ಶೇ. 99 ಅಮಾನ್ಯಗೊಂಡ 1,000 ರೂ. ನೋಟುಗಳು ಆರ್.ಬಿ.ಐಗೆ ವಾಪಾಸ್
ನವದೆಹಲಿ, ಆಗಸ್ಟ್ 27: ಅಮಾನ್ಯಗೊಂಡ ಶೇ. 99 ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸ್ ಬಂದಿವೆ. ಇಂಥಹದ್ದೊಂದು ಮಾಹಿತಿಯನ್ನು ಸ್ವತಃ ಆರ್.ಬಿ.ಐ ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಿದೆ.
ವೆಬ್ಸೈಟ್ ನಲ್ಲಿರುವ ದಾಖಲೆಗಳ ಪ್ರಕಾರ ಅಮಾನ್ಯಗೊಂಡ 1,000 ರೂಪಾಯಿ ಮುಖಬೆಲೆಯ ನೋಟುಗಳಲ್ಲಿ ಶೇಕಡಾ 99 ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಂದಿವೆ.

ದಾಖಲೆಗಳ ಪ್ರಕಾರ ಮಾರ್ಚ್ 2017ರ ಅಂತ್ಯಕ್ಕೆ 8,925 ಕೋಟಿ ರೂಪಾಯಿ ಮೊತ್ತದ 1,000 ರೂಪಾಯಿ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಚಲಾವಣೆಯಲ್ಲಿರುವ ನೋಟುಗಳು ಆರ್.ಬಿ.ಐ ನಿಂದ ಹೊರಗೆ ಇರುವ ನೋಟುಗಳಾಗಿದ್ದು, ಬ್ಯಾಂಕ್ ಗಳ ಖಜಾನೆ ಮತ್ತು ಸಾರ್ವಜನಿಕರ ಬಳಿ ಈ ನೋಟುಗಳು ಇವೆ. ಇದು ನೋಟ್ ಬ್ಯಾನ್ ನಂತರ ಬ್ಯಾಂಕಿಗೆ ಠೇವಣಿ ಮಾಡದೇ ಇರುವ ಹಣದ ಮೊತ್ತವೂ ಹೌದು.
ಇದರರ್ಥ ಕೇವಲ ಶೇಕಡಾ 1.3 ನೋಟುಗಳು ಮಾತ್ರ ಬ್ಯಾಂಕಿಗೆ ಮರಳಿ ಬಂದಿಲ್ಲ. ಇನ್ನು 500 ರೂಪಾಯಿ ಮುಖಬೆಲೆಯ ನೋಟುಗಳ ಬಗ್ಗೆ ಯಾವುದೇ ದಾಖಲೆಗಳನ್ನು ಆರ್.ಬಿ.ಐ ಬಿಡುಗಡೆ ಮಾಡಿಲ್ಲ.












Click it and Unblock the Notifications