7th Pay Commission: ಸರ್ಕಾರಿ ನೌಕರರರು ಪಿಂಚಣಿದಾರರ ಡಿಎ / ಡಿಆರ್‌ ಶೇ.63 ರಷ್ಟು ಹೆಚ್ಚಳ

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರದಲ್ಲೇ ಗುಡ್‌ ನ್ಯೂಸ್‌ ಸಿಗಲಿದೆ. ಎಐಸಿಪಿಐ-ಐಡಬ್ಲ್ಯೂ ಡೇಟಾವನ್ನು ನಿನ್ನೆ ಬಿಡುಗಡೆ ಮಾಡಲಾಗಿದೆ. ಇದರ ಪ್ರಕಾರ ಕೇಂದ್ರ ಸರ್ಕಾರಿ ನೌಕರರ ಡಿಎ ಮತ್ತು ಪಿಂಚಣಿದಾರರ ಡಿಆರ್‌ ಶೇ. 3 ರಷ್ಟು ಹೆಚ್ಚಳವಾಗಲಿದೆ. ಒಂದು ವೇಳೆ ಹೀಗಾದಲ್ಲಿ ದೇಶಾದ್ಯಂತದ ಸುಮಾರು 50.14 ಲಕ್ಷ ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು 69 ಲಕ್ಷ ಪಿಂಚಣಿದಾರರ ಪಿಂಚಣಿಯಲ್ಲಿ ಏರಿಕೆಯಾಗುವುದು.

ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3 ರಷ್ಟು ಹೆಚ್ಚಳ ?

ಹೌದು, ನೌಕರರ ತುಟಿಭತ್ಯೆ ಮತ್ತು ಪಿಂಚಣಿದಾರರ ಪಿಂಚಣಿಯನ್ನು ಎಐಸಿಪಿಐ-ಐಡಬ್ಲ್ಯೂ ಬಿಡುಗಡೆ ಮಾಡುವ ಡೇಟಾದ ಆಧಾರದಲ್ಲಿ ಲೆಕ್ಕ ಹಾಕಲಾಗುವುದು. ಇದೀಗ ಹೊರ ಬಂದಿರುವ ಜುಲೈ ತಿಂಗಳ ಲೆಕ್ಕಾಚಾರದವನ್ನು ಗಮನಿಸಿ ನೋಡಿದರೆ ಡಿಎ ಶೇ. 3 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಹೀಗಾದರೆ ಒಟ್ಟು ತುಟ್ಟಿ ಭತ್ಯೆ ಶೇ. 63 ಕ್ಕೆ ಏರಿಕೆಯಾಗಲಿದೆ.

ಆದರೆ, ಸರ್ಕಾರ ಇನ್ನೂ ಅಧಿಕೃತವಾಗಿ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿಲ್ಲ. ಇತ್ತೀಚಿನ ಅಂಕಿಅಂಶಗಳು ಮಾತ್ರ ತುಟ್ಟಿಭತ್ಯೆ ಹೆಚ್ಚಳದ ಸಾಧ್ಯತೆಯನ್ನು ಸಾರಿ ಹೇಳುತ್ತಿದೆ.

7th Pay Commission

AICPI-IW ದತ್ತಾಂಶವು ಏನನ್ನು ತೋರಿಸುತ್ತದೆ?

ಜೂನ್‌ನಲ್ಲಿ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI-IW) 151.9 ಅಂಕಗಳಷ್ಟಿತ್ತು. ಕಳೆದ 12 ತಿಂಗಳ ಸರಾಸರಿಯನ್ನು ಆಧರಿಸಿ ಲೆಕ್ಕ ಹಾಕಿದರೆ ತುಟ್ಟಿ ಭತ್ಯೆ ಶೇ. 63.76ಕ್ಕೆ ಏರಿಕೆಯಾಗಬೇಕಿದೆ. ಆದ್ರೆ, ಸರ್ಕಾರ ಸಾಮಾನ್ಯವಾಗಿ ರೌಂಡ್‌ ಫಿಗರ್‌ನಲ್ಲಿ ತುಟ್ಟಿ ಭತ್ಯೆಯನ್ನು ಘೋಷಿಸುತ್ತದೆ. ಹಾಗಾಗಿ ಕೇಂದ್ರ ಸರ್ಕಾರಿ ನೌಕರರು ಶೇಕಡಾ 63 ರಷ್ಟು ತುಟ್ಟಿ ಭತ್ಯೆಯನ್ನು ಪಡೆಯುವ ಸಾಧ್ಯತೆ ಹೆಚ್ಚು. ಹಣಕಾಸು ಸಚಿವಾಲಯವು ತನ್ನ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಕೇಂದ್ರ ಸರ್ಕಾರ ಕ್ಯಾಬಿನೆಟ್‌ ಸಭೆ ನಡೆಸಿ ಅಂತಿಮ ನಿರ್ಧಾರನ್ನು ಹೇಳುತ್ತದೆ.

AICPI-IW ಸೂಚ್ಯಂಕ

ಕಳೆದ ಕೆಲವು ತಿಂಗಳುಗಳಿಂದ AICPI-IW ಸೂಚ್ಯಂಕದಲ್ಲಿ ಏರಿಕೆಯೇ ಕಾಣುತ್ತಿದೆ. ಮೇ 2025 ರಿಂದ ಜೂನ್ 2026 ರವರೆಗಿನ AICPI-IW ಡೇಟಾ ಹೀಗಿದೆ.

(AICPI-IW ಡೇಟಾ ತಿಂಗಳು - AICPI-IW ಡೇಟಾ)

ತಿಂಗಳು AICPI-IW ಡೇಟಾ
ಮೇ 2025 144.0
ಜೂನ್ 2025 145.0
ಜುಲೈ 2025 146.5
ಆಗಸ್ಟ್ 2025 147.1
ಸೆಪ್ಟೆಂಬರ್ 2025 147.3
ಅಕ್ಟೋಬರ್ 2025 147.7
ನವೆಂಬರ್ 2025 148.2
ಡಿಸೆಂಬರ್ 2025 148.2
ಜನವರಿ 2026 148.6
ಫೆಬ್ರವರಿ 2026 148.5
ಮಾರ್ಚ್ 2026 149.1
ಏಪ್ರಿಲ್ 2026 149.9
ಮೇ 2026 150.8
ಜೂನ್ 2026 151.9

7th Pay Commission: ತುಟ್ಟಿ ಭತ್ಯೆ ಎಂದರೇನು?

ಹೆಚ್ಚುತ್ತಿರುವ ಹಣದುಬ್ಬರದ ಕಾರಣದಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರ ಮಾಸಿಕ ಆದಾಯದ ಮೇಲೆ ಯಾವ ಪರಿಣಾಮವೂ ಬೀರದಿರಲಿ ಎನ್ನುವ ಕಾರಣಕ್ಕೆ ತುಟ್ಟಿ ಭತ್ಯೆ ನೀಡಲಾಗ್ತದೆ. ನಿತ್ಯದ ಬೆಲೆ ಏರಿಕೆಯನ್ನು ಸರಿದೂಗಿಸಲು ನೌಕರರಿಗೆ ಈ ಭತ್ಯೆ ಸಹಾಯ ಮಾಡ್ತದೆ.

ಡಿಎ ಅಥವಾ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ, ಅಂದರೆ ಮಾರ್ಚ್ ಮತ್ತು ಜುಲೈನಲ್ಲಿ, ಕಾರ್ಮಿಕ ಇಲಾಖೆ ಪ್ರಕಟಿಸಿದ AICPI-IW ಡೇಟಾವನ್ನು ಬಳಸಿಕೊಂಡು ಬದಲಾಯಿಸಲಾಗುತ್ತದೆ.

ತುಟ್ಟಿ ಭತ್ಯೆ 63% ಕ್ಕೆ ಏರಿದರೆ ಸಂಬಳ ಎಷ್ಟು ಹೆಚ್ಚಾಗುತ್ತದೆ?

ಈ ಹೆಚ್ಚಳವು ಶೇಕಡಾವಾರು ಪ್ರಮಾಣದಲ್ಲಿ ಚಿಕ್ಕದಾಗಿದ್ದರೂ ತಿಂಗಳ ಸಂಬಳವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸುತ್ತದೆ. ಇದನ್ನು ಉದಾಹರಣೆ ಮೂಲಕ ನೋಡುವುದಾದರೆ. ಒಬ್ಬ ಉದ್ಯೋಗಿಯ ಮೂಲ ವೇತನ 18,000 ರೂ. ಇದ್ದರೆ ಅವರು ತಿಂಗಳಿಗೆ ಹೆಚ್ಚುವರಿಯಾಗಿ 540 ರೂ. ಪಡೆಯಬಹುದು.
35,400 ರೂ. ಮೂಲ ವೇತನ ಪಡೆಯುವ ಉದ್ಯೋಗಿ ತಿಂಗಳಿಗೆ ಸುಮಾರು 1,062 ರೂ.
ನೌಕರರು ಕನಿಷ್ಠ ಮೂಲ ವೇತನ 56,100 ರೂ. ಆಗಿದ್ದರೆ ಅವರ ತಿಂಗಳ ತುಟ್ಟಿ ಭತ್ಯೆ ಸುಮಾರು 1,683 ರೂ.ಗೆ ಏರುವುದು.

7th Pay Commission: ಅರಿಯರ್ಸ್‌ ಕೂಡಾ ಸಿಗಲಿದೆ

ಡಿಎ ಹೆಚ್ಚಳದ ಘೋಷಣೆ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಸಾಮಾನ್ಯವಾಗಿ ಆಗುತ್ತದೆ. ಆದರೆ ಹೆಚ್ಚಳ ಮಾತ್ರ ಜುಲೈನಿಂದಲೇ ಜಾರಿಗೆ ಬರುವುದು. ಹಾಗಾಗಿ ಕೇಂದ್ರ ಸರ್ಕಾರಿ ನೌಕರರಿಗೆ ಜುಲೈನಿಂದ ಬರಬೇಕಾಗಿರುವ ಬಾಕಿ ಡಿಎ ಅರಿಯರ್ಸ್‌ ರೂಪದಲ್ಲಿ ಸಿಗುತ್ತದೆ. ಪಿಂಚಣಿದಾರರು ಡಿಆರ್‌ನ ಪರಿಹಾರದ ಬಾಕಿ ಮೊತ್ತವನ್ನು ಪಡೀತಾರೆ.

7ನೇ ವೇತನ ಆಯೋಗದ ಡಿಎ ಹೆಚ್ಚಳದ ಕೊನೆಯ ಹಂತ

ಇದು 7ನೇ ವೇತನ ಆಯೋಗದ ಅಡಿಯಲ್ಲಿ ಮಾಡಲಾಗುವ ಕೊನೆಯ ಡಿಎ ಪರಿಷ್ಕರಣೆಗಳಲ್ಲಿ ಒಂದಾಗಿರಬಹುದು. ಕೇಂದ್ರ ಸರ್ಕಾರವು ಈಗಾಗಲೇ ಜನವರಿ 2026 ರಲ್ಲಿ ಡಿಎಯನ್ನು ಶೇಕಡಾ 2 ರಷ್ಟು ಹೆಚ್ಚಿಸಿತ್ತು. ಈಗ ಇನ್ನೂ ಶೇಕಡಾ 3 ರಷ್ಟು ಹೆಚ್ಚಳವನ್ನು ಅನುಮೋದಿಸಿದರೆ, 7ನೇ ವೇತನ ಆಯೋಗದ ಅಡಿಯಲ್ಲಿ ಒಟ್ಟು ಡಿಎ ಶೇಕಡಾ 63 ಕ್ಕೆ ತಲುಪುತ್ತದೆ.

8ನೇ ವೇತನ ಆಯೋಗ ಸಂಪೂರ್ಣವಾಗಿ ಜಾರಿಗೆ ಬರುವವರೆಗೆ ಪ್ರಸ್ತುತ ಡಿಎ ಅನ್ವಯವಾಗಲಿದೆ. ಇತ್ತೀಚಿನ ಹಣದುಬ್ಬರದ ಅಂಕಿಅಂಶಗಳು ಮತ್ತೊಂದು ಡಿಎ ಹೆಚ್ಚಳದ ನಿರೀಕ್ಷೆಯನ್ನು ಕೂಡಾ ಹುಟ್ಟು ಹಾಕಿದೆ. ಆದರೆ ಸರ್ಕಾರದ ಅಧಿಕೃತ ಘೋಷಣೆಯ ನಂತರವೇ ಇದರ ಬಗ್ಗೆ ಸಂಪೂರ್ಣ ಸ್ಪಷ್ಟತೆ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+