7th Pay Commission: ರೈಲ್ವೆ ನೌಕರರಿಗೆ ಸಿಹಿ ಸುದ್ದಿ, ದಸರಾ ಬೋನಸ್ ಬಿಗ್ ಅಪ್ಡೇಟ್ ಇಲ್ಲಿದೆ
ನವದೆಹಲಿ, ಸೆಪ್ಟಂಬರ್ 29: ಭಾರತದ ಸಾರಿಗೆ ವಿಚಾರದಲ್ಲಿ ಹೆಗ್ಗುರುತು ಮೂಡಿಸಿರುವ ರೈಲ್ವೆ ಇಲಾಖೆ ವ್ಯಾಪ್ತಿಯಡಿ ಕೆಲಸ ಮಾಡುವ ನೌಕರರ ಗುಂಪು ಈ ಬಾರಿ ವಿಶೇಷ ಬೇಡಿಕೆ ಇಟ್ಟಿದ್ದಾರೆ. ಈ ವಲಯದಲ್ಲಿ ದೂರದ ಪ್ರದೇಶಗಳಲ್ಲಿ ಸೇವೆ ನೀಡುತ್ತಿರುವ, ಹಗಲಿರುಳು ಶ್ರಮಿಸುತ್ತಿರುವ ನೌಕರರಿಗೆ ದಸರಾ ವೇಳೆ ಬೋನಸ್ ನೀಡುವಾಗ ಅನುಸರಿಸುವ ಕಾಲ್ಪನಿಕ ವೇತನ ಅಂಶವನ್ನು ಕೈ ಬಿಡಬೇಕು ಎಂದು ಅಖಿಲ ಭಾರತ ರೈಲ್ವೇಮೆನ್ ಫೆಡರೇಶನ್ (AIRF) ಕರೆ ನೀಡಿದೆ.
ಹೌದು, ಕೇಂದ್ರ ಸರ್ಕಾರುವ ಕಳೆದ 2023 ಮತ್ತು 2024ನೇ ಸಾಲಿನಲ್ಲಿ ರೈಲ್ವೆ ನೌಕರರಿಗೆ ದಸರಾ ಹಬ್ಬದ ಪೂಜೆಗಳ ದಿನಗಳ ರಜೆಗೆ ಮೊದಲೇ 78 ದಿನಗಳ ಬೋನಸ್ ಪಡೆದಿದ್ದರು. ಈ ಬೋನಸ್ ನೌಕರರ ಉತ್ಪಾದಕತೆ ಲಿಂಕ್ಡ್ ಬೋನಸ್ (PLB) ಮೇಲಿನ ಕೇವಲ 7,000 ರೂ. ಕಾಲ್ಪನಿಕ ವೇತನದ ಮಿತಿ ಆಧಾರದಲ್ಲಿ ನೀಡಲಾಗುತ್ತಿತ್ತು.

ಕೇಂದ್ರ ಒಪ್ಪಿದರೆ ರೈಲ್ವೆ ನೌಕರರಿಗೆ ಬಂಪರ್
ಸದ್ಯ ಈ ಸಾಲಿನಲ್ಲಿ ದಸರಾ ವೇಳೆ ಸರ್ಕಾರ ಬೋನಸ್ ನೀಡುವು ಹಳೆಯ ಈ ಕಾಲ್ಪನಿಕ ವೇತನ ಮಿತಿ ಕೈ ಬಡಬೇಕು ಎಂದು ಆಗ್ರಹಿಸಿದೆ. ಅಂದರೆ 7000 ವೇತನ ಬದಲಾಗಿ 18000 ವೇತನ ಆಧರಿಸಿ 78 ದಿನಗಳ ಬೋನಸ್ ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಒಪ್ಪಿದಲ್ಲಿ ಈ ಬಾರಿ ರೈಲ್ವೆ ನೌಕರರು ಕಳೆದ ಭಾರಿಗಿಂತಲೂ ಹೆಚ್ಚು ಬೋನಸ್ ಹಣ ಪಡೆಯಲಿದ್ದಾರೆ ಎಂದು ವರದಿ ಆಗಿದೆ.
ರೈಲ್ವೇ ನೌಕರರು ಅಗತ್ಯ ಸೇವೆಗಳು ಇಲ್ಲದ ಮತ್ತು ಕೊರತೆ ಇರುವ ದೂರದ ಊರುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಈ ವಲಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಅಂಥವರಿಗೆ ಬೋನಸ್ ಕೊಡುವಾಗ ಈ ಕಾಲ್ಪನಿಕ ವೇತನ ಆಧರಿಸುತ್ತಿರುದು ಸರಿಯಲ್ಲ, ವಿಷಾದನೀಯ ಎಂದು AIRF ಅಸಮಾಧಾನ ವ್ಯಕ್ತಪಡಿಸಿದೆ. ನಮಗೆ ಈ ದಸರಾಗೆ ನ್ಯಾಯಯುತ ಬೋನಸ್ ಸಿಗಬೇಕಿದೆ.

ಇದೇ ವಿಚಾರವಾಗಿ ಈ ರೈಲ್ವೆಮನ್ ಫೆಡರೇಷನ್ ಸದಸ್ಯರು, ಮುಖ್ಯಸ್ಥರು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ. ಅದರಲ್ಲಿ 6ನೇ ವೇತನ ಆಯೋಗದ ಬದಲಾಗಿ 7ನೇ ವೇತನ ಆಯೋಗದ ಆಧಾರದ ಮೇಲೆ ವಾರ್ಷಿಕ ಉತ್ಪಾದಕತೆ ಲಿಂಕ್ಡ್ ಬೋನಸ್ (PLB) ಲೆಕ್ಕಾಚಾರ ಮಾಡಬೇಕು. ಈ PLB ಅನ್ನು ಮಾಸಿಕ ಕನಿಷ್ಠ 7,000 ರೂ. ವೇತನ ಆಧಾರದಲ್ಲಿ ಲೆಕ್ಕ ಹಾಕಿ ಬೋನಸ್ ನೀಡಲಾಗುತ್ತದೆ.
7ನೇ ವೇತನ ಆಯೋಗದಡಿ ವೇತನ ಆಧರಿಸಿ ಬೋನಸ್ ಕೊಡಿ
ಇದೀಗ ಅದರ ಬದಲಾಗಿ 7ನೇ ವೇತನ ಆಯೋಗದಡಿ ಮಾಸಿಕ 18000ರೂಪಾಯಿ ವೇತನ ಲೆಕ್ಕಾಚಾರದಲ್ಲಿ ನಮಗೆ ಬೋನಸ್ ನೀಡುವಂತೆ ಅವರು ಲಿಖಿತ ಮನವಿ ಪತ್ರದಲ್ಲಿ ಕೋರಿದ್ದಾರೆ. ಏಕೆಂದರೆ 7ನೇ ವೇತನ ಆಯೋಗದಡಿ ರೈಲ್ವೆ ನೌಕರರು ಕನಿಷ್ಠ ವೇತನವನ್ನು 2016 ಜನವರಿ 1ರಿಂದ 18,000 ರೂ.ಗೆ ಹೆಚ್ಚಿಸಲಾಗಿದೆ. ಹೀಗಾಗಿ ಈ ವೇತನ ಪರಿಗಣಿಸಿ ಬೋನಸ್ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ ನೋಡುವುದಾದರೆ, ರೈಲ್ವೆ ನೌಕರರು 78 ದಿನಗಳ ವೇತನಕ್ಕೆ ಸಮಾನವಾದ PLB ಅನ್ನು ಪಡೆಯಲು ಅರ್ಹರಾಗುತ್ತಾರೆ. ಆದರೆ ಸರ್ಕಾರ 7,000 ರೂ. ಮಾಸಿಕ ವೇತನ ಆಧರಿಸುವುದರಿಂದ ನೌಕರರಿಗೆ ಕೇವಲ 17,951 ಪಾವತಿಸಲಾಗುತ್ತದೆ. ಇದು ಉದ್ಯೋಗಿ ಗಳಿಸುವ ಮಾಸಿಕ ವೇತನವನ್ನು ಪ್ರತಿನಿಧಿಸುತ್ತಿಲ್ಲ ಎಂದು ಫೆಡರೇಷನ್ ಮುಖ್ಯಸ್ಥರು ವಿವರಿಸಿದ್ದಾರೆ.
ಸರ್ಕಾರ ಇದಕ್ಕೆ ಒಪ್ಪಿದಲ್ಲಿ ರೈಲ್ವೆ ನೌಕರರ ಮಾಸಿಕ ವೇತನ 18,000 ರೂ. ಆಧರಿಸಿದರೆ ದಸಾರಗೆ 78 ದಿನಗಳ ಬೋನಸ್ ನೀಡಲು ಒಪ್ಪಿದರೆ ರೂ.17,951 ಬದಲಾಗಿ 46,159 ರೂಪಾಯಿ ನೀಡಬೇಕಿದೆ. ಇದನ್ನು ಈ ವರ್ಷದಿಂದ ನೀಡುವಂತೆ ಅವರು ಫೆಡರೇಷನ್ ಆಗ್ರಹಿಸಿದೆ.
ಭಾರತೀಯ ರೈಲ್ವೆಯು ಈ ವರ್ಷ ಸರಕು ಸಾಗಣೆಯಲ್ಲಿ 1,591 ಮೆಟ್ರಿಕ್ ಟನ್‌ಗಳ ದಾಖಲೆ ಮಾಡಿದೆ. ಇದು ಕಳೆದ ವರ್ಷಕ್ಕಿಂತ ಅತ್ಯಧಿಕವಾಗಿದೆ. ಇದಕ್ಕೆ ರೈಲ್ವೆ ಸಿಬ್ಬಂದಿ, ನೌಕರರ ಕೊಡುಗೆಯು ಇದೆ. ಈ ಹಿಂದೆಯು ಬೋನಸ್ ವಿಚಾರ ಒಂದಷ್ಟು ಅಹಿತಕರ ನಿರ್ಧಾರ ಕೈಗೊಂಡಾಗ ಮಧ್ಯಪ್ರವೇಶದಲ್ಲಿ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ದಸರಾ ಸಮೀಪಿಸಿದ್ದು, ನ್ಯಾಯಯುತ ಬೋನಸ್ ನೀಡುವಂತೆ AIRF ಮನವಿ ಮಾಡಿದೆ..
-
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು












Click it and Unblock the Notifications