Video: 'ನಾಗರಹಾವಿನ' ನೆತ್ತಿಗೆ ಬಿಸಿ ಚುಂಬನ!
ನವದೆಹೆಲಿ, ಅಕ್ಟೋಬರ್ 24: ಚೋಟ್ ಉದ್ದ ಹಾವು ನೋಡಿದರೆ ಮಾರ್ ಉದ್ದ ಓಡಿ ಹೋಗುವ ಮಂದಿ ಸರ್ವೇ ಸಾಮಾನ್ಯ. ಹಾವುಗಳನ್ನು ಕಂಡು ಹೌ ಹಾರುವ ಮಂದಿಯ ಮಧ್ಯೆ ಇಲ್ಲೊಬ್ಬ ಭೂಪ, ನಾಗರಹಾವಿನ ನೆತ್ತಿ ಚುಂಬಿಸುವ ದುಸ್ಸಾಹಸ ತೋರಿದ್ದಾನೆ.
ನಾಗರಹಾವುಗಳನ್ನು ಪ್ರೀತಿಸುವ ಹಾಗೂ ಅವುಗಳನ್ನು ಸಾಕುಪ್ರಾಣಿಗಳಂತೆ ಸಾಕುವ ಜನರೂ ನಮ್ಮ ಮಧ್ಯೆ ಇದ್ದಾರೆ. ಹಾವಾಡಿಗರ ಹೊರತಾಗಿ ಉರಗ ಪ್ರೇಮಿಯೊಬ್ಬರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಾಜ ನಾಗರಹಾವಿನ ಹಣೆಗೆ ಚುಂಬಿಸುತ್ತಿರುವುದು ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಈಗ ವೈರಲ್ ಆಗಿರುವ ವಿಡಿಯೋವನ್ನು ಸೌರಭ್ ಜಾಧವ್ ಎಂಬ ಬಳಕೆದಾರರು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಭಾರತೀಯ ವನ್ಯಜೀವಿ ಸಂರಕ್ಷಣಾವಾದಿ ಮತ್ತು ಉರಗ ತಜ್ಞ ವಾವಾ ಸುರೇಶ್ ಎಂಬುವವರು ಇದ್ದಾರೆ.

ನಾಗರಹಾವಿನ ನೆತ್ತಿಗೆ ಬಿಸಿ ಚುಂಬನ:
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿ, ವಾವಾ ಸುರೇಶ್ ಎಂಬುವವರು ನಾಗರಹಾವಿನ ಹತ್ತಿರ ಹೋಗುತ್ತಿರುವುದನ್ನು ಕಾಣಬಹುದು. ಹಾವು ಗಾಬರಿಯಾಗದಂತೆ ನಿಧಾನವಾಗಿ ಹತ್ತಿರಕ್ಕೆ ಹೋದ ಸುರೇಶ್, ಕೊನೆಯಲ್ಲಿ ಸರೀಸೃಪದ ಹಣೆಯ ಮೇಲೆ ಚುಂಬನವಿಡುವಲ್ಲಿ ಯಶಸ್ವಿಯಾಗುತ್ತಾರೆ.












Click it and Unblock the Notifications