7th Pay Commission: ಸರ್ಕಾರಿ ನೌಕರರಿಗೆ 3 ತಿಂಗಳ DA ಹೆಚ್ಚಳ ಬಾಕಿ ಸಹಿತ ವೇತನ ಘೋಷಣೆ
ನವದೆಹಲಿ, ಅಕ್ಟೋಬರ್ 15: ಕೇಂದ್ರ ಸರ್ಕಾರಿ ನೌಕರರಿಗೆ ಇದೇ ದೀಪಾವಳಿ ಹಬ್ಬಕ್ಕು ಮುನ್ನ ತುಟ್ಟಿಭತ್ಯೆ (DA hike) ಹಾಗೂ ತುಟ್ಟಿ ಪರಿಹಾರ (DR hike) ಪರಿಷ್ಕರಣೆ ಪಡೆಯುವ ಸಾಧ್ಯತೆ ಇದೆ. ಈ ಸಂಬಂಧ ಕೇಂದ್ರ ಸಚಿವ ಸಂಪುಟ ಸಭೆ ನಡೆದ ಬಳಿಕ ಪ್ರಧಾನಿ ಮೋದಿಯವರು ಅಕ್ಟೋಬರ್ ಅಂತ್ಯಕ್ಕೆ ಘೋಷಣೆ ಮಾಡಲಿದ್ದಾರೆ. ಈ ಡಿಎ ಏರಿಕೆ ಒಟ್ಟು ಸುಮಾರು 01 ಕೋಟಿ ನೌಕರರಿಗೆ ವರದಾನವಾಗಲಿದೆ. ಹಾಗಾದರೆ ಎಷ್ಟು ತಿಂಗಳ ವೇತನ ಬಾಕಿ ಪಡೆಯುತ್ತಾರೆ, ಪ್ರಮಾಣ ಏನು, ಮೂಲ ವೇತನ ವ್ಯತ್ಯಾಸದ ಮಾಹಿತಿ ಇಲ್ಲಿದೆ.
ಇದೇ ತಿಂಗಳಾಂತ್ಯಕ್ಕೆ ಕೇಂದ್ರ ಸರ್ಕಾರವು ಈ ವರ್ಷದ ಎರಡನೇ ತುಟ್ಟಿಭತ್ಯೆ ಹೆಚ್ಚಳ ಅಂದರೆ ಜುಲೈ ಏರಿಕೆಯನ್ನು ಘೋಷಣೆ ಮಾಡಲಿದೆ. ಈ ಮೂಲಕ ನೌಕರರಿಗೆ ದೀಪಾವಳಿಗೆ ವಿಶೇಷ ಉಡುಗೊರೆ ನೀಡಲಿದೆ. ಸರ್ಕಾರ ಶೇಕಡಾ 3ರಿಂದ 4ರಷ್ಟು ತುಟ್ಟಿಭತ್ಯೆ ಪರಿಷ್ಕರಣೆ ಮಾಡಿ ಆದೇಶಿಸಲಿದೆ. ಇದರಿಂದ ನೌಕರರು ಒಟ್ಟು 03 ತಿಂಗಳ ತುಟ್ಟಿಭತ್ಯೆ ಬಾಕಿ ಸಹಿತ ಹೆಚ್ಚಳ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.

03 ತಿಂಗಳ ಡಿಎ ಹೆಚ್ಚಳ ಸಹಿತ ವೇತನ
ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆ ಏರಿಕೆ ಘೊಷಣೆ ಆಗುತ್ತದೆ. ಜನವರಿ ಡಿಎ ಹೆಚ್ಚಳ ಹೋಳಿ ಹಬ್ಬದ ವೇಳೆ ಮಾರ್ಚ್ ಹೊತ್ತಿಗೆ ಘೋಷಣೆ ಆಗುತ್ತದೆ. ನಂತರ ಜುಲೈ ತಿಂಗಳ ತುಟ್ಟಿಭತ್ಯೆಯು ಅಕ್ಟೋಬರ್ ನಲ್ಲಿ ಘೋಷಣೆ ಆಗಲಿದೆ. ಸದ್ಯದ ತುಟ್ಟಿಭತ್ಯೆಯು ಜುಲೈನಿಂದ ಅನ್ವಯವಾಗುವಂತೆ ಘೋಷಣೆ ಆಗುತ್ತದೆ. ಹೀಗಾದರೆ, ನೌಕರರು ಮತ್ತು ಪಿಂಚಣಿದಾರರು ಜುಲೈ, ಆಗಸ್ಟ್ ಮತ್ತು ಸೆಪ್ಟಂಬರ್ ಮೂರು ತಿಂಗಳ ಬಾಕಿ ಪರಿಷ್ಕರಣೆ ಸಹಿತ ವೇತನವನ್ನು ದೀಪಾವಳಿ ಹಬ್ಬದಲ್ಲಿ ಪಡೆಯುಲಿದ್ದಾರೆ ಎಂದು ಊಹಿಸಲಾಗಿದೆ.
ಈ ಹಿಂದೆ ಸೆಪ್ಟಂಬರ್ ಹೊತ್ತಿಗೆ ದಸರಾಗೆ ತುಟ್ಟಿಭತ್ಯೆ ಹಾಗೂ ತುಟ್ಟಿಪರಿಹಾರ ಘೋಷಣೆ ಆಗಬಹುದು, ಇಲ್ಲವೇ ಹರಿಯಾಣ ವಿಧಾನಸಭಾ ಚುನಾವಣೆಗೂ ಮುನ್ನವೇ ಹೆಚ್ಚಳ ಘೋಷಣೆ ಆಗಲಿದೆ ಎಂದು ಹೇಳಲಾಗಿತ್ತು. ಅದರೆ ನಿರೀಕ್ಷೆ ಹುಸಿಯಾಗಿದ್ದು, ಇದೀಗ ದೀಪಾವಳಿಗೆ ನೌಕರರು ತುಟ್ಟಿಭತ್ಯೆ ಹೆಚ್ಚಳಕ್ಕೆ ಕಾಯುತ್ತಿದ್ದಾರೆ.

AICPI ಆಧಾರದಲ್ಲಿ ತುಟ್ಟಿಭತ್ಯೆ ಹೆಚ್ಚಳ ಘೋಷಣೆ
ಕೇಂದ್ರ ಸರ್ಕಾರವು ಸದ್ಯದ ಹಣ ದುಬ್ಬರವನ್ನು ನೌಕರರಿಗೆ ಫಿಟ್‌ಮೆಂಟ್ ಆಧಾರದಲ್ಲಿ 07ನೇ ವೇತನ ಆಯೋಗದಡಿ ತುಟ್ಟಿಭತ್ಯೆ ಹೆಚ್ಚಿಸಲಿದೆ. ಚಿಲ್ಲರೆ ಬೆಲೆಯಲ್ಲಿನ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡುವ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಆಧಾರದ ಮೇಲೆ ಈ ಹೆಚ್ಚಳ ನಿರ್ಧಾರವಾಗಿರುತ್ತದೆ.
ಈಗಾಗಲೇ ತುಟ್ಟಿಭತ್ಯೆ ಹೆಚ್ಚಳ ವಿಳಂಬ ಸಂಬಂಧ ಕೇಂದ್ರ ನೌಕರರ ಒಕ್ಕೂಟವು ಕೇಂದ್ರದ ಗಮನ ಸೆಳೆದಿದೆ. ಕಾಲ ಕಾಲಕ್ಕೆ ಪರಿಷ್ಕರಿಸಿ ನಿರ್ಧಾರ ಪ್ರಕಟಿಸುವಂತೆ ಮನವಿ ಮಾಡಿದೆ.
ಶೇ.53ಕ್ಕೆ ತಲುಪಲಿದೆ ಡಿಎ ಪ್ರಮಾಣ
ಸದ್ಯ ಡಿಎ ಏರಿಕೆ ಪ್ರಮಾಣ ಶೇಕಡಾ 50ಕ್ಕೆ ತಲುಪಿದೆ. ಇದೀಗ ಶೇಕಡಾ 3 ರಷ್ಟು ಹೆಚ್ಚಿಸಿದರೆ ಅದು 53ಕ್ಕೆ ತಲುಪಲಿದೆ. ಈಗಾಗಲೇ ಡಿಎ ಪ್ರಮಾಣ ಶೇಕಡಾ 50ಕ್ಕೆ ತಲುಪಿದ ನಂತರ ನೌಕರರ ವೇತನಕ್ಕೆ ಸಂಬಂಧಿಸಿದ ಕೆಲವು ಭತ್ಯೆಗಳು ಸ್ವಯಂ ಪ್ರೇರಿತವಾಗಿ ನಿಯಮಗಳ ಪ್ರಕಾರ ಪರಿಷ್ಕರಣಗೊಂಡಿವೆ. ಅದರ ಲಾಭ ಪಡೆಯುತ್ತಿರುವ ನೌಕರರಿಗೆ ದೀಪಾವಳಿಗೆ ಡಿಎ, ಡಿಆರ್ ಹೆಚ್ಚಳ ಪಡೆಯುತ್ತಾರೆ.
08ನೇ ವೇತನ ಆಯೋಗ (8th Pay Commission) ಜಾರಿಗೆ ಬಗ್ಗೆ ಈಗಾಗಲೇ ಬಹಳಷ್ಟು ನಿರೀಕ್ಷೆಗಳು ನೌಕರರಲ್ಲಿ ಮೂಡಿವೆ. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಮಾತ್ರ ಯಾವ ನಿರ್ಧಾರವನ್ನು ಪ್ರಕಟಿಸಿಲ್ಲ. ಸದ್ಯ ಹೊಸ ವೇತನ ಆಯೋಗ ಜಾರಿಯಾದರೆ ಮೂಲ ವೇತನ, ಇತರ ಭತ್ಯೆಗಳು ಎಷ್ಟೆಲ್ಲ ಹೆಚ್ಚಾಗಲಿವೆ ಎಂಬ ಲೆಕ್ಕಾಚಾರ ನೌಕರರಿಗೆ ಶುರುವಾಗಿದೆ..
ಇಂದು ಬುಧವಾರ ಕೇಂದ್ರ ಸಚಿವ ಸಂಪುಟವು ತನ್ನ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳಕ್ಕೆ ಒಪ್ಪಿಗೆ ನೀಡಿದೆ. ಭತ್ಯ ಪರಿಷ್ಕರಣೆಗೆ ಸರ್ಕಾರ ಅನುಮೋದನೆ ನೀಡಿದ್ದು, ಇದೀಗ ಅಧಿಕೃತ ಆದೇಶ ಹೊರ ಬೀಳಬೇಕಿದೆ. ಈ ಮೂಲಕ ದೀಪಾವಳಿಗೂ ಮೊದಲೇ ನೌಕರರು ತುಟ್ಟಿಭತ್ಯ ಪಡೆಯುವುದು ಅಧಿಕೃತವಾಗಿದೆ.












Click it and Unblock the Notifications