Get Updates
Get notified of breaking news, exclusive insights, and must-see stories!

8ನೇ ವೇತನ ಆಯೋಗಕ್ಕೆ ಸಲಹೆ ನೀಡಲು ಅವಕಾಶ: ಯಾರು ಅರ್ಹರು? ಫೀಡ್‌ಬ್ಯಾಕ್ ಕಳುಹಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಕೇಂದ್ರ ಸರ್ಕಾರಿ ನೌಕರರು ಹಾಗೂ ಲಕ್ಷಾಂತರ ಪಿಂಚಣಿದಾರರು (Pensioners) ಕಾತರದಿಂದ ಕಾಯುತ್ತಿದ್ದ 8ನೇ ವೇತನ ಆಯೋಗದ (8th Pay Commission) ಪ್ರಕ್ರಿಯೆಗ ಇದೀಗ ಮತ್ತಷ್ಟು ಚುರುಕುಗೊಂಡಿವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೌಕರರ ವೇತನ, ಭತ್ಯೆ ಮತ್ತು ಪಿಂಚಣಿ ಪರಿಷ್ಕರಣೆಗಾಗಿ ರಚಿಸಿರುವ 8ನೇ ವೇತನ ಆಯೋಗದ ಅಧಿಕೃತ ವೆಬ್‌ಸೈಟ್ ಇದೀಗ ಲೈವ್ ಆಗಿದೆ. ಆಯೋಗವು ತನ್ನ ವರದಿಯನ್ನು ಅಂತಿಮಗೊಳಿಸುವ ಮುನ್ನ ವಿವಿಧ ಸಚಿವಾಲಯಗಳು, ಇಲಾಖೆಗಳು, ಸರ್ಕಾರಿ ನೌಕರರು, ಪಿಂಚಣಿದಾರರು ಹಾಗೂ ಸಾರ್ವಜನಿಕರಿಂದ ಮುಕ್ತವಾಗಿ ಸಲಹೆ ಮತ್ತು ಸೂಚನೆಗಳನ್ನು ಆಹ್ವಾನಿಸಿದೆ. ಇದು ಕೇಂದ್ರದ ಲಕ್ಷಾಂತರ ನೌಕರರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಹಿನ್ನೆಲೆ ಮತ್ತು ಕಾಲಮಿತಿ

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು 2025ರ ಜನವರಿಯಲ್ಲಿ 8ನೇ ವೇತನ ಆಯೋಗ ರಚನೆಯ ಬಗ್ಗೆ ಮೊದಲ ಬಾರಿಗೆ ಘೋಷಣೆ ಮಾಡಿತ್ತು. ತದನಂತರ ಕಳೆದ ವರ್ಷದ ನವೆಂಬರ್ 3 ರಂದು ಹಣಕಾಸು ಸಚಿವಾಲಯವು (Ministry of Finance) ಈ ಬಗ್ಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿತ್ತು. ಇದರ ಬೆನ್ನಲ್ಲೇ, ಆಯೋಗದ ಕಾರ್ಯಸೂಚಿಗಳಿಗೆ ಸರ್ಕಾರ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ವೇತನ, ಭತ್ಯೆ ಮತ್ತು ಪಿಂಚಣಿ ಪರಿಷ್ಕರಣೆಗೆ ಸಂಬಂಧಿಸಿದಂತೆ ತನ್ನ ಅಂತಿಮ ಶಿಫಾರಸುಗಳನ್ನು ಸಲ್ಲಿಸಲು 8ನೇ ವೇತನ ಆಯೋಗಕ್ಕೆ ಬರೋಬ್ಬರಿ 18 ತಿಂಗಳ ಗಡುವನ್ನು ನೀಡಲಾಗಿದೆ. ಈ ನಿಗದಿತ ಅವಧಿಯೊಳಗೆ ಆಯೋಗವು ಎಲ್ಲಾ ವರ್ಗದ ನೌಕರರ ಹಿತಾಸಕ್ತಿಗಳನ್ನು, ಪ್ರಸ್ತುತ ಹಣದುಬ್ಬರ ಹಾಗೂ ಮಾರುಕಟ್ಟೆ ಬೆಲೆ ಏರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ವರದಿ ಸಿದ್ಧಪಡಿಸಬೇಕಿದೆ.

8th Pay Commission

8ನೇ ವೇತನ ಆಯೋಗದ ವೆಬ್‌ಸೈಟ್ ಮತ್ತು ಪ್ರಶ್ನಾವಳಿ

ಸದ್ಯ ಸರ್ಕಾರವು https://8cpc.gov.in/ ಎಂಬ ಅಧಿಕೃತ ವೆಬ್‌ಸೈಟ್ ಅನ್ನು ಬಿಡುಗಡೆ ಮಾಡಿದೆ. ಈ ವೆಬ್‌ಸೈಟ್ ಮೂಲಕ ಆಯೋಗವು, ಸರ್ಕಾರಿ ವ್ಯವಸ್ಥೆಯ ಪಾಲುದಾರರಿಂದ ಹಾಗೂ ನೌಕರರಿಂದ ಮಹತ್ವದ ಪ್ರತಿಕ್ರಿಯೆಗಳನ್ನು ಸಂಗ್ರಹಿಸಲು ಮುಂದಾಗಿದೆ. "8ನೇ ಕೇಂದ್ರ ವೇತನ ಆಯೋಗವು ಅತ್ಯುತ್ತಮ ಮತ್ತು ಸಮಗ್ರವಾದ ಮಾಹಿತಿಯನ್ನು ಕಲೆಹಾಕಲು ಹಾಗೂ ಆ ಮೂಲಕ ಉತ್ತಮ ಶಿಫಾರಸುಗಳನ್ನು ಮಾಡಲು ಸಾರ್ವಜನಿಕರು, ನೌಕರರ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಕೋರುತ್ತಿದೆ. ಇದಕ್ಕಾಗಿ MyGov.in ವೆಬ್ ಪೋರ್ಟಲ್‌ನಲ್ಲಿ 18 ಪ್ರಶ್ನೆಗಳನ್ನೊಳಗೊಂಡ ವ್ಯವಸ್ಥಿತ ಪ್ರಶ್ನಾವಳಿಯನ್ನು ಕೇಳಲಾಗಿದೆ" ಎಂದು ವೆಬ್‌ಸೈಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಭಾರತೀಯ ರೈಲ್ವೆಯ ಹೊಸ 'RailOne App' ಬಳಸುವುದು ಹೇಗೆ? ಮಾಹಿತಿ ಇಲ್ಲಿದೆ
ವಿಶೇಷವೆಂದರೆ, ಸಲಹೆ ನೀಡುವ ಯಾವುದೇ ವ್ಯಕ್ತಿ ಅಥವಾ ನೌಕರರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಮತ್ತು ಈ ಪ್ರತಿಕ್ರಿಯೆಗಳನ್ನು ಕೇವಲ ಒಟ್ಟು ವಿಶ್ಲೇಷಣೆಗಾಗಿ (Aggregate non-attributable basis) ಮಾತ್ರ ಬಳಸಲಾಗುತ್ತದೆ ಎಂದು ಸರ್ಕಾರ ಭರವಸೆ ನೀಡಿದೆ. ಹೀಗಾಗಿ ನೌಕರರು ಯಾವುದೇ ಆತಂಕ ಇಲ್ಲದೆ ಮುಕ್ತವಾಗಿ ತಮ್ಮ ಅಭಿಪ್ರಾಯ ಹಂಚಿಕೊಳ್ಳಬಹುದು.

ಸಲಹೆಗಳನ್ನು ಯಾರೆಲ್ಲಾ ನೀಡಬಹುದು?

ವೇತನ ಆಯೋಗವು ಸಮಾಜದ ವಿವಿಧ ಸ್ತರದ ಜನರಿಂದ ಮತ್ತು ನಿರ್ದಿಷ್ಟ ಇಲಾಖೆಗಳಿಂದ ಸಲಹೆಗಳನ್ನು ಆಹ್ವಾನಿಸಿದೆ. ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ಕೆಳಗಿನವರು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದು:

1. ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಸಿಬ್ಬಂದಿ.
2. ಕೇಂದ್ರ ಆಡಳಿತ ಪ್ರದೇಶಗಳ (Union Territories) ಉದ್ಯೋಗಿಗಳು.
3. ನ್ಯಾಯಾಂಗ ಅಧಿಕಾರಿಗಳು, ನ್ಯಾಯಾಲಯಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ.
4. ನಿಯಂತ್ರಕ ಸಂಸ್ಥೆಗಳ (Regulatory Bodies) ಸದಸ್ಯರು.
5. ಹಾಲಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾದ ನೌಕರರ ಸಂಘಟನೆಗಳು ಮತ್ತು ಯೂನಿಯನ್‌ಗಳು.
6. ಪಿಂಚಣಿದಾರರು (Pensioners).
7. ಸಂಶೋಧಕರು, ಶಿಕ್ಷಣ ತಜ್ಞರು (Academicians) ಮತ್ತು ಆಸಕ್ತ ಸಾರ್ವಜನಿಕರು.
8. ಸಚಿವಾಲಯಗಳು, ಇಲಾಖೆಗಳು ಹಾಗೂ ಕಚೇರಿಗಳ ಅಧಿಕೃತ ಅಥವಾ ನಿಯೋಜಿತ ನೋಡಲ್ ಮತ್ತು ಉಪ-ನೋಡಲ್ ಅಧಿಕಾರಿಗಳು.

ಕೊನೆಯ ದಿನಾಂಕ ಮತ್ತು ಅರ್ಜಿ ಸಲ್ಲಿಕೆ ವಿಧಾನ

8ನೇ ವೇತನ ಆಯೋಗಕ್ಕೆ ಆನ್‌ಲೈನ್ ಮೂಲಕ ನಿಮ್ಮ ಅಮೂಲ್ಯವಾದ ಸಲಹೆ, ಸೂಚನೆಗಳನ್ನು ಸಲ್ಲಿಸಲು ಮಾರ್ಚ್ 16 ಅನ್ನು ಕಡೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ. ಪ್ರತಿಕ್ರಿಯೆಗಳನ್ನು ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ ಡಿಜಿಟಲ್ ಆಗಿದ್ದು, ಈ ಕೆಳಗಿನ ಹಂತಗಳನ್ನು ಅನುಸರಿಸಿ:

1. ಮೊದಲಿಗೆ ಆಸಕ್ತರು ಅಥವಾ ನೌಕರರ ಸಂಘಟನೆಗಳು MyGov ನ ಅಧಿಕೃತ ಲಿಂಕ್: https://www.mygov.in/mygov-survey/8th-central-pay-commission-questionnaire/ ಗೆ ಭೇಟಿ ನೀಡಬೇಕು.
2. ಅಲ್ಲಿ ತಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ಬಳಸಿ ಲಾಗಿನ್ (Login) ಅಥವಾ ಸೈನ್ ಅಪ್ (Sign up) ಆಗಬೇಕು.
3. ನಂತರ ನಿಮ್ಮ ಮೊಬೈಲ್ ಅಥವಾ ಇಮೇಲ್‌ಗೆ ಬರುವ 6-ಅಂಕಿಯ ಒಟಿಪಿ (OTP) ಯನ್ನು ನಮೂದಿಸುವ ಮೂಲಕ ಪ್ರಶ್ನಾವಳಿ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು.

"ಎಲ್ಲಾ ಪ್ರತಿಕ್ರಿಯೆಗಳನ್ನು ಕಡ್ಡಾಯವಾಗಿ MyGov ಪೋರ್ಟಲ್ ಮೂಲಕವೇ ಸಲ್ಲಿಸಬೇಕು. ಕಾಗದದ ರೂಪದಲ್ಲಿ ಭೌತಿಕವಾಗಿ, ಇಮೇಲ್ ಮೂಲಕ ಅಥವಾ ಪಿಡಿಎಫ್ ರೂಪದಲ್ಲಿ ಕಳುಹಿಸುವ ಯಾವುದೇ ಪ್ರತಿಕ್ರಿಯೆಗಳನ್ನು ಆಯೋಗವು ಪರಿಗಣಿಸುವುದಿಲ್ಲ" ಎಂದು ಸರ್ಕಾರ ಕಟ್ಟುನಿಟ್ಟಾಗಿ ತಿಳಿಸಿದೆ.
ಹೀಗಾಗಿ ವೇತನ ಪರಿಷ್ಕರಣೆ ಬಗ್ಗೆ ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ಮತ್ತು ಸೂಕ್ತ ಬದಲಾವಣೆ ತರಲು ಇದು ನೌಕರರಿಗೆ ಸಿಕ್ಕಿರುವ ಅತ್ಯುತ್ತಮ ವೇದಿಕೆಯಾಗಿದೆ. ನಿಗದಿತ ಸಮಯದೊಳಗೆ ಆನ್‌ಲೈನ್ ಮೂಲಕ ತಮ್ಮ ಅಭಿಪ್ರಾಯ ತಿಳಿಸುವುದು ಒಳಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+