7th Pay Commission: ಕೇಂದ್ರದ ಈ ನೌಕರರಿಗೆ ತುಟ್ಟಿಭತ್ಯೆ ಬರೋಬ್ಬರಿ ಶೆ.246 ರಷ್ಟು ಹೆಚ್ಚಳ..!
ನವದೆಹಲಿ, ನವೆಂಬರ್ 12: 7ನೇ ವೇತನ ಆಯೋಗದಡಿ ಇತ್ತೀಚೆಗೆ ಜುಲೈ ತಿಂಗಳ ತುಟ್ಟಿಭತ್ಯೆ ಹೆಚ್ಚಳ ಪಡೆದಿರುವ ಕೇಂದ್ರ ಸರ್ಕಾರಿ ನೌಕರರು ಜನವರಿ 08ನೇ ವೇತನ ಆಯೋಗದ ಜಾರಿ ಕುರಿತು ಅತೀವ ಕುತೂಹಲ ಹೊಂದಿದ್ದಾರೆ. ಮೂಲ ವೇತನದಲ್ಲಿ ಆಗಬಹುದಾದ ಬದಲಾವಣೆ ತಿಳಿದುಕೊಳ್ಳಲು ಉತ್ಸುಕವಾಗಿದ್ದಾರೆ. ಈ ಮಧ್ಯೆ ಕೇಂದ್ರವು ನಿಗದಿತ ಈ ಸರ್ಕಾರಿ ಉದ್ಯೋಗಿಗಳ ತುಟ್ಟಿಭತ್ಯೆ (DA hike) ಬರೋಬ್ಬರಿ ಶೇಕಡಾ 239 ರಿಂದ ಶೇಕಡಾ 246 ಹೆಚ್ಚಳವಾಗುತ್ತದೆ ಎಂದು ತಿಳಿಸುವ ಮೂಲಕ ಭರ್ಜರಿ ಖುಷಿ ಸುದ್ದಿಯೊಂದನ್ನು ಹಂಚಿಕೊಂಡಿದೆ.
ಹೌದು... ಈ ವಿಚಾರ ಹಳೆಯ 6ನೇ ವೇತನ ಆಯೋಗದಡಿ ಇನ್ನೂವರೆಗೆ ಯಾರೆಲ್ಲ ಉದ್ಯೋಗಿಗಳು ವೇತನ ಪಡೆಯುತ್ತಿದ್ದಾರೆಯೋ ಅವರಿಗೆ ಅನ್ವಯಿಸುತ್ತದೆ. ಹಳೆಯ ವೇತನ ಶ್ರೇಣಿಯಡಿ ವೇತನ ಪಡೆಯುತ್ತಿರುವ ಕೇಂದ್ರ ಸರ್ಕಾರಿ ನೌಕರರು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳ ನೌಕರರಿಗೆ ಅವರ ಮೂಲ ವೇತನ ಆಧಾರತದಲ್ಲಿ ತುಟ್ಟಿ ಭತ್ಯೆ (Dearness Allowance) ಶೇಕಡಾ 246ರವರೆಗೆ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೌಕರರ ಭತ್ಯೆಯಲ್ಲಿ ಆಗಿರುವ ಈ ಪರಿಷ್ಕರಣೆಯು ಇದೇ ವರ್ಷ 2024ರ ಕಳೆದ ತಿಂಗಳು ಜುಲೈ 1ರಿಂದಲೇ ಜಾರಿಗೆ ಬರುವಂತೆ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚದ ಇಲಾಖೆಯು ಆದೇಶಿಸಿದೆ ಎಂದು ವರದಿ ಆಗಿದೆ.
ಕೇವಲ ಹೆಚ್ಚಳ ಮಾತ್ರವಲ್ಲದೇ ತುಟ್ಟಿಭತ್ಯ ನಿಯಂತ್ರಣ ಕುರಿತಂತೆ ಹಿಂದಿನ ಕಚೇರಿ ಜ್ಞಾಪಕ ಪತ್ರಗಳ ಮೂಲಕ ಹೊರಡಿಸಿದ್ದ ನಿಬಂಧನೆಗಳು ಸಹ ಈ ಹೊಸ ಹೆಚ್ಚಳಕ್ಕೆ ಅನ್ವಯಿಸುತ್ತದೆ ಎಂದು ಸಚಿವಾಲಯ ತನ್ನ ಮೆಮರಾಂಡಮ್ ನಲ್ಲಿ ಉಲ್ಲೇಖಿಸಿದೆ. ಇದರ ಮೂಲಕ ಆರನೇ ವೇತನ ಆಯೋಗದಡಿ ವೇತನ ಪಡೆಯುತ್ತಿರುವ ಉದ್ಯೋಗಿಗಳು ಹಾಗೂ ಕೇಂದ್ರ ಸ್ವಾಯತ್ತ ಸಂಸ್ಥೆಗಳ ನೌಕರರಿಗೆ ಮಾಹಿತಿ ನೀಡಲಾಗಿದೆ. ತುಟ್ಟಿಭತ್ಯೆ ಹೆಚ್ಚಳವನ್ನು ಖಚಿತಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಯಾರೆಲ್ಲ 6ನೇ ವೇತನ ಆಯೋಗದಡಿ ಬರುತ್ತಾರೆ?
ಈ ಆರನೇ ವೇತನ ಆಯೋಗಡಿ ಕೇಂದ್ರ ವಿವಿಧ ಸ್ವಾಯತ್ತ ಸಂಸ್ಥೆಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳ (PSU) ನೌಕರರು ಮತ್ತು ಕೆಲವು ಕೇಂದ್ರ ಸರ್ಕಾರಿ ನಾಗರಿಕ ಉದ್ಯೋಗಿಗಳು ವೇತನ ಪಡೆಯುತ್ತಿದ್ದಾರೆ. ಅವರಿಗೆ ಈ ವಿನೂತನ ತುಟ್ಟಿಭತ್ಯೆ ಪರಿಷ್ಕರಣೆ ಸಂಬಂಧಿಸುತ್ತದೆ. ನಿಬಂಧನೆಗಳು ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.
7ನೇ ವೇತನ ಆಯೋಗ: ತುಟ್ಟಿಭತ್ಯ 53ರಷ್ಟು ಏರಿಕೆ
ಒಂದು ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ತುಟ್ಟಿಭತ್ಯೆ ಪರಿಷ್ಕರಿಸಿ ಘೋಷಿಸಿತ್ತು. ಬರೋಬ್ಬರಿ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಮೂಲ ವೇತನದ ಶೇಕಡಾ 3ರಷ್ಟು ಏರಿಕೆ ಮಾಡಿತ್ತು. ಇದರಿಂದ ಡಿಎ ಪ್ರಮಾಣ ಶೇಕಡಾ 53 ರಷ್ಟು ಹೆಚ್ಚಳಗೊಂಡಿತು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕೇಂದ್ರ ಸರ್ಕಾರವು ನೌಕರರು ಆರ್ಥಿಕ ಹಣದುಬ್ಬರ ಸರಿದೂಗಿಸಲು ಅನುಕೂಲವಾಗುವಂತೆ ವರ್ಷದಲ್ಲಿ ಎರಡು ಬಾರಿ ಅಂದರೆ ಆರು ತಿಂಗಳಿಗೆ ಒಮ್ಮೆಯಂತೆ ಜನವರಿ ಹಾಗೂ ಜುಲೈನಲ್ಲಿ ಡಿಎ ಪರಿಷ್ಕರಣೆ ಮಾಡುತ್ತದೆ. ಸ್ವಲ್ಪ ತಡವಾಗಿ ಡಿಎ ಹೆಚ್ಚಿಸಿದರೂ ಅದನ್ನು ಜನವರಿ 1 ಮತ್ತು ಜುಲೈ 1 ರಿಂದ ಅನ್ವಯವಾಗುವಂತೆಯೇ ಅನುಷ್ಠಾನಗೊಳಿಸುತ್ತಾ ಬಂದಿದೆ.
ಮುಂದಿನ ಜನವರಿ ಮತ್ತೆ ತುಟ್ಟಿಭತ್ಯೆ ಹೆಚ್ಚಳ
ಮುಂದಿನ ವರ್ಷ 2025ರ ಜನವರಿ ತುಟ್ಟಿಭತ್ಯೆ ಹೆಚ್ಚಳವು ಜನವರಿ ತಿಂಗಳಲ್ಲಿ ಏರಿಕೆ ಆಗಲಿದೆ. ಅದರ ನಿರ್ಧಾರ ಮಾರ್ಚ್‌ನಲ್ಲಿ ಪ್ರಕಟಗೊಳ್ಳುವ ನಿರೀಕ್ಷೆ ಇದೆ. ಇತ್ತ ಕೇಂದ್ರ ಸರ್ಕಾರ ಎಂಟನೇ ವೇತನ ಆಯೋಗ ಜಾರಿಗೆ ಇಲ್ಲವೇ ಶಿಫಾರಸು ಪರಿಗಣಿಸುವ ಇತ್ಯಾದಿ ನಿರ್ಧಾರಗಳನ್ನು ಪ್ರಕಟಿಸಲಿದೆ ಎಂದು ನೌಕರರು ಕಾಯುತ್ತಾರೆ ಕುಳಿತಿದ್ದಾರೆ. ಈ ಬಗ್ಗೆ ಚರ್ಚಿಸಲು ಕೆಲವೇ ವಾರಗಳಲ್ಲಿ ಕೇಂದ್ರ ಸರ್ಕಾರಿ ನೌಕರರ ಸಂಘಗಳು ಸರ್ಕಾರದ ಜತೆ ಸಭೆ ನಡೆಸಲಿವೆ.
ಈಗಾಗಲೇ ಕೇಂದ್ರ ಸರ್ಕಾರಿ ನೌಕರರ ಸಂಘಗಳು, ಯೂನಿಯನ್‌ಗಳು ಎಂಟನೇ ವೇತನ ಆಯೋಗ ಸಂಬಂಧ ಒಂದಷ್ಟು ಶಿಫಾರಸುಗಳು, ಮನವಿಗಳನ್ನು ನೀಡಿದ್ದಾರೆ. ಆದರೆ ಆ ಬಗ್ಗೆ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೊಸ ವೇತನ ಆಯೋಗ ಜನವರಿ 2026ರ ಹೊತ್ತಿಗೆ ಅನುಷ್ಠಾನಗೊಳ್ಳಬೇಕು. ಇಷ್ಟೊತ್ತಿಗಾಗಲೇ ಶೀಫಾರಸು, ಅಧಿಕೃತ ಘೋಷಣೆ, ವಿವಿಧ ಅಂಶಗಳ ಪರಿಗಣನೆ ವಿಚಾರಗಳು ಬಹಿರಂಗಗೊಳ್ಳಬೇಕಿತ್ತು. ಆದರೆ ಇದ್ಯಾವುದು ಆಗದ ಕಾರಣ, ನೌಕರರ ಸಂಘವು ಸಭೆ ನಡೆಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications