ಭಾರತದಲ್ಲಿ 73 ಲಕ್ಷಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ
ನವದೆಹಲಿ, ಅಕ್ಟೋಬರ್ 15: ಭಾರತದಲ್ಲಿ ಇಂದು 67,708 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಂದೇ ದಿನದಲ್ಲಿ 680 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು 73,07,098 ಪ್ರಕರಣಗಳಿವೆ. ಒಟ್ಟು 73,07,098 ಕೊರೊನಾ ಸೋಂಕಿತರಿದ್ದಾರೆ. 63,83,442 ಮಂದಿ ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದಾರೆ. 1,11,266 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಅಕ್ಟೋಬರ್ 14ರಂದು 9,12,26,305 ಮಾದರಿಯನ್ನು ಪರೀಕ್ಷಿಸಲಾಗಿದೆ. ಇಲ್ಲಿಯವರೆಗೆ 11,36,183 ಮಾದರಿಯನ್ನು ಪರೀಕ್ಷಿಸಲಾಗಿದೆ. ಜಗತ್ತಿನಾದ್ಯಂತ 38.4 ಮಿಲಿಯನ್ ಕೊರೊನಾ ಸೋಂಕಿತರಿದ್ದಾರೆ.

26.6 ಮಿಲಿಯನ್ ಮಂದಿ ಗುಣಮುಖರಾಗಿದ್ದಾರೆ. 1.09 ಮಿಲಿಯನ್ ಮಂದಿ ಸಾವನ್ನಪ್ಪಿದ್ದಾರೆ. ಬುಧವಾರ ಒಂದೇ ದಿನ 63,509 ಕೊರೊನಾ ಸೋಂಕಿತರು ಪತ್ತೆ ಯಾಗಿದ್ದಾರೆ. ಕಳೆದ 24 ಗಂಟೆಯಲ್ಲಿ 730 ಮಂದಿ ಸಾವನ್ನಪ್ಪಿದ್ದರು.
Recommended Video
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಕರೋನಾ | Oneindia Kannada












Click it and Unblock the Notifications