ಹೊಸ ಕೋವಿಡ್ ಪ್ರಕರಣ: 42 ದಿನಗಳ ಬಳಿಕ ಮತ್ತೆ ಮೊದಲ ಸ್ಥಾನಕ್ಕೆ ಮಹಾರಾಷ್ಟ್ರ

ನವದೆಹಲಿ, ಫೆಬ್ರವರಿ 16: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 9,121 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಎಂದು ಅರೋಗ್ಯ ಸಚಿವಾಲಯ ಮಂಗಳವಾರ ವರದಿಯಲ್ಲಿ ತಿಳಿಸಿದೆ. ಸೋಮವಾರ ರಾತ್ರಿಯವರೆಗೆ ಒಂದು ದಿನದಲ್ಲಿ 81 ಮಂದಿ ಮೃತಪಟ್ಟಿದ್ದಾರೆ. ಸತತ ಮೂರನೇ ದಿನ 100ಕ್ಕಿಂತ ಕಡಿಮೆ ಸಾವುಗಳು ವರದಿಯಾಗಿದೆ.

24 ಗಂಟೆಗಳಲ್ಲಿ 11,805 ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಒಂದು ದಿನದ ಸಕ್ರಿಯ ಪ್ರಕರಣಗಳ ಏರಿಕೆಯ ಬಳಿಕ ಮತ್ತೆ ಇಳಿಕೆಯಾಗಿದೆ. ದೇಶದಲ್ಲಿನ ಸಕ್ರಿಯ ಪ್ರಕರಣಗಳು 1,36,872ಕ್ಕೆ ತಗ್ಗಿದೆ. ಒಟ್ಟು ಪ್ರಕರಣಗಳು 1,09,25,710ಕ್ಕೆ ತಲುಪಿದೆ. ಇವರಲ್ಲಿ ಒಟ್ಟು 1,06,33,025 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 1,55,813 ಜನರು ಇದುವರೆಗೂ ಮೃತಪಟ್ಟಿದ್ದಾರೆ,

ಒಟ್ಟು 87,20,822 ಜನರಿಗೆ ಇದುವರೆಗೂ ಲಸಿಕೆ ನೀಡಲಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಎರಡನೆಯ ಡೋಸ್ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ.

9,121 New Covid Cases, 81 Deaths Reported In India, Maharashtra Back To Top In Fresh Cases

ದೇಶದಲ್ಲಿ ಹೊಸ ಕೋವಿಡ್ ಪ್ರಕರಣಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮತ್ತೆ ಮೊದಲ ಸ್ಥಾನಕ್ಕೆ ಏರಿದೆ. 42 ದಿನಗಳ ಬಳಿಕ ಅದು ಕೇರಳವನ್ನು ಹಿಂದಿಕ್ಕಿದೆ. ಸೋಮವಾರ ಮಹಾರಾಷ್ಟ್ರದಲ್ಲಿ 3,365 ಹೊಸ ಪ್ರಕರಣಗಳು ದಾಖಲಾಗಿವೆ. ಕೇರಳದಲ್ಲಿ 2,884 ಪ್ರಕರಣಗಳು ವರದಿಯಾಗಿವೆ. ಜನವರಿ 4ರಂದು ಮಹಾರಾಷ್ಟ್ರದಲ್ಲಿ ಉಳಿದ ರಾಜ್ಯಗಳಿಗಿಂತ ಅಧಿಕ ಪ್ರಕರಣ ದಾಖಲಾಗಿತ್ತು.

ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 23 ಸಾವುಗಳು ವರದಿಯಾಗಿವೆ. ಒಟ್ಟು ಪ್ರಕರಣಗಳು 20,67,643ಕ್ಕೆ ತಲುಪಿದ್ದರೆ, ಸಾವಿನ ಸಂಖ್ಯೆ 51,552ಕ್ಕೆ ಏರಿಕೆಯಾಗಿದೆ. ಕಳೆದ ಆರು ದಿನಗಳಲ್ಲಿ ಸತತವಾಗಿ 3,000ಕ್ಕಿಂತ ಅಧಿಕ ಪ್ರಕರಣಗಳು ವರದಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+