7th Pay Commission: ಅಕ್ಟೋಬರ್‌ನಲ್ಲಿ ಸರ್ಕಾರಿ ನೌಕರರಿಗೆ 'ಡಿಎ' ಘೋಷಣೆ! ವೇತನದಲ್ಲಿ ರೂ.8640 ಏರಿಕೆ
ನವದೆಹಲಿ, ಸೆಪ್ಟಂಬರ್ 27: ಕೇಂದ್ರ ಸರ್ಕಾರವು ದೀಪಾವಳಿ ಹಬ್ಬಕ್ಕು ಮೊದಲೇ ಸರ್ಕಾರಿ ಉದ್ಯೋಗಿಗಳಿಗೆ ಬಂಪರ್ ನೀಡಲು ಮುಂದಾಗಿದೆ. ಇದೇ ಅಕ್ಟೋಬರ್ ತಿಂಗಳಿನಿಂದಲೇ ನೌಕರರ ವೇತನ ಹೆಚ್ಚಳ ಪ್ರಕಟಿಸುವ ಸಾಧ್ಯತೆ ಇದೆ. ಈ ಮೂಲಕ ದುಬಾರಿ ದುನಿಯಾದಲ್ಲಿ, ಹಣದುಬ್ಬರ ತಗ್ಗಿಸಲು ಸರ್ಕಾರ ನೌಕರರ ಕೈ ಹಿಡಿಯಲಿದೆ. ಹಾಗಾದರೆ ತುಟ್ಟಿಭತ್ಯೆ (Dearness Allowance) ಘೋಷಣೆ ಬಳಿಕ ನೌಕರರ ವೇತನ ಎಷ್ಟು ಹೆಚ್ಚಾಗಲಿದೆ, ಮಾಸಿಕ ಮತ್ತು ವಾರ್ಷಿಕವಾಗಿ ನೌಕರರು ಪಡೆಯಬಹುದಾದ ವೇತನದ ವಿವರ ಇಲ್ಲಿದೆ.
7ನೇ ವೇತನ ಆಯೋಗದಡಿ (7th Pay Commission) ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ, ತುಟ್ಟಿ ಪರಿಹಾರ ಹೆಚ್ಚಳ ಘೋಷಣೆಗೆ ದಿನಗಣನೇ ಆರಂಭವಾಗಿದೆ. ಮೂಲಗಳ ಪ್ರಕಾರ ಇನ್ನೊಂದು ತಿಂಗಳಲ್ಲಿ ಸೆಪ್ಟಂಬರ್ ಆರಂಭದಲ್ಲಿ ಇಲ್ಲವೇ ಅಂತ್ಯದಲ್ಲಿ ವೇತನ ಹೆಚ್ಚಳ ಘೋಷಣೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೇಂದ್ರ ಸರ್ಕಾರಿ ನೌಕರರು ಕಳೆದ ಮಾರ್ಚ್ ತಿಂಗಳಲ್ಲಿ ಜನವರಿಯ ತುಟ್ಟಿಭತ್ಯೆ (Dearness Allowance), ತುಟ್ಟಿ ಪರಿಹಾರ (Dearness Relief) ಶೇಕಡಾ 4ರಷ್ಟು ಹೆಚ್ಚಳ ಸಹಿತ ವೇತನ ಪಡೆದಿದ್ದಾರೆ. ಇದೀಗ ಜುಲೈ ತಿಂಗಳ ತುಟ್ಟಿಭತ್ಯೆ (DA hike) ಮತ್ತು ತುಟ್ಟಿ ಪರಿಹಾರವನ್ನು (DR hike) ಅಕ್ಟೋಬರ್‌ನಲ್ಲಿ ಪಡೆಯಲಿದ್ದಾರೆ. ಈ ಮೂಲಕ ದೀಪಾವಳಿಗೆ ಹಬ್ಬಕ್ಕು ಮೊದಲೇ ಕೇಂದ್ರ ಸರ್ಕಾರ ಗಿಫ್ಟ್ ನೀಡಲಿದೆ.
ಸರ್ಕಾರಿ ನೌಕರರ ವೇತನ ಹೆಚ್ಚಳದ ಅಂಕಿ ಅಂಶ
ಈ ಬಾರಿ ಶೇಕಡಾ 3ರಿಂದ 4 ರಷ್ಟು ತುಟ್ಟಿಭತ್ಯೆ ಹೆಚ್ಚಳ ಸಿಗುವ ಸಾಧ್ಯತೆ ಇದೆ. ಹಾಗಾದರೆ ಈ ಹಣ ಸೇರಿ ಕೇಂದ್ರ ಸರ್ಕಾರಿ ನೌಕರರು ಮಾಸಿಕ ಹಾಗೂ ವಾರ್ಷಿಕ ವೇತನ ಎಷ್ಟು ಹೆಚ್ಚಳ ಪಡೆಯಬಹುದು ಎಂಬ ಲೆಕ್ಕಾಚಾರ ಇಲ್ಲಿದೆ.

7ನೇ ವೇತನ ಆಯೋಗದ ಅಡಿಯಲ್ಲಿ ಶೇಕಡಾ 4ರಷ್ಟು ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಹೆಚ್ಚಳವಾಗಲಿದೆ ಎಂದು ಪರಿಗಣಿಸೋಣ. ಆಗ ಸರ್ಕಾರಿ ನೌಕರರ ಮೂಲ ವೇತನ ರೂ.18,000 ಆಗಿದ್ದರೆ, ತುಟ್ಟಿಭತ್ಯೆ ಹೆಚ್ಚಳ ಸೇರಿ ಮಾಸಿಕವಾಗಿ ನೌಕರರೊಬ್ಬರು 720 ರೂಪಾಯಿ ಪಡೆಯುತ್ತಾರೆ. ಅಂದರೆ ವರ್ಷಕ್ಕೆ ಅವರು 8,640 ರೂಪಾಯಿ ಹೆಚ್ಚುವರಿ ವೇತನ ಪಡೆಯುತ್ತಾರೆ. ಇದರಿಂದ ಕೇಂದ್ರ ಸರ್ಕಾರ ತನ್ನ ಬೊಕ್ಕಸದಿಂದ ಕೋಟ್ಯಂತರ ರೂಪಾಯಿ ವ್ಯಯಿಸಬೇಕಿದೆ.
ಶೇಕಡಾ 50 ತಲುಪಿರುವ ಡಿಎ ಪ್ರಮಾಣ
ಇದೇ ವರ್ಷ ಜನರಿಯಲ್ಲಿ ಕೇಂದ್ರ ಸರ್ಕಾರವು ತನ್ನ ನೌಕರರ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರವನ್ನು ಶೇಕಡಾ 4ರಷ್ಟು ಹೆಚ್ಚಿಸಿತ್ತು. ಇದರಿಂದಾಗಿ ಶೇ 46ರಷ್ಟಿದ್ದ ತುಟ್ಟಿಭತ್ಯೆ ಪರಿಹಾರ ಶೇಕಡಾ 50ರಷ್ಟು ಏರಿಕೆ ಆಯಿತು. ಇದರಿಂದ ನೌಕರರ ಮೂಲ ವೇತನ ಹೆಚ್ಚಾಯಿತು.
ಕೇಂದ್ರ ಸರ್ಕಾರ ಆರು ತಿಂಗಳಿಗೆ ಒಮ್ಮೆಯಂತೆ ವರ್ಷಕ್ಕೆ ಎರಡು ಭಾರಿ (ಜನವರಿ ಮತ್ತು ಜುಲೈ) ತುಟ್ಟಿಭತ್ಯೆ, ತುಟ್ಟಿ ಪರಿಹಾರ ಹೆಚ್ಚಿಸಲಾಗುತ್ತದೆ. ಇದೀಗ ಜುಲೈ ತಿಂಗಳ ಡಿಎ ಏರಿಕೆ ಬಾಕಿ ಇದ್ದು, ಅದನ್ನು ಅಕ್ಟೋಬರ್‌ನಿಂದ ಅನ್ವಯವಾಗುವಂತೆ ಹೆಚ್ಚಿಸುವ ಮೂಲಕ ನೌಕರರಿಗೆ ದೀಪಾವಳಿ ಗಿಫ್ಟ್ ನೀಡಲು ಕೇಂದ್ರ ಸರ್ಕಾರ ಸಜ್ಜಾಗಿದೆ ಎಂದು ವರದಿ ಆಗಿದೆ.
8ನೇ ವೇತನ ಆಯೋಗದ ಲೆಕ್ಕಾಚಾರ ಶುರು
ಸದ್ಯ ಏಳನೇ ವೇತನ ಆಯೋಗದಡಿ ನೌಕರರಿಗೆ ಹಲವು ಆರ್ಥಿಕ ಭದ್ರತೆ ಸಿಗುತ್ತಿದೆ. ಈ ವೇತನ ಆಯೋಗ ಮುಂದಿನ ಒಂದೂವರೆ ವರ್ಷದ ಬಳಿಕ ಅಂತ್ಯಗೊಳ್ಳಲಿದೆ. ನಂತರ 2026ರ ಜನವರಿಗೆ 8ನೇ ವೇತನ ಆಯೋಗ (8th Pay Commission) ಜಾರಿಗೆ ಬರಲಿದೆ. ಇದರಿಂದಿಂದ ಮನೆ ಬಾಡಿಗೆ ಭತ್ಯೆ, ತುಟ್ಟಿಭತ್ಯೆ, ಶಿಕ್ಷಣ ಭತ್ಯೆ, ಪಿಂಚಣಿದಾರರಿಗೆ ತುಟ್ಟಿಪರಿಹಾರ ದಂತಹ ಸೌಲಭ್ಯಗಳು ಎಷ್ಟು ಪ್ರಮಾಣದಲ್ಲಿ ಸಿಗಲಿವೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರಿ ನೌಕರರು ಈಗಲೇ ಯೋಚನೆ ನಡೆಸಿದ್ದಾರೆ.












Click it and Unblock the Notifications