• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೂನ್ ತಿಂಗಳ ಕೊರೊನಾ ಪ್ರಕರಣ: ಈ ಪಂಚರಾಜ್ಯಗಳದ್ದೇ ಸಿಂಹಪಾಲು

|

ನವದೆಹಲಿ, ಜುಲೈ 8 : ಜೂನ್ ತಿಂಗಳಿನಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಪೈಕಿ ಶೇ.70 ರಷ್ಟು ಪ್ರಕರಣಗಳಲ್ಲಿ ಈ ಐದು ರಾಜ್ಯಗಳ ಸಿಂಹಪಾಲಿದೆ ಎಂದು ತಿಳಿದುಬಂದಿದೆ. ಅನ್ ಲಾಕ್ 1.0 ಘೋಷಣೆಯಾದ ಬಳಿಕ ಜೂನ್ 1 ರಂದು ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ತೆಲಂಗಾಣ, ಆಂಧ್ರಪ್ರದೇಶಗಳಲ್ಲಿ ದೇಶದ ಒಟ್ಟಾರೆ ಪ್ರಕರಣಗಳ ಪೈಕಿ ಶೇ.63 ರಷ್ಟು ಸಕ್ರಿಯ ಕೊವಿಡ್-19 ಪ್ರಕರಣಗಳು ವರದಿಯಾಗಿದ್ದವು.

ಅನ್ ಲಾಕ್-1 ರ ಅಂತ್ಯದ ವೇಳೆಗೆ ಈ ಪ್ರಮಾಣ ಶೇ.70ಕ್ಕೆ ಏರಿಕೆಯಾಗಿತ್ತು. ಜೂನ್ ತಿಂಗಳ ಅವಧಿಯಲ್ಲಿ ಈ 5 ರಾಜ್ಯಗಳಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳ ಸಂಖ್ಯೆ ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚಾಗಿದೆ. ಲಾಕ್ ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿ ಅನ್ ಲಾಕ್ 1.0 ಘೋಷಣೆ ಮಾಡಿದ ಬಳಿಕ ಜೂನ್ ತಿಂಗಳಾಂತ್ಯದವರೆಗೆ ಪತ್ತೆಯಾದ ಒಟ್ಟಾರೆ ಕೊವಿಡ್-19 ಪ್ರಕರಣಗಳ ಪೈಕಿ 5 ರಾಜ್ಯಗಳದ್ದು ಸಿಂಹಪಾಲು ಎಂಬುದು ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಈ ಕುರಿತು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಗಾಳಿಯಿಂದಲೂ ಕೊರೊನಾ ಸೋಂಕು ಹರಡುತ್ತೆ: 239 ವಿಜ್ಞಾನಿಗಳಿಂದ ಮಾಹಿತಿ

ದೆಹಲಿ ಹಾಗೂ ಆಂಧ್ರಪ್ರದೇಶಗಳಲ್ಲಿ ಸೋಂಕು ಪರೀಕ್ಷೆ ಹೆಚ್ಚು ಮಾಡಿಸಿದ್ದರಿಂದ ಹೆಚ್ಚಿನ ಪ್ರಕರಣಗಳು ವರದಿಯಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಜೂ.08 ರ ಅನ್-ಲಾಕ್ 1.0 ರ ನಂತರ ಅಲ್ಲಿ ದೇವಾಲಯಗಳು, ಶಾಪಿಂಗ್ ಮಾಲ್ ಗಳು, ರೆಸ್ಟೋರೆಂಟ್ ಗಳು,ಹೋಟೆಲ್ ಗಳನ್ನು ಪುನಃ ಪ್ರಾರಂಭಿಸಿದರ ನಂತರ ಪ್ರಕರಣಗಳು ಹೆಚ್ಚಾಗಿ ವರದಿಯಾಗಿದೆ.

ಕಳೆದ ತಿಂಗಳು ತೆಲಂಗಾಣ- ಆಂಧ್ರಪ್ರದೇಶಗಳಲ್ಲಿ ಕೊವಿಡ್-19 ಸಕ್ರಿಯ ಪ್ರಕರಣಗಳು 7 ಪಟ್ಟು ಹೆಚ್ಚಾಗಿದ್ದರೆ, ತಮಿಳುನಾಡಿನಲ್ಲಿ 4 ಪಟ್ಟು ಹೆಚ್ಚಾಗಿದೆ. ಮತ್ತೊಂದು ಮಾದರಿಯ ಅಂಕಿ-ಅಂಶಗಳ ಪ್ರಕಾರ ತಿಂಗಳ ಎರಡನೇ ಭಾಗದಲ್ಲಿ ಪ್ರಕರಣಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.

English summary
On June 1, five states Maharashtra, Tamil Nadu, Delhi, Telangana and Andhra Pradesh together reported nearly 63% of the total active Covid-19 cases in the country. By the end of Unlock-1, the percentage had gone up to 70.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X