Government Employee: ಹೋರಾಟ ನಡೆಸಲು ಮುಂದಾದ ಸರ್ಕಾರಿ ನೌಕರರು

ಬೆಂಗಳೂರು, ಜನವರಿ 15: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ 3.0 ಸರ್ಕಾರ 2025-26ನೇ ಸಾಲಿನ ಬಜೆಟ್ ಮಂಡನೆ ತಯಾರಿ ನಡೆಸಿದೆ. ಫೆಬ್ರವರಿ 1ರಂದು ಬಜೆಟ್ ಮಂಡನೆ ಮಾಡುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರಿ ನೌಕರರು ಬಜೆಟ್ ಮೇಲೆ ಅಪಾರ ನಿರೀಕ್ಷೆ ಹೊಂದಿದ್ದಾರೆ. ಅದರಲ್ಲಿ ಪ್ರಮುಖವಾದ ಬೇಡಿಕೆ 8ನೇ ವೇತನ ಆಯೋಗ ರಚನೆಯಾಗಿದೆ.

ಈಗಾಗಲೇ ಕೇಂದ್ರ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್‌ಗೆ ಕಾರ್ಮಿಕ ಸಂಘಟನೆಗಳು, ಕೇಂದ್ರ ಸರ್ಕಾರಿ ನೌಕರರ ಸಂಘಗಳು 8ನೇ ವೇತನ ಆಯೋಗ ರಚನೆ ಮಾಡಬೇಕು ಎಂದು ಮನವಿ ಸಲ್ಲಿಕೆ ಮಾಡಿವೆ. ಆದರೆ ಸರ್ಕಾರ ವೇತನ ಆಯೋಗ ರಚನೆ ಮಾಡುವುದಿಲ್ಲ ಎಂಬ ಸುದ್ದಿಗಳು ಹಬ್ಬಿವೆ.

8th Pay Commission Nationwide Agitation By Government Employees

ಕೇಂದ್ರ ಸರ್ಕಾರ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಹೊಸ ನೀತಿಯನ್ನು ರೂಪಿಸಲಿದೆ. ವೇತನ ಆಯೋಗ ರಚನೆ ಮಾಡುವ ಪದ್ಧತಿಯನ್ನು ಕೈಬಿಡಲಿದೆ ಎಂಬ ಸುದ್ದಿಗಳು ಹಬ್ಬಿದೆ. ಹೊಸ ನೀತಿ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗಲಿದೆಯೇ? ಎಂದು ಕಾದು ನೋಡಬೇಕಿದೆ.

ಸರ್ಕಾರಿ ನೌಕರರ ನಡೆ ಏನು?: 2025ರಲ್ಲಿ ಕೇಂದ್ರ ಸರ್ಕಾರ 8ನೇ ವೇತನ ಆಯೋಗ ರಚನೆ ಮಾಡದಿದ್ದರೆ ದೇಶಾದ್ಯಂತ ಹೋರಾಟ ಆರಂಭಿಸಲಾಗುತ್ತದೆ ಎಂದು ಡಿಸೆಂಬರ್‌ನಲ್ಲಿ ಆಲ್ ಇಂಡಿಯಾ ಸ್ಟೇಟ್ ಗವರ್ನ್ಮೆಂಟ್ ಎಂಪ್ಲಾಯೀಸ್ ಫೆಡರೇಶನ್ ಹೇಳಿತ್ತು. ಈಗ ಬಜೆಟ್‌ನಲ್ಲಿ ಯಾವ ಘೋಷಣೆಯಾಗಲಿದೆ? ಎಂದು ನೌಕರರು ಕಾಯುತ್ತಿದ್ದಾರೆ.

ನರೇಂದ್ರ ಮೋದಿ ಸರ್ಕಾರ ಜನವರಿ 2016ರಲ್ಲಿ 7ನೇ ಕೇಂದ್ರ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದೆ. ಸದ್ಯ ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಈ ಆಯೋಗದ ವರದಿ ಅನ್ವಯವೇ ವೇತನ, ಭತ್ಯೆ, ಪಿಂಚಣಿಯನ್ನು ಪಡೆಯುತ್ತಿದ್ದಾರೆ.

10 ವರ್ಷಗಳಿಗೊಮ್ಮೆ ವೇತನ ಆಯೋಗ ರಚನೆ ಮಾಡುವ ಸಂಪ್ರದಾಯವಿದೆ. ಆದರೆ ಹತ್ತು ವರ್ಷಗಳಿಗೆ ಆಯೋಗ ರಚನೆ ಮಾಡಬೇಕು ಎಂಬ ನಿಯಮವೇನಿಲ್ಲ ಎಂದು ಕೇಂದ್ರ ಹೇಳಿದೆ. ಅಲ್ಲದೇ ಆಯೋಗದ ಬದಲು ಹೊಸ ನೀತಿಯ ಮೂಲಕ ವೇತನ ಹೆಚ್ಚಳ ಮಾಡಲಾಗುತ್ತದೆ? ಎಂಬುದು ಸುದ್ದಿ. ಆದರೆ ಈ ನೀತಿ ಏನು? ಎಂಬುದು ಇನ್ನೂ ಸಹ ಅಂತಿಮವಾಗಿಲ್ಲ.

ರಾಜ್ಯಸಭೆಯ ಕಲಾಪದಲ್ಲಿಯೇ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ, "ಸದ್ಯಕ್ಕೆ 8ನೇ ವೇತನ ಆಯೋಗ ರಚನೆ ಮಾಡುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಆಯೋಗ ರಚನೆಗೆ ನಿಗದಿತ ಕಾಲಮಿತಿ ಇಲ್ಲ" ಎಂದು ಹೇಳಿದ್ದಾರೆ.

2026ರ ಜನವರಿ 1ರಿಂದ 8ನೇ ವೇತನ ಆಯೋಗದ ವರದಿ ಜಾರಿಗೆ ಬರಬೇಕು. ಆದ್ದರಿಂದ ಈಗ ವೇತನ ಆಯೋಗ ರಚನೆ ಘೋಷಣೆ ಮಾಡಿದರೆ ಅದು ವರದಿ ನೀಡುವಾಗ ಡಿಸೆಂಬರ್ ತಿಂಗಳು ಕಳೆಯಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆಯಲಾಗಿದೆ.

ಪ್ರತಿ 10 ವರ್ಷಗಳಿಗೊಮ್ಮೆ ಸರ್ಕಾರಿ ನೌಕರರ ವೇತನ, ಭತ್ಯೆ, ಪಿಂಚಣಿಯ ಪರಿಷ್ಕರಣೆಗೆ ಶಿಫಾರಸು ಮಾಡಲು ವೇತನ ಆಯೋಗ ರಚನೆ ಮಾಡುಕೊಂಡು ಬರಲಾಗುತ್ತಿದೆ. ಈ ಪದ್ಧತಿಯನ್ನು ತೆಗೆದುಹಾಕಿ ಹೊಸ ನೀತಿ ರೂಪಿಸಲು ಕೇಂದ್ರ ಬಯಸಿದೆ. ಆದರೆ ಅದು ಏನು? ಎಂಬುದು ಇನ್ನೂ ಅಂತಿಮವಾಗಿಲ್ಲ.

ಕೇಂದ್ರ ಸರ್ಕಾರಿ ನೌಕರರು 2024ರ ಲೋಕಸಭೆ ಚುನಾವಣೆ ಮುಗಿದು ನರೇಂದ್ರ ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮಂಡನೆಯಾದ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿಯೇ 8ನೇ ವೇತನ ಆಯೋಗ ರಚನೆ ಘೋಷಣೆಯಾಗಲಿದೆ ಎಂದು ಅಂದಾಜಿಸಿದ್ದರು. ಆದರೆ ಬಜೆಟ್‌ನಲ್ಲಿ ಈ ಕುರಿತು ಯಾವುದೇ ಘೋಷಣೆಯನ್ನೂ ಸರ್ಕಾರ ಮಾಡದೇ ನಿರಾಸೆಯನ್ನು ಮೂಡಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+