Bihar Results: ಬಿಹಾರ ಇತಿಹಾಸದಲ್ಲೇ ಈ ಬಾರಿ ಹೊಸ ಮ್ಯಾಜಿಕ್ ?
Bihar Results: ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿ ಎನ್‌ಡಿಎ ಭರ್ಜರಿ ಮುನ್ನಡೆ ಕಾಯ್ದು ಕೊಂಡಿದೆ. ಆದರೆ ಬಿಹಾರದ ರಾಜಕೀಯವೇ ರಣಕೋಚಕವಾಗಿದೆ. ಬಿಹಾರದಲ್ಲಿ 1995ರಿಂದ ಇಲ್ಲಿಯ ವರೆಗೆ ಯಾವುದೇ ಒಂದು ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೇರಿಲ್ಲ. ಬಿಹಾರ ರಾಜಕೀಯದಲ್ಲಿ ಹಲವು ಬದಲಾವಣೆಗಳು ಆಗಿವೆ. ಪ್ರಮುಖವಾಗಿ ಜೆಪಿ ಆಂದೋಲನವು ಇದಕ್ಕೊಂದು ಹೊಸ ಭಾಷ್ಯಾವನ್ನೇ ಬರೆದಿದೆ. ಇದಾದ ಮೇಲೆ ಕಾಂಗ್ರೆಸ್‌ನ ಬಲ ಇಲ್ಲಿ ಕುಸಿಯುತ್ತಾ ಬಂತು. ಅಲ್ಲದೇ ಪ್ರಾದೇಶಿಕ ಮತ್ತು ಸಣ್ಣ ಪಕ್ಷಗಳು ಹೆಚ್ಚಾದವು.
ಈ ಬಾರಿ ಬಿಹಾರದಲ್ಲಿ ದೊಡ್ಡ ಪಕ್ಷಗಳೊಂದಿಗೆ ಸಣ್ಣ ಪಕ್ಷಗಳು ಸಹ ಸೆಣಸಿವೆ. 8ಕ್ಕೂ ಹೆಚ್ಚು ಸಣ್ಣ ಪಕ್ಷಗಳು ಚುನಾವಣಾ ಕಣದಲ್ಲಿ ಗುರುತಿಸಿಕೊಂಡಿವೆ. ಯಾದವೀ ಕಲಹ ಆರ್‌ಜೆಡಿಗೆ ಬಿಸಿ ತುಪ್ಪವಾಗಿ ಬದಲಾಗಿತ್ತು. ಮಹಾಘಟಬಂಧನ್‌ನಲ್ಲಿನ ಬಿರುಕೇ ಎನ್‌ಡಿಎಗೆ ಭಾರೀ ಬಲವನ್ನು ತಂದುಕೊಟ್ಟಿದೆ. ಬಿಹಾರದಲ್ಲಿ ಜನತಾದಳ (ಸಂಯುಕ್ತ)ಕ್ಕೆ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಈಗ ಅಧಿಕಾರದಲ್ಲಿದೆ. ಬಿಹಾರದಲ್ಲಿ ಈ ಬಾರಿ ಭಾರೀ ಆಡಳಿತ ವಿರೋಧಿ ಅಲೆ ಇತ್ತು. ಇದನ್ನು ತಪ್ಪಿಸುವುದಕ್ಕೆ ಎನ್‌ಡಿಎ ಹಲವು ಮಾಸ್ಟರ್ ಪ್ಲ್ಯಾನ್ ಮಾಡಿತ್ತು. ಅದರಲ್ಲಿ ಪ್ರಮುಖವಾಗಿ ಬಿಹಾರದ ಮಹಿಳೆಯರ ಖಾತೆಗೆ ತಲಾ 10,000 ಸಾವಿರ ರೂಪಾಯಿ ಹಾಕುವುದು ಸಹ ಒಂದಾಗಿದೆ.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಐಆರ್ ವಿರೋಧ, ವೋಟ್ ಚೋರಿ ಅಭಿಯಾನ ಭಾರೀ ಸದ್ದು ಮಾಡಿತ್ತು. ಅಲ್ಲದೇ ಬಿಹಾರದ ಆಡಳಿತದ ಲೋಪಗಳು, ಮೇಲ್ಸೇತುವೆಗಳ ಕುಸಿತ ಹಾಗೂ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳು ಹೆಚ್ಚು ಚರ್ಚೆ ಆಗಿವೆ. ಪ್ರಭಾವಿಗಳಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭೂಮಿ ನೀಡಲಾಗಿದೆ ಎನ್ನುವ ಆರೋಪವು ರಾಷ್ಟ್ರದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು.












Click it and Unblock the Notifications