ಅಬ್ಬಬ್ಬಾ..! ಬರೋಬ್ಬರಿ ₹900 ಕೋಟಿ ಮೌಲ್ಯದ ಕೊಕೇನ್ ವಶಕ್ಕೆ
ಎಷ್ಟೇ ಕಠಿಣ ಕ್ರಮ ತೆಗೆದುಕೊಂಡರೂ ದೇಶದಲ್ಲಿ ಡ್ರಗ್ಸ್ ಹಾವಳಿ ಕಡಿಮೆಯಾಗುತ್ತಿಲ್ಲ. ಇದೀಗ ಇಡೀ ದೇಶವೇ ಬೆಚ್ಚಿ ಬೀಳುವಂತ ದೊಡ್ಡ ಡ್ರಗ್ಸ್ ಜಾಲವೊಂದವನ್ನು ಪತ್ತೆಹಚ್ಚಿದ್ದು, ಬರೋಬ್ಬರಿ 900 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲೇ ಇಷ್ಟೊಂದು ಮೌಲ್ಯದ ಡ್ರಗ್ಸ್ ಪತ್ತೆಯಾಗಿರುವುದು ಮತ್ತಷ್ಟು ಆಘಾತ ಮೂಡಿಸಿದೆ. ಡ್ರಗ್ಸ್ ವಿರೋಧಿ ಸಂಸ್ಥೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ನೌಕಾಪಡೆ ಮತ್ತು ಗುಜರಾತ್ ಎಟಿಎಸ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ಮಾದಕದ್ರವ್ಯ ಪತ್ತೆಯಾಗಿದೆ. ಸುಮಾರು 700 ಕೆಜಿ ಮೆಥಾಂಫೆಟಮೈನ್ ಅನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಭಾರಿ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಡ್ರಗ್ ಮುಕ್ತ ಭಾರತ ನಿರ್ಮಿಸುವ ಸರ್ಕಾರದ ಸಂಕಲ್ಪವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ. ಈಗ ವಶಪಡಿಸಿಕೊಂಡಿರುವ ಡ್ರಗ್ಸ್, ಈ ಮೊದಲು ನಡೆಸಿದ ಕಾರ್ಯಾಚರಣೆಯ ಫಲಿತಾಂಶವಾಗಿದೆ.

ಮಾರ್ಚ್ ಮತ್ತು ಆಗಸ್ಟ್ ತಿಂಗಳಿನಲ್ಲಿ ಲೀಡ್ ಸಿಕ್ಕಿತ್ತು ಎನ್ನುವ ವಿಚಾರವನ್ನು ಎನ್‌ಸಿಬಿ ಬಹಿರಂಗಪಡಿಸಿದೆ. ಆಗಸ್ಟ್ 2024 ರಲ್ಲಿ ಸಿಕ್ಕಿದ ಲೀಡ್‌ಗಳಲ್ಲಿ ಕೆಲಸ ಮಾಡಿದ ನಂತರ ಮತ್ತು ತಾಂತ್ರಿಕ ಮತ್ತು ಮಾನವ ಬುದ್ಧಿವಂತಿಕೆಯ ಮೂಲಕ, ಎನ್‌ಸಿಬಿ ಅಂತಿಮವಾಗಿ ಡ್ರಗ್ಸ್ ಮೂಲವನ್ನು ತಲುಪಲು ಸಾಧ್ಯವಾಗಿದೆ. 82.53 ಕೆಜಿ ಉನ್ನತ ದರ್ಜೆಯ ಕೊಕೇನ್ ಅನ್ನು ಜನಕ್‌ಪುರಿ ಮತ್ತು ನಂಗ್ಲೋಯ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ದೆಹಲಿಯ ಕೊರಿಯರ್ ಸೆಂಟರ್‌ನಲ್ಲಿ ಡ್ರಗ್ಸ್ ವಶಪಡಿಸಿಕೊಂಡ ನಂತರ ಸುಮಾರು ₹ 900 ಕೋಟಿ ಮೌಲ್ಯದ ಬೃಹತ್ ಮಾದಕ ದ್ರವ್ಯದ ರವಾನೆಯನ್ನು ಪತ್ತೆಹಚ್ಚಲಾಗಿದೆ ಎಂದು ಅಮಿತ್ ಶಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿದೇಶಿಯರಿಂದ ದಂಧೆ
ಆಸ್ಟ್ರೇಲಿಯಾಗೆ ಹೋಗುತ್ತಿದ್ದ ಪಾರ್ಸೆಲ್‌ನಲ್ಲಿ ಡ್ರಗ್ ಇರುವುದು ಪತ್ತೆಯಾಗಿದೆ. ಕೊರಿಯರ್ ಅಂಗಡಿಯಿಂದ ಡ್ರಗ್ ವಶಪಡಿಸಿಕೊಂಡ ಬಳಿಕ ಅದರ ಮೂಲ ಹುಡುಕಿ ಹೊರಟಾದ ದೆಹಯಿಯ ಜನಕ್‌ಪುರಿ ಮತ್ತು ನಂಗ್ಲೋಯ್‌ನಲ್ಲಿ ಬೃಹತ್ ಪ್ರಮಾಣದಲ್ಲಿ ಮುಚ್ಚಿಟ್ಟಿದ್ದ ಕೊಕೆನ್ ಪತ್ತೆಯಾಗಿದೆ. ಈ ದಂಧೆಯಲ್ಲಿ ಒಂದು ಗುಂಪೇ ನಡೆಸುತ್ತಿದೆ. ವಿದೇಶದಲ್ಲಿರುವ ಸಿಂಡಿಕೇಟ್ ಈ ವ್ಯವಹಾರ ನಡೆಸುತ್ತಿದೆ ಎಂದು ಪ್ರಕರಣದ ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳು ಹವಾಲಾ ಆಪರೇಟರ್ ಗಳು ಮತ್ತು ಒಬ್ಬರಿಗೆ ಒಬ್ಬರು ಪರಿಚಯ ಇಲ್ಲದವರು ಎಂದು ಹೇಳಿದೆ. ದಿನ ನಿತ್ಯ ಡ್ರಗ್ ವ್ಯವಹಾರ ಮಾಡಲು ನಕಲಿ ಹೆಸರುಗಳನ್ನು ಬಳಕೆ ಮಾಡಿದ್ದಾರೆ ಎಂದು ಎನ್‌ಸಿಬಿ ಹೇಳಿದೆ. ದೆಹಲಿ ಮತ್ತು ಸೋನಿಪತ್ ನಿವಾಸಿಗಳಾದ ಸಿಂಡಿಕೇಟ್‌ನ ಇಬ್ಬರು ಕಾರ್ಯಕರ್ತರನ್ನು ಈಗಾಗಲೇ ಬಂಧಿಸಲಾಗಿದೆ.
ಎಐಎಸ್ (ಸ್ವಯಂಚಾಲಿತ ಗುರುತಿನ ವ್ಯವಸ್ಥೆ) ಅಥವಾ ಟ್ರ್ಯಾಕಿಂಗ್ ಸೂಚಕವಿಲ್ಲದ ಹಡಗು ಮಾದಕವಸ್ತುಗಳೊಂದಿಗೆ ಭಾರತೀಯ ಜಲಗಡಿಯನ್ನು ಪ್ರವೇಶಿಸುವ ನೋಂದಾಯಿತವಲ್ಲದ ಹಡಗನ್ನು ತಡೆಯಲು ಗುಪ್ತಚರ ಮಾಹಿತಿಯ ಆಧಾರದ ಮೇಲೆ 'ಸಾಗರ್ ಮಂಥನ್-4' ಎಂಬ ಸಂಕೇತನಾಮದ ಕಾರ್ಯಾಚರಣೆಯನ್ನು ಆರಂಭಿಸಲಾಯಿತು ಎಂದು ಎನ್‌ಸಿಬಿ ಮಾಹಿತಿ ನೀಡಿದೆ.












Click it and Unblock the Notifications