7th Pay Commission: ಕೇಂದ್ರದ ಅನುಮೋದನೆಗೆ ಆಕ್ಷೇಪ, ಹಾಲಿ ಆಯೋಗದಡಿ ಬೋನಸ್‌ಗೆ ರೈಲ್ವೆ ನೌಕರರ ಪಟ್ಟು
ನವದೆಹಲಿ, ಅಕ್ಟೋಬರ್ 04: ಕೋವಿಡ್ ಕಾಲದಲ್ಲೂ ನಿಲ್ಲದೇ ಭಾರತೀಯ ರೈಲ್ವೆ ಇಲಾಖೆಯ ನೌಕರರು ಸೇವೆ ನೀಡಿದ್ದಾರೆ. 07ನೇ ವೇತನ ಆಯೋಗದಡಿ ಸೂಕ್ತ ರೀತಿಯಲ್ಲಿ, ಉತ್ಪಾದನಾ ಲಿಂಕ್ಡ್ ಬೋನಸ್ ನೀಡುವಂತೆ ಆಗ್ರಹಿಸಿ ಇದೇ 'ಇಂಡಿಯನ್ ರೈಲ್ವೆ ನೌಕರರು ಫೆಡರೇಷನ್ (IREF)' ಸಾಮಾಜಿಕ ಜಾಲತಾಣದಲ್ಲಿ (X) ಅಭಿಯಾನ ಆರಂಭಿಸಿದ್ದಾರೆ. ಈ ಮೂಲಕ ಕೇಂದ್ರ ರೈಲ್ವೆ ಸಚಿವರು ಸೇರಿದಂತೆ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ.
ಹೌದು, ಕೇಂದ್ರ ಸರ್ಕಾರ ಹಳೆಯ ನೀತಿ ಅನುಸರಿಸಿ 6ನೇ ವೇತನ ಆಯೋಗದಡಿ ರೈಲ್ವೆ ವಿವಿಧ ವರ್ಗದ ನೌಕರರಿಗೆ ದಸರಾ ಪ್ರಯುಕ್ತ 78 ದಿನಗಳ ಬೋನಸ್ (Rs 17,951) ನೀಡಿದೆ. ಇದರ ವಿರುದ್ಧ 'ಇಂಡಿಯನ್ ರೈಲ್ವೆ ನೌಕರರು ಫೆಡರೇಷನ್ (IREF)' ಅಭಿಯಾನ ಆರಂಭಿಸಿದೆ.

ಕೇಂದ್ರ ರೈಲ್ವೆ ಸಚಿವರಿಗೆ ನೌಕರರ ಮನವಿ
ಗುರುವಾರ 'ಇಂಡಿಯನ್ ರೈಲ್ವೆ ನೌಕರರು ಫೆಡರೇಷನ್ (IREF)' ಸದಸ್ಯರು ದಸರಾ ಬೋನಸ್ ವಿಚಾರವಾಗಿ ಕೇಂದ್ರ ಸರ್ಕಾರದ ಗಮನಸೆಳೆಯಲು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನ ಆರಂಭಿಸಿದ್ದಾರೆ. ದಸರಾ ಪ್ರಯುಕ್ತ ರೈಲ್ವೆ ನೌಕರರಿಗೆ ನೀಡುವ 78 ದಿನಗಳ ಬೋನಸ್ ಅನ್ನು ಏಳನೇ ವೇತನ ಆಯೋಗದಡಿ ಪರಿಗಣಿಸಿ ನೀಡಬೇಕು ಎಂದು ಒತ್ತಾಯಿಸಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಫೆಡರೇಷನ್ ಪತ್ರೆ ಬರೆದು ಮನವಿ ಮಾಡಿದೆ.

ಆದರೆ ಈ ನೌಕರರ ಮನವಿಗೆ ಕೇಂದ್ರ ಸಚಿವರಾಗಲಿ, ಇಲ್ಲವೇ ಕೇಂದ್ರ ಸರ್ಕಾರವಾಗಲಿ ಸದ್ಯದವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಜೋರಾಗಿದೆ. ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಗುತ್ತಿದೆ.
ಈ ಅಭಿಮಾನಕ್ಕೆ ಭಾರತೀಯ ರೈಲ್ವೇ ಸಿಗ್ನಲ್ ಮತ್ತು ಟೆಲಿಕಮ್ಯುನಿಕೇಶನ್ ನಿರ್ವಾಹಕರ ಒಕ್ಕೂಟ ಹಾಗೂ ಅಖಿಲ ಭಾರತ ರೈಲ್ವೇ ಟ್ರ್ಯಾಕ್ ನಿರ್ವಾಹಕರ ಒಕ್ಕೂಟಗಳು ಬೆಂಬಲ ವ್ಯಕ್ತಪಡಿಸಿವೆ.
ಮಾಸಿಕ 18000 ರೂ. ಆಧರಿಸಿ ಬೋನಸ್ ಕೊಡಿ
ಕೇಂದ್ರ ಸರ್ಕಾರವು ಹಳೆಯ ನೀತಿಯ ಅನುಸಾರವಾಗಿ ಮಾಸಿಕ 7,000 ರೂಪಾಯಿ ವೇತನ ಶ್ರೇಣಿಯ ಆಧಾರದಲ್ಲಿ ದಸರಾಗೆ ನಮಗೆ 78 ದಿನಗಳ ಬೋನಸ್ ಎಂದು 17,951 ರೂಪಾಯಿ ಹಣ ನೀಡುತ್ತದೆ. ಈ ಮಾಸಿಕ 7000 ರೂ. 6ನೇ ವೇತನ ಆಯೋಗದಡಿ ನೀಡುತ್ತಿದ್ದ ವೇತನವಾಗಿದೆ.
ಹಳೆಯ ನೀತಿಯಡಿ ಬೋನಸ್ ಜಾರಿಗೆ ಆಕ್ಷೇಪ
ಸದ್ಯ 7ನೇ ವೇತನ ಆಯೋಗದಡಿ ನೌಕರರ ಮಾಸಿಕ ವೇತನ 18000 ರೂಪಾಯಿ ಆಗಿದೆ. ಆದ್ದರಿಂದ ಈ ಮಾಸಿಕ ವೇತನ ಆಧಾರದಲ್ಲಿ ರೈಲ್ವೆ ಉದ್ಯೋಗಿಗಳಿಗೆ ಬೋನಸ್ ನೀಡುವಂತೆ ಮನವಿ ಮಾಡಲಾಗಿದೆ. ಸರ್ಕಾರ ಉತ್ಪಾದನಾ ಸಂಯೋಜಿತ ಆಧಾರದಲ್ಲಿ 18000 ರೂ.ಮಾಸಿಕ ವೇತನ ಪರಿಗಣಿಸಿದರೆ, ನೌಕರರಿಗೆ ಗರಿಷ್ಠ 17,951 ರೂಪಾಯಿ ಬದಲಾಗಿ, ಗರಿಷ್ಠ 46,159 ರೂಪಾಯಿ ನೀಡಬೇಕಾಗುತ್ತದೆ. ಆದರೆ ಇಷ್ಟು ಹಣ ಕೊಡಲಾಗದೇ ಕೇಂದ್ರವು ಹಳೆಯ ವೇತನದ ಆಧಾರದಲ್ಲಿ ಬೋನಸ್ ನೀಡಿದ್ದಕ್ಕೆ ನೌಕರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇಂದಿನ ಹಣದುಬ್ಬರು, ಖರ್ಚು, ನಮ್ಮ ಶ್ರಮವನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. ಕಷ್ಟದ ಸಮಯದಲ್ಲೂ ರೈಲ್ವೆಯ ಎಲ್ಲ ವಿಭಾಗದಲ್ಲಿ ಅತ್ಯಧಿಕ ಆದಾಯ ಗಳಿಕೆ ಆಗುವಂತೆ ನಾವೆಲ್ಲರು ಶ್ರಮಿಸಿದ್ದೇವೆ. ಆದ್ದರಿಂದ 7ನೇ ವೇತನ ಆಯೋಗಡಿ ಬೋನಸ್ ನೀಡುವಂತೆ ಅಭಿಮಾನದ ಮೂಲಕ ರೈಲ್ವೆ ನೌಕರರು ಕೋರಿದ್ದಾರೆ.
ಪ್ರಧಾನಿ ಮೋದಿ ಸಂಪುಟ ಒಪ್ಪಿಗೆ ಕೊಟ್ಟಿದ್ದೆಷ್ಟಕ್ಕೆ?
ಈ ಮೊದಲೇ ರೈಲ್ವೆ ನೌಕರರ ಬೇಡಿಕೆ ಈಡೇರಿಕೆಗಾಗಿ ಮನವಿ ಮಾಡಿದ್ದರೂ ಸಹ ಲೆಕ್ಕಿಸದ ಕೇಂದ್ರ ಸರ್ಕಾರ ನೆನ್ನೆ ಗುರುವಾರು (ಅಕ್ಟೋಬರ್ 03) ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯು ದೇಶದ 11,72,240 ನೌಖರರಿಗೆ ಹಳೆಯ ನೀತಿಯಡಿ 78 ದಿನಗಳ ಬೋನಸ್ ನೀಡಲು ಒಪ್ಪಿಗೆ ನೀಡಿದೆ.
ಒಬ್ಬರಿಗೆ ಆರನೇ ವೇತನ ಆಯೋಗದ ವೇತನದಡಿ ಒಬ್ಬರಿಗೆ ಗರಿಷ್ಠ 17951 ರೂಪಾಯಿಯಂತೆ ಒಟ್ಟು ನೌಕರರಿಗೆ 2028.57 ಕೋಟಿ ರೂಪಾಯಿಗೆ ಅನುಮೋದನೆ ನೀಡಿದೆ. ಈ ಆದೇಶದ ಪ್ರಕಾರ, ರೈಲ್ವೆಯ ಟ್ರ್ಯಾಕ್ ಕಮ್ಯುನಿಕೇಟರ್, ಲೊಕೋಪೈಲಟ್, ರೈಲು ವ್ಯವಸ್ಥಾಪಕರು, ರೈಲ್ವೆ ಸ್ಟೇಷನ್ ಮಾಸ್ಟರ್, ತಾಂತ್ರಿಕ ಸಹಾಯಕರು ಸೇರಿದಂತೆ ಇತರ ಸಿಬ್ಬಂದಿಗೆ 2023-2024 ರ ಸಾಲಿನ ಬೋನಸ್ ಸಿಗಲಿದೆ.












Click it and Unblock the Notifications