthusiastic fan! pic.twitter.com/baMOMLIiNF
— Dheeraj Singh (@dheeraj_journo) November 3, 2024
ವಿಡಿಯೋದಲ್ಲಿ ಮಹಿಳೆಯು ಸಂತೋಷ ತಾಳಲಾರದೆ, ನಾಯ್ಡು ಅವರ ಕೆನ್ನೆಗೆ ಸಿಹಿಮುತ್ತು ನೀಡಲು ಮುಂದಾಗಿದ್ದು, ಕೂಡಲೇ ಅಲ್ಲಿದ್ದ ಸಿಎಂ ಭದ್ರತಾ ಸಿಬ್ಬಂದಿ ಕೂಡ ಮಹಿಳೆಯನ್ನು ತಡೆಯುವ ಯತ್ನ ಮಾಡಿದ್ದಾರೆ. ಸಿಎಂ ಕೂಡ ಮಹಿಳೆಯ ಮುತ್ತಿಗೆ ನಿರಾಕರಿಸುವುದು ದೃಶ್ಯಗಳಲ್ಲಿದೆ. ಬಳಿಕ ಅಲ್ಲಿದ್ದ ಸೆಕ್ಯೂರಿಟಿ ಮಹಿಳೆಯನ್ನು ತಡೆದಿದ್ದಾರೆ.

ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಈ ವಿಡಿಯೋಗೆ ಬೇರೆ ಬೇರೆ ಕಥೆ ಕಟ್ಟಿದ್ದಾರೆ. ಕೆಲವರು ಮಹಿಳೆ ಅಭಿಮಾನದಿಂದ ಕಿಸ್ ಮಾಡಲು ಹೋಗಿರಬಹುದು. ಇದು ತಪ್ಪಲ್ಲ ಎಂದು ಆಕೆಯ ಬೆನ್ನಿಗೆ ನಿಂತಿದ್ದಾರೆ. ಇನ್ನೂ ಕೆಲವರು ಅವರಿಗೆ ಮುತ್ತು ಕೊಡುವ ವಯಸ್ಸೇನ್ರೀ...? ಎಂದೂ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿವೆ.
ಈ ಪ್ರಸಂಗದ ಬಗ್ಗೆ ಮಾತನಾಡಿರುವ ಮಹಿಳೆ, ನಾನು ನನ್ನ ಜೀವನದಲ್ಲಿ ಈ ದಿನವನ್ನು ಮರೆಯುವುದೇ ಇಲ್ಲ. ಮೊದಲೆಲ್ಲ ಚಂದ್ರಬಾಬು ನಾಯ್ಡು ಅವರನ್ನು ಟಿವಿಯಲ್ಲಿ ಮಾತ್ರವೇ ನೋಡುತ್ತಿದ್ದೆ. ಅವರನ್ನು ಒಮ್ಮೆಯಾದರೂ ಹತ್ತಿರದಿಂದ ನೋಡಬೇಕು ಎಂದುಕೊಂಡಿದ್ದೆ. ಆ ಅವಕಾಶ ನನಗೆ ಈ ದಿನ ಸಿಕ್ಕಿದೆ. ಇದು ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ ಎಂದು ಮಹಿಳೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರಿಗೂ ಮಹಿಳೆಯೊಬ್ಬರು ಸಾರ್ವಜನಿಕವಾಗಿ ಮುತ್ತು ನೀಡಿದ್ದರು. ಇದೂ ಕೂಡ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿ ಚರ್ಚೆ ಹುಟ್ಟುಹಾಕಿತ್ತು.
ಋಷಿಕೊಂಡದಲ್ಲಿ ಐಷಾರಾಮಿ ಕಟ್ಟಡಗಳ ನಿರ್ಮಾಣಕ್ಕಾಗಿ ಸಾರ್ವಜನಿಕ ಹಣವನ್ನು ದೊಡ್ಡ ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್‌ಸಿ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಸಮರ ಸಾರಿದ್ದು, ನಾಯ್ಡು ಅವರು ಜನಪ್ರತಿನಿಧಿಗಳೊಂದಿಗೆ ಋಷಿಕೊಂಡದಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ಪರಿಶೀಲಿಸಿದರು.
ತಮ್ಮ ಸ್ವಾರ್ಥಕ್ಕಾಗಿ ಅರಮನೆ ಕಟ್ಟಲು ಪರಿಸರ ಹಾಳು ಮಾಡುತ್ತಿರುವ ಮುಖ್ಯಮಂತ್ರಿಯನ್ನು ನಾನು ನೋಡೇ ಇಲ್ಲ. ಇದೀಗ ಕೆಲವು ಹೃದಯ ವಿದ್ರಾವಕ ಸಂಗತಿಗಳು ಬೆಳಕಿಗೆ ಬರುತ್ತಿವೆ. ಈ ಕಟ್ಟಡ ನಿರ್ಮಾಣ ವಿಚಾರ ಅತ್ಯಂತ ರಹಸ್ಯವಾಗಿತ್ತು. ಹಿಂದಿನ ವೈಎಸ್‌ಆರ್‌ಸಿ ಸರ್ಕಾರವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳನ್ನೂ ದಾರಿ ತಪ್ಪಿಸಿತ್ತು ಎಂದು ನಾಯ್ಡು ಆರೋಪ ಮಾಡಿದರು.












Click it and Unblock the Notifications