ಭಾರತೀಯರಿಗೆ ಸರಕಾರದ ಮೇಲೆ ನಂಬಿಕೆ, ಮಿಲಿಟರಿ ಆಡಳಿತದ ಬಗ್ಗೆ ಪ್ರೀತಿ

ಐದನೇ ನಾಲ್ಕು ಭಾಗಕ್ಕಿಂತ ಹೆಚ್ಚು ಭಾರತೀಯರು ಕೇಂದ್ರ ಸರಕಾರದ ಮೇಲೆ ನಂಬಿಕೆ ಇರಿಸಿದ್ದಾರೆ ಎಂಬ ಸಂಗತಿಯನ್ನು ಹೊಸ ಸಮೀಕ್ಷೆಯೊಂದರ ವರದಿ ಹೊರಹಾಕಿದೆ. ಇದೇ ವೇಳೆ ಬಹುತೇಕರು ಮಿಲಿಟರಿ ಆಡಳಿತವನ್ನು ಹಾಗೂ ಸರ್ವಾಧಿಕಾರವನ್ನು ಬೆಂಬಲಿಸಿದ್ದಾರೆ. ಪೀವ್ ರಿಸರ್ಚ್ ಸೆಂಟರ್ ನ ಸಮೀಕ್ಷೆಯಲ್ಲಿ ಈ ಸಂಗತಿ ಬಹಿರಂಗವಾಗಿದೆ.

"ಭಾರತದಲ್ಲಿ 2012ರಿಂದ ಈಚೆಗೆ ಸರಾಸರಿ ಶೇ 6.9ರಷ್ಟು ಪ್ರಗತಿ ದರವಿದೆ. ಶೇ 85ರಷ್ಟು ಮಂದಿ ಕೇಂದ್ರ ಸರಕಾರದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ" ಎಂಬ ಸಂಗತಿಯನ್ನು ಪೀವ್ ರಿಸರ್ಚ್ ನ ಸಮೀಕ್ಷೆ ಬಯಲು ಮಾಡಿದೆ. ಪ್ರಮುಖ ರಾಷ್ಟ್ರಗಳಲ್ಲಿನ ಆಡಳಿತ ಹಾಗೂ ಸರಕಾರಗಳ ವಿಶ್ವಾಸಾರ್ಹತೆ ಆಧರಿಸಿ ಈ ವರದಿ ಮಾಡಲಾಗಿದೆ.

ಸಮೀಕ್ಷೆ ಪ್ರಕಾರ, ಶೇ 55ರಷ್ಟು ಭಾರತೀಯರು ಒಂದಲ್ಲಾ ಒಂದು ವಿಧದಲ್ಲಿ ಸರ್ವಾಧಿಕಾರವನ್ನು ಬೆಂಬಲಿಸಿದ್ದಾರೆ. ಇನ್ನು ಶೇ 27ರಷ್ಟು ಮಂದಿ ಈ ದೇಶಕ್ಕೆ 'ಪ್ರಬಲ ನಾಯಕ'ರ ಅಗತ್ಯವಿದೆ ಎಂದು ಹೇಳಿಕೊಂಡಿದ್ದಾರೆ. ಅರ್ಧದಷ್ಟು ರಷ್ಯನ್ನರು (ಶೇ 48) ಆಡಳಿತವು ಪ್ರಬಲ ನಾಯಕರ ಕೈಲಿ ಇರುವುದನ್ನು ಬೆಂಬಲಿಸಿದ್ದಾರೆ. ಆದರೆ ಈ ಸಾಧ್ಯತೆ ಜನಪ್ರಿಯವಲ್ಲ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಜಾಗತಿಕ ಮಟ್ಟದಲ್ಲಿ ಸರ್ವಾಧಿಕಾರಕ್ಕೆ ವಿರೋಧ

ಜಾಗತಿಕ ಮಟ್ಟದಲ್ಲಿ ಸರ್ವಾಧಿಕಾರಕ್ಕೆ ವಿರೋಧ

ಜಾಗತಿಕ ಮಟ್ಟದಲ್ಲಿ ಸರಾಸರಿ 26ರಷ್ಟು ಮಂದಿ ವ್ಯಕ್ತಪಡಿಸಿರುವ ಅಭಿಪ್ರಾಯದ ಪ್ರಕಾರ, ಸಂಸತ್- ಕೋರ್ಟ್ ಯಾವುದರ ಪ್ರವೇಶವೂ ಇಲ್ಲದೆ ಪ್ರಬಲ ನಾಯಕರೊಬ್ಬರು ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಯೇ ಉತ್ತಮ ಆಡಳಿತ. ಆದರೆ ಪ್ರತಿ ಹತ್ತರಲ್ಲಿ ಏಳು ಮಂದಿ, ಈ ರೀತಿಯ ಆಡಳಿತ ಬಹಳ ಕೆಟ್ಟದ್ದು ಎಂದಿದ್ದಾರೆ.

ತಜ್ಞರ ಸಲಹೆ ಮೇರೆಗೆ ನಡೆಯುವ ಸರಕಾರ

ತಜ್ಞರ ಸಲಹೆ ಮೇರೆಗೆ ನಡೆಯುವ ಸರಕಾರ

ಜನರು ನಂಬುವ ಪ್ರಕಾರ, ಭಾರತ ಸರಕಾರವು ತಾಂತ್ರಿಕ ನಿಪುಣರನ್ನು ಹೊಂದಿದೆ. ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಪೈಕಿ ಈ ರೀತಿ ನಂಬುವ ಮೂರು ರಾಷ್ಟ್ರಗಳಲ್ಲಿ ಭಾರತವೂ ಒಂದು. ತಜ್ಞರ ಸಲಹೆ ಮೇರೆಗೆ ನಡೆಯುವ ಸರಕಾರಗಳನ್ನು ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಸಾರ್ವಜನಿಕರು ಬೆಂಬಲಿಸಿದ್ದಾರೆ. ಈ ರೀತಿ ಬೆಂಬಲಿಸುವ ರಾಷ್ಟ್ರಗಳ ಜನರ ಮೊದಲ ಮೂರು ಸ್ಥಾನದಲ್ಲಿ ವಿಯೆಟ್ನಾಂ, ಭಾರತ ಹಾಗೂ ಫಿಲಿಪೈನ್ಸ್ ಇದೆ.

ಆದರೆ, ಈ ರೀತಿ ಸರಕಾರ ನಡೆಸುವುದು ಸರಿಯಲ್ಲ್ ಎಂದು ಶೇ ಐವತ್ತೇಳರಷ್ಟು ಆಸ್ಟ್ರೇಲಿಯಾದವರು ವಿರೋಧಿಸಿದ್ದಾರೆ.

ಮಿಲಿಟರಿ ಆಡಳಿತದ ಒಲವು

ಮಿಲಿಟರಿ ಆಡಳಿತದ ಒಲವು

ಸಮೀಕ್ಷೆಯ ವೇಳೆ ಅರ್ಧಕ್ಕೂ ಹೆಚ್ಚು ಭಾರತೀಯರು ಹಾಗೂ ಆಫ್ರಿಕನ್ನರು ಮಿಲಿಟರಿ ಆಡಳಿತವೇ ದೇಶಕ್ಕೆ ಉತ್ತಮ ಎಂಬ ಅಭಿಪ್ರಾಯ ಪಟ್ಟಿದ್ದಾರೆ.

ಐವತ್ತು ವರ್ಷ ಮೇಲ್ಪಟ್ಟವರಿಗೆ ಒಲವಿಲ್ಲ

ಐವತ್ತು ವರ್ಷ ಮೇಲ್ಪಟ್ಟವರಿಗೆ ಒಲವಿಲ್ಲ

ಆಸಕ್ತಿಕರ ಸಂಗತಿ ಏನೆಂದರೆ ಐವತ್ತು ವರ್ಷ ಮೇಲ್ಪಟ್ಟವರಿಗೆ ಮಿಲಿಟರಿ ಆಡಳಿತದ ಬಗ್ಗೆ ಅಂಥ ಒಲವಿಲ್ಲ. ಏಕೆಂದರೆ ಅವರಿಗೆ ಸ್ವಾತಂತ್ರ್ಯ ಪಡೆಯಲು ಪಟ್ಟ ಕಷ್ಟದ ಅರಿವಿದೆ ಅಥವಾ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹತ್ವ ತಿಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+