Maharastra result: 5 ಮಿಲಿಯನ್ ಫಾಲೋವರ್ಸ್ ಇದ್ದ ಅಭ್ಯರ್ಥಿಗೆ ಸಿಕ್ಕಿದ್ದು ಕೇವಲ 137 ವೋಟು, ಫುಲ್‌ ಟ್ರೋಲ್‌

ಕೆಲವರಿಗೆ ಅದೃಷ್ಟ ಅನ್ನೋದು ಹೇಗೆ ಅಂದ್ರೆ, ಎಲ್ಲದರಲ್ಲೂ ಗೆಲುವು ಸಿಗೋದಿಲ್ಲ. ಎಲ್ಲ ಕಡೆಯೂ ಗೆದ್ದೇ ಗೆಲ್ಲುತ್ತೇನೆ ಎನ್ನುವುದು ಸಹ ಮೂರ್ಖತನ ಅಂದ್ರೆ ತಪ್ಪಾಗಲಾರದು. ಇನ್ನು ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಯೊಬ್ಬರ ಕಥೆಯೂ ಹೀಗೆಯೇ ಆಗಿದೆ.

ಇನ್‌ಸ್ಟಾಗ್ರಾಂನಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ ಹೊಂದಿದ್ದ ಈ ಅಭ್ಯರ್ಥಿಗೆ ಚುನಾವಣೆಯಲ್ಲಿ ಸಿಕ್ಕ ಮತಗಳ ಸಂಖ್ಯೆ ಈಗ ಚರ್ಚೆಗೆ ಬಂದಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರಸೋವಾ ಕ್ಷೇತ್ರದಿಂದ ನಟ ಆಜಾಜ್ ಖಾನ್, ಆಜಾದ್ ಸಮಾಜ್ ಪಕ್ಷದಿಂದ ಸ್ಪರ್ಧಿಸಿ ಗಮನ ಸೆಳೆದಿದ್ದರು.

A Candidate With 5 Million Followers Got Only 137 In The Maharashtra Assembly Elections

ಸಂಸದ ಚಂದ್ರಶೇಖರ್ ಆಜಾದ್ ರಾವಣ ಅವರ ಪಕ್ಷದಿಂದ ಸ್ಪರ್ಧಿಸಿದ್ದ ಈ ನಟನಿಗೆ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 5.6 ಮಿಲಿಯನ್‌ ಫಾಲೋವರ್ಸ್‌ ಇದ್ದಾರೆ. ಆದರೆ ಇಂದಿನ ಮತ ಎಣಿಕೆಯಲ್ಲಿ ಆಜಾಜ್‌ ಅವರು ಪಡೆದಿರುವ ಮತಗಳ ಎಲ್ಲೆಡೆ ಟ್ರೋಲ್‌ಗೆ ಗುರಿಯಾಗಿವೆ.

ಇಂದು ಪ್ರಕಟವಾದ ಮಹಾರಾಷ್ಟ್ರ ಚುನಾವಣಾ ಫಲಿತಾಂಶದಲ್ಲಿ ಆಜಾಜ್ ಅವರಿಗೆ ಕೇವಲ 139 ಮತಗಳು ಸಿಕ್ಕಿವೆ. ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಜನಪ್ರಿಯತೆ ಹಾಗೂ ಫಾಲೋವರ್ಸ್‌ ಇದ್ದರೂ ಚುನಾವಣೆಯಲ್ಲಿ ಅವರಿಗೆ ಹೀನಾಯವಾದ ಸೋಲು ಎದುರಾಗಿರುವುದು ಸಖತ್‌ ಟ್ರೋಲ್‌ ಆಗುತ್ತಿದೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ವರಸೋವಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹರೂನ್ ಖಾನ್ ಗೆದ್ದಿದ್ದಾರೆ. ಇನ್ನು ಆಜಾಜ್ ಪಡೆದಿರುವ ಮತಗಳಿಗಿಂತಲೂ 1,222 ಮತಗಳು ನೋಟಾಗೆ ಬಿದ್ದಿದ್ದು ಇದು ಕೂಡ ಅವರನ್ನು ಗೇಲಿ ಮಾಡುವ ಸ್ಥಿತಿಗೆ ತಂದಿಟ್ಟಿದೆ.

A Candidate With 5 Million Followers Got Only 137 In The Maharashtra Assembly Elections

ಹಿಂದಿ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದ ಆಜಾಜ್ ಖಾನ್ ಅವರು ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ತಾನೊಬ್ಬ ರಾಜಕಾರಣಿಯೂ ಎಂದೂ ಆಜಾಜ್‌ ಬರೆದುಕೊಂಡಿದ್ದಾರೆ. ರಾಜಕೀಯಕ್ಕೆ ಬರಬೇಕು ಎಂದುಕೊಂಡಿದ್ದ ಅವರ ಕನಸು ಸದ್ಯ ಭಗ್ನವಾಗಿದೆ. ಟ್ರೋಲ್‌ಗಳಿಂದ ಅವರು ಮುಜುಗರಕ್ಕೆ ಒಳಗಾಗಿದ್ದಾರೆ.

ಸರ್ಕಾರ ರಚನೆಗೆ ಸಜ್ಜಾದ ಮಹಾಯುತಿ: ಜನರು ತುಷ್ಟೀಕರಣದ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಏಕತೆಯ ಸಂದೇಶಕ್ಕೆ ಸ್ಪಂದಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಎಲ್ಲ ಫಲಿತಾಂಶಗಳು ಪ್ರಕಟವಾದ ನಂತರ, ನಮ್ಮ ಶಾಸಕರು ಮುಂಬೈಗೆ ಬರುತ್ತಾರೆ. ಮೂರೂ ಪಕ್ಷಗಳು ತಮ್ಮ ನಾಯಕರನ್ನು ಆಯ್ಕೆ ಮಾಡುತ್ತವೆ ಎಂದು ಹೇಳಿದ್ದಾರೆ.

ನಾವು ಮಹಾರಾಷ್ಟ್ರದ ಜನತೆಗೆ ತಲೆಬಾಗುತ್ತೇವೆ. ಈ ಗೆಲುವು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮಹಾರಾಷ್ಟ್ರದಲ್ಲಿ ನಾವು ಸಾಕಷ್ಟು ಕೆಲಸ ಮಾಡಬೇಕಾಗಿದೆ. ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ನಾವು ಮುರಿಯುವುದಿಲ್ಲ ಎಂದು ಹೇಳಿದ್ದಾರೆ.

ಸಿಎಂ ಏಕನಾಥ್‌ ಶಿಂಧೆ ಮಾತನಾಡಿ, ಇದು ನಮಗೆ ಮತ್ತು ಮಹಾರಾಷ್ಟ್ರಕ್ಕೆ ಐತಿಹಾಸಿಕ ದಿನ ಎಂದು ಹೇಳಿದ್ದಾರೆ. ಪ್ರೀತಿಯ ಸಹೋದರ, ಸಹೋದರಿ, ಪ್ರೀತಿಯ ರೈತರೆಲ್ಲರೂ ಮಹಾಯುತಿಯ ಮೇಲೆ ಪ್ರೀತಿಯನ್ನು ಸುರಿಸಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ನಾವು ಮಾಡಿದ ಕೆಲಸವನ್ನು ಜನರು ನೋಡಿದ್ದಾರೆ. ಅಭಿವೃದ್ಧಿಗೆ ಆದ್ಯತೆ ನೀಡಿದ್ದೇವೆ. ಎರಡು ವರ್ಷಗಳಿಂದ ಎಲ್ಲ ಕೆಲಸಗಳನ್ನು ನಿಲ್ಲಿಸಿದ್ದರು. ಆದರೆ ನಾವು ಅವುಗಳನ್ನು ಮರುಪ್ರಾರಂಭಿಸಿದ್ದೇವೆ ಎಂದು ಶಿಂಧೆ ಹೇಳಿದ್ದಾರೆ.

ಜನಸಾಮಾನ್ಯನನ್ನು ಸೂಪರ್‌ಮ್ಯಾನ್‌ ಆಗಿ ಪರಿವರ್ತಿಸುತ್ತೇವೆ. ಲೋಕಸಭೆಯ ಸಮಯದಲ್ಲಿ ಪ್ರತಿಪಕ್ಷಗಳು ನಕಲಿ ವಿಚಾರವನ್ನು ಹರಡಿದವು ಮತ್ತು ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದರು. ಏಕತೆಯನ್ನು ಮಹಾರಾಷ್ಟ್ರ ಸಾಬೀತು ಮಾಡಿದೆ. ಪ್ರಧಾನಿ ಹೇಳಿಕೆಯನ್ನು ಜನರು ಸ್ವೀಕರಿಸಿದ್ದಾರೆ ಎಂದಿದ್ದಾರೆ. ಮೂರು ಪಕ್ಷಗಳು ತಮ್ಮ ಸೀಟು ಹಂಚಿಕೆಯನ್ನು ಸೌಹಾರ್ದಯುತವಾಗಿ ಅಂತಿಮಗೊಳಿಸಿವೆ. ಸರ್ಕಾರ ರಚನೆ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+