ರಾಜ್ಯಗಳಿಗೆ ಸಿಕ್ಕಿದ ಐಸೋಲೇಷನ್ ವಾರ್ಡ್‌ಗಳು ಎಷ್ಟು?

ನವದೆಹಲಿ, ಜೂನ್ 17 : ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ವಿವಿಧ ರಾಜ್ಯಗಳಲ್ಲಿ ಆಸ್ಪತ್ರೆಗಳ ಕೊರತೆ ಎದುರಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ರೈಲ್ವೇ ಐಸೋಲೇಷನ್ ವಾರ್ಡ್ ಪೂರೈಕೆ ಮಾಡುತ್ತಿದೆ.

ಬುಧವಾರ ಸಿಕ್ಕಿರುವ ಮಾಹಿತಿಯಂತೆ 960 ಐಸೋಲೇಷನ್ ವಾರ್ಡ್‌ಗಳನ್ನು ದೇಶದ ವಿವಿಧ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಐಸೋಲೇಷನ್ ವಾರ್ಡ್‌ಗಳನ್ನು ಕಳಿಸಲಾಗುತ್ತದೆ ಎಂದು ಹೇಳಿದ್ದರು.

ಕೋವಿಡ್ - 19 ಪ್ರಕರಣಗಳು ಹೆಚ್ಚು ಇರುವ ದೆಹಲಿಗೆ ಹೆಚ್ಚು ಐಸೋಲೇಷನ್ ವಾರ್ಡ್ ಹಂಚಿಕೆ ಮಾಡಲಾಗಿದೆ. ನಗರದ ವಿವಿಧ ರೈಲು ನಿಲ್ದಾಣಗಳಲ್ಲಿ 503 ವಾರ್ಡ್‌ಗಳು ಇವೆ. ಇವುಗಳಲ್ಲಿ 370 ಬುಧವಾರದಿಂದಲೇ ರೋಗಿಗಳಿಗೆ ಚಿಕಿತ್ಸೆ ನೀಡಲು ಸಿದ್ಧವಾಗಿದೆ.

960 Railway Isolation Coaches Deployed To Various States

ದೆಹಲಿಗೆ 503, ಉತ್ತರ ಪ್ರದೇಶಕ್ಕೆ 372, ತೆಲಂಗಾಣಕ್ಕೆ 60, ಆಂಧ್ರಪ್ರದೇಶಕ್ಕೆ 20 ಮತ್ತು ಮಧ್ಯಪ್ರದೇಶಕ್ಕೆ 5 ಐಸೋಲೇಷನ್ ವಾರ್ಡ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುವ ಕೋವಿಡ್ - 19 ಆಸ್ಪತ್ರೆಗಳು ಈ ವಾರ್ಡ್‌ಗಳಿಗೆ ಆಮ್ಲಜನಕ ಸಿಲಿಂಡರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಿವೆ.

ಮಾರ್ಚ್‌ನಲ್ಲಿ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಾಗ ಭಾರತೀಯ ರೈಲ್ವೆ ಸ್ಲೀಪರ್ ಕೋಚ್‌ ಬೋಗಿಗಳನ್ನು ವಾರ್ಡ್‌ಗಳಾಗಿ ಪರಿವರ್ತನೆ ಮಾಡಿತ್ತು. ದೇಶದ ವಿವಿಧ ರೈಲು ವಲಯದಲ್ಲಿ 5 ಸಾವಿರಕ್ಕೂ ಅಧಿಕ ಐಸೋಲೇಷನ್ ವಾರ್ಡ್ ತಯಾರು ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+